Video; ಬಸ್ಸಿನಲ್ಲಿಯೇ ‘ಆನ್ ಡ್ಯೂಟಿ’ ರೀಲ್ಸ್ ಮಾಡುವ reels ಸ್ಟಾರ್ ಲೇಡಿ ಕಂಡಕ್ಟರ್ ಗೆ ಮಾಡಲಾಯಿತು ಅಮಾನತು.

ಸ್ವಂತದ ವಿಡಿಯೋ ತಯಾರಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕಾರಣಕ್ಕಾಗಿ ಲೇಡಿ ಬಸ್ ಕಂಡಕ್ಟರ್ ಗೆ ಅಮಾನತು ಮಾಡಿದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಪ್ರಸ್ತುತ ವರದಿ ನೆರೆಯ ಮಹಾರಾಷ್ಟ್ರದಿಂದ ತಿಳಿದುಬಂದಿದೆ. ಇಲ್ಲಿಯ ಉಸ್ಮನಾಬಾದ್ ಜಿಲ್ಲೆಯ ಕಳಂಬ ತಾಲೂಕಿನ ಸ್ಟೇಟ್ ಟ್ರಾನ್ಸ್ಪೋರ್ಟ್ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಮಂಗಲ್ ಗಿರಿ ಹೆಸರಿನ ಲೇಡಿ ಕಂಡಕ್ಟರ್ ಜೊತೆಗೆ ಈ ಇನ್ಸಿಡೆಂಟ್ ನಡೆದಿದೆ. ಸ್ಟೇಟ್ ಟ್ರಾನ್ಸ್ಪೋರ್ಟ್ ನ ವರ್ಚಸ್ಸಿಗೆ ಧಕ್ಕೆ ತಂದ ಕಾರಣಕ್ಕೆ ಆಕೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಮಹಿಳಾ ಕಂಡಕ್ಟರ್ ಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾವಧಿ ಫಾಲೋವರ್ಸಗಳಿದ್ದಾರೆ. ಆಕೆ ಬೇರೆ ಬೇರೆ ಹಾಡುಗಳ ಮೇಲೆ ವಿಡಿಯೋ ತಯಾರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಳು. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಸುದ್ದಿಯಾಗಿತ್ತು. ಸ್ಟೇಟ್ ಟ್ರಾನ್ಸ್ಪೋರ್ಟ್ ನಲ್ಲಿ ಸೇವೆಯನ್ನು ಸಲ್ಲಿಸುವಾದರ ಜೊತೆಗೆ ಗಣವೇಶವನ್ನು ತೊಟ್ಟುಕೊಂಡು ತುಳಜಾಭವಾನಿ ದೇವಿಯ ಹಾಡಿಗೆ ಈ ಲೇಡಿ ಕಂಡಕ್ಟರ್ ವಿಡಿಯೋ ಒಂದನ್ನು ತಯಾರಿಸಿದ್ದಳು. ಈ ವಿಡಿಯೋವನ್ನು ಪರೀಕ್ಷಿಸಿದ ಸಂಬಂಧಪಟ್ಟ ಅಧಿಕಾರಿಗಳು ಸ್ಟೇಟ್ ಟ್ರಾನ್ಸ್ಪೋರ್ಟ್ ಮಂಡಳಿಯ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ತಕ್ಷಣ ಲೇಡಿ ಕಂಡಕ್ಟರ್ ಗೆ ನೌಕರಿಯಿಂದ ವಜಾ ಮಾಡಿದ್ದಾರೆ.

ವೀಡಿಯೋ ನೋಡಿ.

ಈ ಪ್ರಕರಣ ಇಷ್ಟಕ್ಕೆ ನಿಲ್ಲದೆ ಆಕೆಯ ವಿಡಿಯೋ ರೆಕಾರ್ಡ್ ಮಾಡಿದ ಸಹಕಾರಿಗೂ ತಕ್ಷಣ ಸೇವೆಯಿಂದ ಅಮಾನತು ಮಾಡಲಾಗಿದೆ. ಇದಕ್ಕೆ ಉತ್ತರವಾಗಿ ಲೇಡಿ ಕಂಡಕ್ಟರ್ ತನ್ನ ಮೇಲೆ ಮೇಲಾಧಿಕಾರಿಗಳು ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಮತ್ತೊಂದು ರೀಲ್ಸ್ ನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾಳೆ. ಲೇಡಿ ಕಂಡಕ್ಟರ್ ಮಂಗಲ್ ಗಿರಿ ಮಾಡಿದ ಕೆಲವು ವಿಡಿಯೋಗಳನ್ನು ಈ ಕೆಳಗೆ ನೋಡಿ…