VIDEO; ಎಪ್ಪೋ! ಹುಡುಗಿಯರ ಮುಂದೆ ಬ್ಯಾಕ್ ಫ್ಲಿಪ್ ಮಾಡಲು ಹೋದ ಯುವಕ; ಎಂಡ್ ನೋಡಲು ತಪ್ಪಿಸಬೇಡಿ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅನೇಕ ವಿಡಿಯೋಗಳು ತುಂಬಾನೇ ಹಾಸ್ಯದಿಂದ ಕೂಡಿರುತ್ತವೆ. ಇಂಥ ವಿಡಿಯೋಗಳು ನೋಡಿದ ವ್ಯಕ್ತಿ ನಕ್ಕು ನಕ್ಕು ಸುಸ್ತಾಗಿ ಬಿಡುತ್ತಾನೆ. ವ್ಯಕ್ತಿ ಕೆಲವೊಂದು ಸಂದರ್ಭದಲ್ಲಿ ಏನೋ ಮಾಡಲು ಹೋಗಿ ತುಂಬಾ ಫಜೀತಿಗೆ ಒಳಗಾಗುತ್ತಾನೆ. ನಂತರ ಇಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಎಲ್ಲರನ್ನೂ ನಕ್ಕು ನಗಿಸುತ್ತವೆ.
ಸದ್ಯ ಇಲ್ಲಿ ನೋಡುವ ವಿಡಿಯೋ ಸಹಿತ ನಿಮ್ಮನ್ನು ತುಂಬಾನೇ ನಗಿಸುವುದರಲ್ಲಿ ಸಂಶಯವಿಲ್ಲ. ಕಾರಣ ಇಲ್ಲಿಯ ದೃಶ್ಯವೇ ಹಾಗಿದೆ. ವಿಡಿಯೋದ ದೃಶ್ಯದಲ್ಲಿ ಒಂದು ದೊಡ್ಡ ಪೆಂಡಾಲ್ ಕಂಡು ಬರುತ್ತದೆ. ಬಹುಶಃ ಅದು ಗರ್ಭ ಆಡುವ ಸಲುವಾಗಿ ತಯಾರಿಸಲಾಗಿದೆ ಎಂದು ತಿಳಿದು ಬರುತ್ತದೆ. ಈ ಸಂದರ್ಭದಲ್ಲಿ ಹುಡುಗನೊಬ್ಬ ಎಲ್ಲರ ಮುಂದೆ ಬ್ಯಾಕ್ ಫ್ಲಿಪ್ ಮಾಡಲು ತಯಾರಾಗುತ್ತಾನೆ. ಆತ ಮಾಡುವ ಸ್ಟಂಟ್ ನೋಡಲು ಅಲ್ಲಿದ್ದವರೆಲ್ಲ ತಯಾರಾಗಿರುತ್ತಾರೆ. ಹುಡುಗ ಸ್ಟಂಟ್ ಮಾಡುವ ಮೊದಲು ಸ್ವಲ್ಪ ಅತ್ತಿತ್ತ ನೋಡಲಿಲ್ಲ. ಎಡವಟ್ಟು ಆದದ್ದು ಅಲ್ಲಿಯೇ. ನಂತರ ಹುಡುಗ ಒಮ್ಮೆಲೆ ಆಕ್ಟಿವ್ ಆಗಿ ಬ್ಯಾಕ್ ಫ್ಲಿಪ್ ಮಾಡಲು ಜಂಪ್ ಮಾಡುವುದೇ ತಡ ಹಿಂದಿನಿಂದ ವ್ಯಕ್ತಿಯೊಬ್ಬ ನಡೆದುಕೊಂಡು ಬರುತ್ತಿರುವದನ್ನು ನೋಡುವುದಿಲ್ಲ. ಹುಡುಗ ಆತನ ಮುಖದ ಮೇಲೆ ಜಿಗದುಬಿಡುತ್ತಾನೆ. ಈ ಸಂದರ್ಭದಲ್ಲಿ ಹಿಂದಿನ ವ್ಯಕ್ತಿ ಒಮ್ಮೆಲೆ ತಬ್ಬಿಬ್ಬಾಗಿಬಿಡುತ್ತಾನೆ. ಇತ್ತ ಜಂಪ್ ಮಾಡಿದ ಹುಡುಗ ತತ್ ಕ್ಷಣವೇ ಡಮಾರ್ ಕೆಳಗೆ ಬಿದ್ದುಬಿಡುತ್ತಾನೆ.
ನೋಡಿ ಈ ವಿಡಿಯೋ…
View this post on Instagram
ಈ ಸುಂದರವಾದ ವಿಡಿಯೋವನ್ನು ಸೋಶಿಯಲ್ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 7.9 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. 4 ಲಕ್ಷ 35 ಸಾವಿರ ಲೈಕ್ಸ್ಗಳನ್ನು ಹೊಂದಿದೆ.