ಒಡಹುಟ್ಟಿದ 3 ಸಹೋದರಿಯರು ಏಕಕಾಲಕ್ಕೆ ಪಾಸ್ ಮಾಡಿದರು ಇನ್ಸ್ಪೆಕ್ಟರ್ ನೇಮಕಾತಿಯ ಪರೀಕ್ಷೆ, ತಂದೆ ರೈತ ತಾಯಿ ಗೃಹಿಣಿ……!!
ನಿಮ್ಮ ಕನಸನ್ನು ನನಸಾಗಿಸುವ ಸಂಕಲ್ಪ ನಿಮ್ಮಲ್ಲಿದ್ದರೆ, ನಿಮಗೆ ಯಶಸ್ಸು ಸಿಗುವದು ಖಚಿತ. ಅಂತಹದೇ ಸಾಹಸ ಮಾಡಿ ಇಡೀ ದೇಶಕ್ಕೆ ಹೆಸರಾದ ಮೂವರು ಸಹೋದರಿಯರ ಬಗ್ಗೆ ನಾವು ಇಂದು ನಿಮಗೆ ತಿಳಿಸಲಿದ್ದೇವೆ. ಬಿಹಾರ ನಲ್ಲಿಯ ಸಲುನಾ ಎಂಬ ಊರಿನಲ್ಲಿಯ ವಾಸವಾಗಿದ್ದ ಒಂದು ಸಾಧರಣವಾದ ಮನೆಯಲ್ಲಿ ಅಂದರೆ ತಂದೆ ರೈತ ತಾಯಿ ಗೃಹಿಣಿ ಈ ದಂಪತಿಗಳಿಗೆ ಈ ಮೂವರು ಸಹೋದರಿಯರು ಜನಿಸಿದರು. ಹಿರಿಯವಳು ಫುಲೆನಾ, ಕಿರಿಯವರು ಮುನ್ನಿ ಕುಮಾರಿ ಮತ್ತು ಜ್ಯೋತಿ ಕುಮಾರಿ.
ಈ ಮೂವರು ಸಹೋದರಿಯರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಿಡಲ್ ಸ್ಕೂಲ್ ಸಲೋನಾದಲ್ಲಿ ಪೂರ್ಣಗೊಳಿಸಿದರು. ನಂತರ ಶಕರಪುರದಲ್ಲಿ ತಮ್ಮ ಮ್ಯಾಟ್ರಿಕ್ ಅಭ್ಯಾಸವನ್ನು ಪೂರ್ಣ ಮಾಡಿದರು. ನಂತರ ಅವರು MBDI ಕಾಲೇಜ್ ರಾಂಪುರ ಬಕ್ರಿಯಿಂದ ತಮ್ಮ ಇಂಟರ್ ಅನ್ನು ಪೂರ್ಣಗೊಳಿಸಿದರು ಮತ್ತು ಯುಆರ್ ಕಾಲೇಜ್ ರೋಸ್ರಾದಿಂದ ಪದವಿ ಪೂರ್ಣ ಮಾಡಿದರು. ಈ ಮೂವರು ಸಹೋದರಿಯರು ಇನ್ಸ್ಪೆಕ್ಟರ್ ಪೂರ್ವ ಪರೀಕ್ಷೆಯನ್ನು ಒಟ್ಟಿಗೆ ನೀಡಿದರು ಮತ್ತು ಮೂವರೂ ಸಹ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಮೂವರು ಸಹೋದರಿಯರು ಪ್ರಸ್ತುತ ಬಿಹಾರ ಪೊಲೀಸ್ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜ್ಯೋತಿ ಮತ್ತು ಮುನ್ನಿ ಇಬ್ಬರೂ ಜಯನಗರದಲ್ಲಿ ನಿಯೋಜನೆಗೊಂಡಿದ್ದು, ಫುಲೇನಾ ಅದೇ ಪೊಲೀಸ್ ಸೇವೆಯಲ್ಲಿ ಸಾರ್ಜೆಂಟ್ ಮೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ.
ಆದರೆ, ಮೂವರೂ ಸಹೋದರಿಯರು ತಮ್ಮ ಹಠದ ಬಲದಿಂದ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಸದ್ಯಕ್ಕೆ ಉತ್ತಮವಾದ ಹುದ್ದೆಯಲ್ಲಿದ್ದಾರೆ. ಇದಕ್ಕೆ ಅವರ ಗ್ರಾಮಸ್ಥರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಮೂವರು ಸಹೋದರಿಯರನ್ನು ಹೊಗಳುತ್ತಿದ್ದಾರೆ. ಈ ಮೂವರು ಸಹೋದರಿಯರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.