Viral Video; ಪಕ್ಕಾ ಸಂಸ್ಕೃತ ಭಾಷೆಯಲ್ಲಿ ಕ್ರಿಕೆಟ್ ಕಾಮೆಂಟರಿ..! ಸೂಪರ್ ವಿಡಿಯೋ ಮಿಸ್ ಮಾಡದೆ ನೋಡಿ.
ಪ್ರತಿಯೊಂದು ಆಟ ತನ್ನದೇ ಆದ ಒಂದು ಮಹತ್ವವನ್ನು ಪಡೆದಿದೆ. ಪ್ರಸ್ತುತ ಆಟಕ್ಕೆ ಕಾಮೆಂಟರಿ ಟಚ್ ಸಿಕ್ಕಾಗ ಅದು ಮತ್ತಷ್ಟು ಮೆರಗನ್ನು ತಂದುಕೊಳ್ಳುತ್ತದೆ. ಭಾಷೆಯ ಮೇಲೆ ಪ್ರಭುತ್ವ ಹೊಂದಿದ ವ್ಯಕ್ತಿ ಒಂದು ವೇಳೆ ಕಾಮೆಂಟರಿ ಮಾಡುತ್ತಿದ್ದರೆ ಕೇಳುಗನಿಗೆ ಆಟವನ್ನು ಮೈದಾನದಲ್ಲಿಯೇ ಕುಳಿತು ವೀಕ್ಷಿಸಿದಂತಹ ಅನುಭವ ಆಗುತ್ತದೆ. ಸದ್ಯ ಇಂಟರ್ನೆಟ್ ನಲ್ಲಿ ಸಂಸ್ಕೃತ ಕಾಮೆಂಟರಿಯ ವಿಡಿಯೋ ಒಂದು ತೂಫಾನ್ ವೈರಲ್ ಆಗುತ್ತಿದೆ. ಈ ಕಾಮೆಂಟರಿಯಲ್ಲಿ ಕ್ರಿಕೆಟ್ ವರ್ಣನೆಯನ್ನು ಸಂಸ್ಕೃತ ಭಾಷೆಯಲ್ಲಿ ಮಾಡಲಾಗುತ್ತಿದೆ. ಹೀಗಾಗಿ ಪ್ರಸ್ತುತ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ.
ಪ್ರಸ್ತುತ ವಿಡಿಯೋ ಬೆಂಗಳೂರಿನಲ್ಲಿಯದು ಎಂದು ತಿಳಿದು ಬಂದಿದೆ. ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಲಕ್ಷ್ಮಿ ನಾರಾಯಣ ಬಿ ಎಸ್ ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಅವರು ಶೇರ್ ಮಾಡಿದ ಎರಡೇ ದಿನಗಳಲ್ಲಿ ವಿಡಿಯೋ 6 ಲಕ್ಷಕ್ಕೂ ಮೀರಿ ವೀಕ್ಷಿಸಲ್ಪಟ್ಟಿದೆ. ವಿಡಿಯೋದಲ್ಲಿ ಕೇಳಿ ಬರುವ ವ್ಯಕ್ತಿಯ ಸಂಸ್ಕೃತ ಕಾಮೆಂಟರಿ ಕಿವಿಗಳಿಗೆ ತುಂಬಾ ಇಂಪು ನೀಡುತ್ತಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 20,000ಕ್ಕೂ ಹೆಚ್ಚು ಲೈಕ್ ಗಳು ಹೊಂದಿದೆ.
ನೋಡಿ ಈ ವಿಡಿಯೋ…
Sanskrit and cricket pic.twitter.com/5fWmk9ZMZy
— LAKSHMI NARAYANA B.S (BHUVANAKOTE) (@chidsamskritam) October 2, 2022
ಈ ವಿಡಿಯೋದಲ್ಲಿ ಕೇಳಿ ಬರುವ ಸಂಸ್ಕೃತ ಭಾಷೆಯ ಕಾಮೆಂಟರಿ ಕೇಳುಗರಿಗೆ ತುಂಬಾ ಇಷ್ಟವಾಗುತ್ತಿದೆ. ವಿಡಿಯೋದಲ್ಲಿ ಆಟಗಾರರು ಗಲ್ಲಿ ಕ್ರಿಕೆಟ್ ನಲ್ಲಿ ಭಾಗವಹಿಸಿದ್ದಾರೆ. ಅವರ ಆಟವನ್ನು ವೀಕ್ಷಿಸಲು ಕ್ರಿಕೆಟ್ ರಸಿಕರು ಸುತ್ತಮುತ್ತಲ ಬಿಲ್ಡಿಂಗ್ ನಲ್ಲಿ ನಿಂತಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ತುಂಬಾ ಸುಂದರವಾಗಿ ಸಂಸ್ಕೃತ ಭಾಷೆಯಲ್ಲಿ ನಿರರ್ಗಳವಾಗಿ ಕ್ರಿಕೆಟ್ನ ವ್ರತ್ತಾಂತವನ್ನು ತುಂಬಾ ಪ್ರೊಫೆಷನಲ್ ರೀತಿಯಲ್ಲಿ ಬಿತ್ತರಿಸುತ್ತಿದ್ದಾರೆ. ಈ ಕಾಮೆಂಟರಿ ಕೇಳಿದಾಗ ಸಂಸ್ಕೃತ ಭಾಷೆ ಎಷ್ಟೊಂದು ಸರಳವಾಗಿದೆ ಎಂಬ ಅನುಭವ ಪ್ರತಿಯೊಬ್ಬರಿಗೂ ಆಗುವುದು ನಿಜ. ಕಾಮೆಂಟರಿ ಕೇಳಿದ ಯೂಸರ್ಗಳು ತುಂಬಾ ವಿಶೇಷವಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಯೂಸರ್ಗಳು ನೀಡಿದ ಪ್ರತಿಕ್ರಿಯೆಯಲ್ಲಿ ಹೆಚ್ಚು ಕಡಿಮೆ ಎಲ್ಲರೂ ಸಂಸ್ಕೃತ ಕಾಮೆಂಟರಿ ನಿಜಕ್ಕೂ ಸೂಪರ್ ಎಂದಿದ್ದಾರೆ.