Nice Video; ತುಂಬಿದ ಟ್ರೈನ್ ನ ಸೀಟ್ ಮೇಲೆಯೇ ಮಲಗಿತ್ತು ನಾಯಿ; ಅದನ್ನೆಬ್ಬಿಸದೆ ನಿಂತೇ ಪ್ರವಾಸ ಮಾಡಿದ ಯಾತ್ರಿಕರು.

ನೀವು ಒಂದು ವೇಳೆ ಪ್ರಾಣಿಗಳ ವೀಡಿಯೊಗಳನ್ನು ನೋಡಲು ಇಷ್ಟ ಪಡುವವರಾಗಿದ್ದರೆ ನಿಮಗಾಗಿ ಒಂದು ಸುಂದರವಾದ ವಿಡಿಯೋ ಇಲ್ಲಿದೆ ಎನ್ನಬಹುದು. ಕಾರಣ ಇಲ್ಲಿ ಜನರು ನಿಜವಾಗಿಯೂ ಮಾನವೀಯತೆಯನ್ನು ಮೆರೆದಿದ್ದಾರೆ. ಎಷ್ಟೋ ಸಲ ಮನುಷ್ಯರು ನಡೆದುಕೊಂಡ ಅಮಾನವೀಯತೆಯ ದುರ್ವರ್ತನೆಯ ದೃಶ್ಯಗಳನ್ನೇ ಮೀಡಿಯಾದಲ್ಲಿ ಹೆಚ್ಚಾಗಿ ತೋರಿಸುತ್ತಾರೆ. ಒಳ್ಳೆಯ ಜನರೂ ಇಲ್ಲಿ ಇದ್ದಾರೆ ಎಂಬುದನ್ನು ಮರೆತು ಬಿಡುತ್ತಾರೆ. ಆದರೆ ಈ ವಿಡಿಯೋ ನೋಡಿದಾಗ ನಿಜಕ್ಕೂ ಮನಸ್ಸಿಗೆ ತುಂಬಾ ಒಳ್ಳೆಯ ಸಮಾಧಾನ ಸಿಗುವದು ನಿಶ್ಚಿತ.

ವಿಡಿಯೋದಲ್ಲಿ ಜನರಿಂದ ತುಂಬಿದ ಟ್ರೈನ್ ಬೋಗಿ ನೋಡಬಹುದು. ಈ ಬೋಗಿಯಲ್ಲಿ ಒಂದು ವಿಶೇಷತೆಯೂ ಅದರ ಜೊತೆಗೆ ಕಾಣಲಿದೆ. ಅದೇನೆಂದರೆ, ಜನರಿಂದ ತುಂಬಿದ ಟ್ರೈನ್ ನಲ್ಲಿ ನಾಯಿಯೊಂದು ಇಬ್ಬರ ಸೀಟ್ ಮೇಲೆ ಸಖತ್ ಅಡ್ಡಲಾಗಿ ಗಾಢ ನಿದ್ರಿಸುತ್ತಿದೆ. ಅಲ್ಲಿ ನಿಂತ ಅನೇಕ ಜನರು ಸೀಟ್ ಗಾಗಿ ಕಾಯುತ್ತಿದ್ದಾರೆ ವಿನಃ ಯಾರೊಬ್ಬರೂ ನಾಯಿಯನ್ನು ನಿದ್ರೆಯಿಂದ ಎಬ್ಬಿಸಲು ಮುಂದಾಗಿಲ್ಲ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋವನ್ನು ಸ್ಟೆಫಾನೋ ಎಸ್ ಮ್ಯಾಗಿ ಹೆಸರಿನ ವ್ಯಕ್ತಿಯು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾನೆ. ಈ ವೀಡಿಯೋವನ್ನು ಇಲ್ಲಿಯವರೆಗೆ 42 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಕೆಲವರು ಇಲ್ಲಿ ನಿಂತೇ ಪ್ರವಾಸ ಮಾಡುತ್ತಿದ್ದರೂ ನಾಯಿಗೆ ಮಾತ್ರ ನಿದ್ರೆಯಿಂದ ಎಬ್ಬಿಸಿ ಅದಕ್ಕೆ ಡಿಸ್ಟರ್ಬ್ ಮಾಡುವದರ ಬಗ್ಗೆ ಯಾರೊಬ್ಬರೂ ಮುಂದಾಗದೆ ನಿಜಕ್ಕೂ ಮಾನವೀಯತೆಯನ್ನು ಮೆರೆದಿದ್ದಾರೆ ಎಂದು ಅನೇಕರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.