ಹುಡುಗನ ಸ್ಟಂಟ್ ನೋಡಿ ಬೆಚ್ಚಿಬಿದ್ದ ಮಂಗ! ಇದು ಯಾವ ಹೊಸ ಪ್ರಾಣಿ ಎಂದ ಮಂಗ; ಮಂಗನ ರಿಯಾಕ್ಷನ್ ಸಖತ್👌👌..!
ಯಾವುದೇ ಒಂದು ಜೀವಿಯ ಮುಂದೆ ಏನಾದರೂ ವಿಶೇಷ ಪ್ರಸಂಗ ಕಂಡು ಬಂದರೆ ಅಥವಾ ಘಟಿಸಿದರೆ ಆ ಪ್ರಾಣಿಯ ರಿಯಾಕ್ಷನ್ ತುಂಬಾ ಬೇರೆಯಾಗಿರುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಮಂಗನ ಮುಂದೆ ನಡೆದ ದೃಶ್ಯ ನೋಡಿದಾಗ ಮಂಗ ಫುಲ್ ಕನ್ಫ್ಯೂಸ್ ಆಗಿರುವ ರಿಯಾಕ್ಷನ್ ನೋಡಿ ಆಶ್ಚರ್ಯವಾಗುವುದು.
ಈ ವಿಡಿಯೋದಲ್ಲಿ ಹುಡುಗನೊಬ್ಬ ಎಲ್ಲಿಯೋ ಸುತ್ತಾಡಲು ಬಂದಿದ್ದಾನೆ. ಈ ಸಂದರ್ಭದಲ್ಲಿ ಆತನಿಗೆ ಎರಡು ಮಂಗಗಳು ಭೇಟಿಯಾಗಿವೆ. ಆ ಮಂಗಗಳ ಮುಂದೆ ವಿಡಿಯೋದಲ್ಲಿಯ ಹುಡುಗ ನೀಲಿ ಬಣ್ಣದ ಹುಡಿ ಶರ್ಟ್ ತೊಟ್ಟು ಆ ಮಂಗಗಳಿಗೆ ಸನ್ನೆ ಮಾಡಿ ತುಂಬಾ ಈಸಿಯಾಗಿ ಬ್ಯಾಕ್ ಫ್ಲಿಪ್ ಮಾಡುತ್ತಾನೆ. ಈ ದೃಶ್ಯ ನೋಡಿದ ಮಂಗ ನಿಂತಲ್ಲಿಯೇ ಬೆಚ್ಚಿಬಿದ್ದಿದೆ. ಯುವಕ ಈ ಆಟದಲ್ಲಿ ನನಗೆ ಸ್ಪರ್ಧೆ ನೀಡುತ್ತಿದ್ದಾನೆಯೇ ಎಂಬ ಯೋಚನೆ ಅದರ ಮನದಲ್ಲಿ ಮೂಡಿದ ಹಾಗೆ ಕಂಡುಬರುತ್ತಿದೆ. ಹುಡುಗನ ಸ್ಟಂಟ್ ನೋಡಿ ಮಂಗವು ನಿಜಕ್ಕೂ ಕನ್ಫ್ಯೂಸ್ ಆಗಿದೆ ಏನೋ ಎಂಬಂತೆ ತಿಳಿದು ಬರುತ್ತದೆ.
ಈ ವಿಡಿಯೋ ನೋಡಿ ಮಂಗನ ಸ್ಪಷ್ಟವಾದ ಭಾವನೆ ಮುಖದ ಮೇಲೆ ಕಂಡು ಬರುತ್ತದೆ.
View this post on Instagram
ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ sakhtlogg ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ನೋಡಿ ಆನಂದಿಸಿದ್ದಾರೆ.