Video; ಬಹುಶಃ ಈ ಕಾರಣಕ್ಕಾಗಿಯೇ ಇದನ್ನು ಹಸು ಎಂದು ಕರೆಯುತ್ತಿರಬಹುದು! ಮುದ್ದು ಹಸುವಿನ ಸಹನೆಗೆ ಒಂದು ದೊಡ್ಡ ಸಲಾಮ್.
ಕೆಲವು ಪ್ರಾಣಿಗಳು ಮನುಷ್ಯನ ಜೀವನದಲ್ಲಿ ಇತಿಹಾಸ ಕಾಲದಿಂದಲೂ ಹಾಸು ಹೊಕ್ಕಾಗಿವೆ. ಈ ಪ್ರಾಣಿಗಳು ಮನುಷ್ಯನಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿವೆ. ಮನುಷ್ಯನ ಜೀವನ ಸಾಕು ಪ್ರಾಣಿಗಳಿಲ್ಲದೆ ಪೂರ್ಣವಾಗುತ್ತಿರಲಿಲ್ಲ. ಉದಾಹರಣೆಗೆ ನಾಯಿ, ಬೆಕ್ಕು, ಎಮ್ಮೆ, ಕುರಿ, ಕೋಣ, ಹಸು, ಎತ್ತುಗಳಂತಹ ಇನ್ನು ಅನೇಕ ಪ್ರಾಣಿಗಳು ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿವೆ. ಇವೆಲ್ಲವುಗಳಲ್ಲಿ ಮನುಷ್ಯ ಹಸುವಿಗೆ ಎಲ್ಲಿಲ್ಲದ ಮಹತ್ವ ನೀಡಿದ್ದಾನೆ.
ಹಸುವಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಾತೆ, ತಾಯಿ ಹಾಗೂ ಕಾಮಧೇನು ಅಂತಲೂ ಕರೆಯುತ್ತಾರೆ. ಹಸುವಿಂದಾಗಿ ಮನುಷ್ಯನಿಗೆ ಅನೇಕ ರೀತಿಯಲ್ಲಿ ಸಹಾಯವಾಗುತ್ತದೆ. ಹಸು ಯಾರಿಗೂ ನೋವು ನೀಡದ ತುಂಬಾ ಶಾಂತವಾದ ಹಾಗೂ ಸಮಾಧಾನದ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಸುವಿನ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ ಮೇಲೆ ಹೇಳಿದ ಮಾತುಗಳು ಶಬ್ದಶಃ ಸತ್ಯವೆಂದು ಅರಿವಾಗುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಪುಟ್ಟ ಮಗು ಹಸುವಿನ ಜೊತೆಗೆ ಯಾವುದೇ ಭಯವಿಲ್ಲದೆ ಮುಕ್ತವಾಗಿ ಆಡುತ್ತಿದೆ. ಮಗು ಆಡುವಾಗ ಹಸುವಿನ ಮುಖಕ್ಕೆ ಅನೇಕ ರೀತಿಯ ತಾಪತ್ರಯ ನೀಡುತ್ತಿರುವುದು ಕಂಡುಬರುತ್ತಿದೆ. ಇಷ್ಟಾದರೂ ಶಾಂತ ಮತ್ತು ಮುದ್ದು ಹಸು ಮಗುವಿಗೆ ಯಾವುದೇ ರೀತಿಯ ಪ್ರತಿಕಾರ ಮಾಡದೆ ಎಲ್ಲವನ್ನು ಪ್ರೀತಿಯಿಂದ ಸಹಿಸಿಕೊಳ್ಳುತ್ತಿದೆ. ಮಗು ಹಸುವಿನ ಜೊತೆಗೆ ಆಡುತ್ತಿರುವ ಈ ಆಟಕ್ಕೆ ಹಸು ಯಾವುದೇ ರೀತಿಯ ಪ್ರತಿಕಾರವನ್ನು ನೀಡದೆ ಸುಮ್ಮನೆ ಎಲ್ಲವನ್ನು ಸಹಿಸಿಕೊಳ್ಳುವ ದೃಶ್ಯ ನೋಡಿದಾಗ ಎಷ್ಟೊಂದು ಸಹನಶೀಲತೆಯನ್ನು ಈ ಹಸಿವಿಗೆ ಆ ದೇವರು ನೀಡಿದ್ದಾನೆ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ.
ನೋಡಿ ಈ ಮುದ್ದಾದ ಸುಂದರ ವಿಡಿಯೋ…
View this post on Instagram
ಹಸುವಿನ ಸುಂದರವಾದ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಗುಲ್ಜಾರ್ ಶಾಯಿರಿ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡುವುದರ ಜೊತೆಗೆ 2.27 ಲಕ್ಷ ಜನರು ಲೈಕ್ ಸಹ ಮಾಡಿದ್ದಾರೆ.