Video; ಹಳೆಯ TV ಸೀರಿಯಲ್ ‘ರಾಮಾಯಣ’ ದ ‘ರಾಮ್’ ಆಕಸ್ಮಿಕ ಏರ್ ಪೋರ್ಟ್ ನಲ್ಲಿ ಕಂಡಾಗ ಮಹಿಳೆ ಮಾಡಿದ್ದೇನು?
ಭಾರತದಲ್ಲಿ ಚಲನಚಿತ್ರದಲ್ಲಿ ಮತ್ತು ಸೀರಿಯಲ್ ಗಳಲ್ಲಿ ನಟಿಸುವ ವ್ಯಕ್ತಿಗಳಿಗೆ ಸಾಕಷ್ಟು ಬೆಲೆ ಇದೆ. ಅವರನ್ನು ಫಾಲೋ ಮಾಡುವವರ ಸಂಖ್ಯೆ ಅಗಣಿತವಾಗಿರುತ್ತದೆ. ಅಭಿನಯದ ಮೂಲಕ ಒಮ್ಮೆ ಅಭಿಮಾನಿಗಳ ಮನಸ್ಸಿನಲ್ಲಿ ಬೇರೂರಿದರೆ ಸಾಕು ಅಭಿಮಾನಿಗಳು ಆ ನಟರನ್ನು ಎಂದಿಗೂ ಎಂದೆಂದಿಗೂ ಮರೆಯುವುದಿಲ್ಲ.
90 ರ ದಶಕದಲ್ಲಿ ರಮಾನಂದ ಸಾಗರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಹಳೆಯ ಮೆಗಾ ಸೀರಿಯಲ್ “ರಾಮಾಯಣ” ಧಾರಾವಾಹಿ ಮುಗಿದು ಎರಡುವರೆ ದಶಕಗಳು ಕಳೆದರೂ ಆ ಸೀರಿಯಲ್ ಇಲ್ಲಿಯವರೆಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದೆ. ಆ ಸೀರಿಯಲ್ ನಲ್ಲಿ ನಟಿಸಿದ ಪಾತ್ರ ವರ್ಗದವರು ಹೊರಗಡೆ ಎಲ್ಲಿಯೂ ಭೇಟಿಯಾದರೆ ಸಾಕು ಜನರು ಅವರ ಪಾದಗಳನ್ನು ಸ್ಪರ್ಶ ಮಾಡಿ ನಮಸ್ಕರಿಸುತ್ತಿದ್ದರು. ಈ ರೀತಿಯ ಅನುಭವ ಈಗಷ್ಟೇ ಮತ್ತೊಮ್ಮೆ ಕಂಡುಬಂದಿದೆ.
ರಾಮಾಯಣ ಸೀರಿಯಲ್ ನಲ್ಲಿ ರಾಮನ ಪಾತ್ರವನ್ನು ಅದ್ಭುತವಾಗಿ ನಟಿಸಿ ಅಭಿಮಾನಿಗಳಿಂದ ಸೈ ಎನಿಸಿಕೊಂಡ ಹಾಗೂ ಅಭಿಮಾನಿಗಳು ನಿಜವಾದ ರಾಮನೆಂದೇ ಭಾವಿಸಿದ ಅರುಣ್ ಗೋವಿಲ್ ಅವರು ತಮ್ಮ ಪತ್ನಿಯ ಜೊತೆಗೆ ಇತ್ತೀಚೆಗೆ ಏರ್ಪೊರ್ಟ್ ಒಂದರಲ್ಲಿ ಕಂಡುಬಂದಿದ್ದರು. ಅವರನ್ನು ನೋಡಿದ ತಕ್ಷಣ ಮಹಿಳೆಯೊಬ್ಬಳು ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರವನ್ನು ಮಾಡಿದವರು ಇವರೇ ಎಂದು ತಕ್ಷಣ ಗುರುತಿಸಿ ಅವರ ಪಾದಗಳಿಗೆ ಮುಟ್ಟಿ ನಮಸ್ಕರಿಸಿದ್ದಾಳೆ. ಈ ಸಂದರ್ಭದಲ್ಲಿ ಅರುಣ್ ಗೋವಿಲ್ ಅವರು ಆಕೆಯ ಗಂಡನಿಗೆ ಪಾದಗಳನ್ನು ಸ್ಪರ್ಶ ಮಾಡಿ ನಮಸ್ಕರಿಸುತ್ತಿರುವ ಮಹಿಳೆಯನ್ನು ತಕ್ಷಣ ಎಬ್ಬಿಸು ಎಂದು ಕೈ ಮಾಡಿ ಸನ್ನೆಯಿಂದ ವಿನಂತಿಸಿಕೊಳ್ಳುತ್ತಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯರ ಪಾತ್ರವನ್ನು ನಿಭಾಯಿಸಿದ ವ್ಯಕ್ತಿಗಳನ್ನು ಸಹಿತ ಅವರ ಹಾಗೆ ಪೂಜ್ಯರೆಂದು ಭಾವಿಸಲಾಗುತ್ತದೆ ಎಂಬುದು ಇಲ್ಲಿ ತಿಳಿದು ಬರುತ್ತದೆ.
ನೋಡಿ ಈ ಅದ್ಭುತವಾದ ಕ್ಷಣಗಳ ವಿಡಿಯೋ..
View this post on Instagram
ಈ ಹೃದಯಸ್ಪರ್ಶಿ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ humourfun.co ಹೆಸರಿನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 15.8 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು 1.3 ಮಿಲಿಯನ್ ಲೈಕ್ಸ್ ಗಳನ್ನು ಹೊಂದಿದೆ.