Video; ಡಾಗಿಯ ಈ ಅದ್ಭುತವಾದ ಆಕ್ಟಿಂಗ್ ನೋಡಿ ಈ ವರ್ಷದ ಆಸ್ಕರ್ ಅವಾರ್ಡ್ ಇದಕ್ಕೆ ಸಲ್ಲಬೇಕು ಎನ್ನುತ್ತಿದ್ದಾರೆ ನೇಟಿಜನ್ಸ್ ಗಳು
ಚಲನಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡ ಅನೇಕ ಪ್ರಾಣಿಗಳನ್ನು ಇಲ್ಲಿಯವರೆಗೆ ನೋಡಿರಬೇಕು. ಈ ಪ್ರಾಣಿಗಳು ತಮ್ಮ ಆಕ್ಟಿಂಗ್ ನಿಂದಾಗಿ ಅಸಂಖ್ಯ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತವೆ. ಸದ್ಯ ಮನೆಯಲ್ಲಿಯ ನಾಯಿಯೊಂದು ತುಂಬಾ ಅದ್ಭುತವಾಗಿ ನಟಿಸಿ ಸೋಶಿಯಲ್ ಮೀಡಿಯಾ ಯೂಸರ್ಸ್ ಗಳಿಂದ ವಾವ್ ವಾವ್ ಗಿಟ್ಟಿಸುತ್ತಿದೆ.
ಈ ವಿಡಿಯೋ ನೋಡಿದಾಗ ಚಲನಚಿತ್ರಗಳಲ್ಲಿ ನಟಿಸುವ ನಾಯಿಗಳಿಗೂ ಈ ನಾಯಿ ಜಬರ್ದಸ್ತ್ ಸ್ಪರ್ಧೆ ನೀಡುತ್ತದೆ ಎಂದು ತಿಳಿದುಬರುತ್ತದೆ. ಈ ವಿಡಿಯೋದಲ್ಲಿ ಕಂಡು ಬರುವ ನಾಯಿಯು ತನ್ನ ಆಕ್ಟಿಂಗ್ ನಿಂದಾಗಿ ನೆಟ್ಟಿಗರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ನಿಂತ ನಾಯಿಗೆ ಮನೆಯಲ್ಲಿಯ ಆಟಿಕೆ ಸಾಮಾನಿನ ಕಾರು ಡಿಕ್ಕಿ ಹೊಡೆಯುತ್ತದೆ. ಅಷ್ಟೇ ಚಿಕ್ಕ ಕಾರಣಕ್ಕಾಗಿ ನಾಯಿಯು ಹಠಾತ್ ಗಾಯಗೊಂಡಂತೆ ವರ್ತಿಸಿದೆ. ನಾಯಿ ತನ್ನ ಕಾಲಿಗೆ ತುಂಬಾ ಬಲವಾದ ಏಟು ಬಿದ್ದಿರುವ ಹಾಗೆ ಪ್ರದರ್ಶನೆಯನ್ನು ನೀಡಿದೆ. ಪ್ರಸ್ತುತ ಈ ವಿಡಿಯೋ ತುಂಬಾ ಕ್ಯೂಟ್ ಆಗಿದ್ದು ನಾಯಿಯ ನಾಟಕದ ವರ್ತನೆ ಸಾಕಷ್ಟು ಜನರಿಗೆ ಮೋಡಿ ಮಾಡಿದೆ.
ನೋಡಿ ಈ ವಿಡಿಯೋ..
The Oscar goes to.. 😅 https://t.co/m6o3rlRXVp
— Buitengebieden (@buitengebieden) October 4, 2022
ಇಷ್ಟೊಂದು ಸುಂದರವಾಗಿ ಅಭಿನಯ ಮಾಡಿದ ನಾಯಿಯ ಈ ವಿಡಿಯೋವನ್ನು ಟ್ವಿಟರ್ ನಲ್ಲಿ @buitengebieden ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ಈ ಕ್ಯೂಟ್ ವಿಡಿಯೋವನ್ನು ಇಲ್ಲಿಯವರೆಗೆ ಕೋಟ್ಯಾವಧಿ ಜನರು ವೀಕ್ಷಿಸಿದ್ದಾರೆ. ತಮ್ಮ ಕಾಮೆಂಟ್ನಲ್ಲಿ ನೆಟ್ಟಿಗರು ಈ ನಾಯಿಗೆ ಪ್ರಸ್ತುತ ವರ್ಷದ ಆಸ್ಕರ್ ಅವಾರ್ಡ್ ವನ್ನು ನೀಡಿ ಗೌರವಿಸಬೇಕು ಎಂದು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತ ಮಾಡಿದ್ದಾರೆ.