Video; ಕುದುರೆಯ ಬ್ಯಾಕ್ ಕಿಕ್ ನೋಡಿರಬೇಕು; ಆದರಿಲ್ಲಿ ವ್ಯಕ್ತಿಗೆ ನೀಡಿದ ಫ್ರಂಟ್ ಕಿಕ್ ಒಮ್ಮೆ ನೋಡಿ, ಸಾಲಿಡ್ ಸಖತ್ತಾಗಿದೆ.

ಪ್ರಾಣಿಗಳು ಮನುಷ್ಯನ ಜೊತೆಗೆ ಯಾವ ಸಮಯದಲ್ಲಿ ಹೇಗೆ ವರ್ತಿಸುತ್ತವೆ ಎಂಬುದು ಹೇಳಲು ಸಾಧ್ಯವಿಲ್ಲ. ಮನುಷ್ಯ ಪ್ರಾಣಿಗಳ ಜೊತೆಗೆ ಸ್ವಲ್ಪ ಏನಾದರೂ ತಪ್ಪಾಗಿ ವರ್ತಿಸಿದರೆ ಆಯಿತು ಅದರ ಪ್ರತಿಫಲ ತಕ್ಷಣ ಸಿಕ್ಕೇ ಸಿಗುತ್ತದೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕುದುರೆಯ ಮುಂದೆ ನಿಂತು ಬಹುಶಃ ಅದಕ್ಕೆ ಏನೋ ಒಂದು ರೀತಿಯ ತಾಪತ್ರಯ ನೀಡಿದ್ದಾನೆ. ವಿಡಿಯೋದಲ್ಲಿ ಕಂಡು ಬರುವ ಹಾಗೆ ಕುದುರೆಯ ಮೂಗಿನಲ್ಲಿ ವ್ಯಕ್ತಿಯು ಬೆರಳಾಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕುದುರೆ ತನ್ನ ಮುಂದಿನ ಕಾಲಿನಿಂದ ವ್ಯಕ್ತಿಗೆ ಸಾಲಿಡ್ ಆಗಿ ಕಿಕ್ ಕೊಟ್ಟಿದೆ. ಆ ಕಿಕ್ ನೇರವಾಗಿ ವ್ಯಕ್ತಿಗೆ ತುಂಬಾ ನಾಜೂಕದ ಸ್ಥಳದಲ್ಲಿ ಬಿದ್ದಿದೆ. ಹೀಗಾಗಿ ವ್ಯಕ್ತಿಯು ಬೆಚ್ಚಿ ಬೀಳುವುದರೊಂದಿಗೆ ನೋವಿನಿಂದಾಗಿ ಅಲ್ಲಿಂದ ಕ್ಷಣದಲ್ಲಿ ಪಲಾಯನ ಮಾಡಿದ್ದಾನೆ. ವಿಡಿಯೋ ನೋಡಿದ ನಂತರ ನಗುತಡೆಯುವುದು ಅಸಾಧ್ಯವಾಗುತ್ತದೆ.

ವೀಡಿಯೋ ನೋಡಿ

 

View this post on Instagram

 

A post shared by Ankita R. (@ankita_18110)

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ankita_18110 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಜನರು ವೀಕ್ಷಿಸಿದ್ದು ಸಾಕಷ್ಟು ಜನರು ಲೈಕ್ ಮಾಡಿದ್ದಾರೆ.