Video; ಇವನೇನಾ ಭಾರತದ ಸ್ಪೈಡರ್ ಮ್ಯಾನ್? ರೈಲಿನಲ್ಲಿ ಸೀಟ್ ಹತ್ತಿರ ಹೋಗಲು ಯೂಸ್ ಮಾಡಿದ ಯೂನಿಕ್ ಟೆಕ್ನಿಕ್!

ಸೋಶಿಯಲ್ ಮೀಡಿಯಾದಲ್ಲಿ ಕಾಣುವದೆಲ್ಲವೂ ಅಚ್ಚರಿಯ ಸಂಗತಿಗಳಾಗಿರುತ್ತವೆ. ನೋಡಿದಷ್ಟು ವಿಶೇಷ ಸಂಗತಿಗಳು ಕಾಣುತ್ತಾ ಹೋಗುತ್ತವೆ. ಸದ್ಯ ಇದೇ ರೀತಿಯ ಭಾರತೀಯ ಸ್ಪೈಡರ್ ಮ್ಯಾನ್ ಒಬ್ಬ ರೈಲಿನಲ್ಲಿ ತನ್ನ ಸೀಟ್ ಮೇಲೆ ಕುಳಿತುಕೊಳ್ಳುವ ಸಲುವಾಗಿ ಭಾರಿ ಜುಗಾಡ್ ಮಾಡಿದ್ದಾನೆ. ಆತನ ಈ ಜುಗಾಡ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿಯ ನೆಟ್ಟಿಗರು ನೋಡಿ ಆನಂದಿಸುತ್ತಿದ್ದಾರೆ.

ಪ್ರಸ್ತುತ ವಿಡಿಯೋದ ಪ್ರಕಾರ ಇಲ್ಲಿ ಟ್ರೈನಿನಲ್ಲಿಯ ದೃಶ್ಯ ಕಂಡು ಬರುತ್ತಿದೆ. ಟ್ರೈನ್ ಜನರಿಂದ ಕಿಕ್ಕಿರಿದು ತುಂಬಿರುವುದನ್ನು ಇಲ್ಲಿ ನೋಡಬಹುದು. ಅಂಥದರಲ್ಲಿ ವ್ಯಕ್ತಿಯೊಬ್ಬ ತನ್ನ ಸೀಟಿನವರಿಗೆ ಹೋಗಿ ಕುಳಿತುಕೊಳ್ಳಲು ತುಂಬಾ ಯೂನಿಕ್ ಟೆಕ್ನಿಕ್ ಒಂದನ್ನು ಯೂಸ್ ಮಾಡಿದ್ದಾನೆ. ಟ್ರೈನಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಜನರು ತುಂಬಿರುವುದರಿಂದ ತುಂಬಾ ಸಮಸ್ಯೆ ಉಂಟಾಗಿದೆ. ಈ ಕಾರಣಕ್ಕಾಗಿ ವ್ಯಕ್ತಿಯು ಸೀಟಿನವರೆಗೆ ಹೋಗಲು ತನ್ನದೇ ಒಂದು ಐಡಿಯಾ ಉಪಯೋಗಿಸಿಕೊಂಡಿದ್ದಾನೆ. ಆತ ತನ್ನ ಸೀಟಿನವರೆಗೆ ಹೋಗಿ ಕುಳಿತುಕೊಳ್ಳಲು ಮೇಲೆ ನೇತಾಡುವ ಹ್ಯಾಂಡಲ್ ಗಳ ಉಪಯೋಗ ತೆಗೆದುಕೊಂದಿದ್ದಾನೆ. ಅವುಗಳನ್ನು ಹಿಡಿದು ನೇತಾಡುತ್ತಾ ಮುಂದೆ ಮುಂದೆ ಹೋಗುತ್ತಿದ್ದಾನೆ. ಈ ಸಂದರ್ಭದಲ್ಲಿ ಕೆಳಗೆ ಮಹಿಳೆಯರು ಮಲಗಿಕೊಂಡಿದ್ದನ್ನು ಕಾಣಬಹುದು. ವ್ಯಕ್ತಿಯು ಹಾಗೆ ಮುಂದೆ ಹೋಗುತ್ತಾ ನಂತರ ನೇರ ಸೀಟ್ ಮೇಲೆ ಏರಿ ಒಂದರ ನಂತರ ಒಂದು ಹೀಗೆ ಸೀಟ್ ಮೇಲೆ ಕಾಲಿಡುತ್ತಾ ಮುಂದೆ ಸಾಗಿದ್ದಾನೆ. ಆತನ ಈ ಕಾರ್ಯಕ್ರಮವನ್ನು ಹಿಂದಿನಿಂದ ಯಾರೋ ಒಬ್ಬರು ತಮ್ಮ ಮೊಬೈಲ್ ನಿಂದ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ನೀವು ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋ ಟ್ವಿಟರ್ ನಲ್ಲಿ ಪ್ರೊಫೆಸರ್ ngl ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದು ಸುಮಾರು ಎರಡುವರೆ ಸಾವಿರಕ್ಕಿಂತಲೂ ಮೇಲ್ಪಟ್ಟು ಲೈಕ್ಸ್ ಗಳನ್ನು ಗಳಿಸಿದೆ.