ಜನಮೆಚ್ಚಿದ ಸೂಪರ್ ವಿಡಿಯೋ; ನಾಯಿ, ನರಿಗಳ ಬದಲು ಮನೆಯಲ್ಲಿ ಸಾಕಿದ್ದಾನೆ ಈ ಮುದ್ದು ಮುದ್ದಾದ ಪುಣ್ಯಕೋಟಿಗಳನ್ನು!

ಇತ್ತೀಚೆಗೆ ಜನರು ತಮ್ಮ ಮನೆಗಳಲ್ಲಿ ಅನೇಕ ರೀತಿಯ ಬೇರೆ ಬೇರೆ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಸಾಕುತ್ತಿರುವುದು ನೋಡುತ್ತೇವೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುತ್ತಿರುವ ಒಂದು ವಿಡಿಯೋ ಎಲ್ಲರ ಗಮನ ತನ್ನತ್ತ ಸೆಳೆಯುತ್ತಿದೆ. ಅದ್ಯಾವ ವಿಶೇಷತೆ ಈ ವಿಡಿಯೋದಲ್ಲಿದೆ ಬನ್ನಿ ನೋಡೋಣ.

ಪ್ರಸ್ತುತ ವಿಡಿಯೋದಲ್ಲಿ ಪುಟ್ಟ ಪುಟ್ಟ ಮುದ್ದಾದ ಗೋವಿನ ಕಂದಮ್ಮಗಳು ಮನೆಯಲ್ಲಿ ತುಂಬಾ ಫ್ರೀಯಾಗಿ ತಿರುಗಾಡುತ್ತಿರುವುದು ಕಂಡು ಬರುತ್ತಿದೆ. ಈಗಿನ ಕಾಲದಲ್ಲಿ ಹೆಚ್ಚಾಗಿ ಜನರು ನಾಯಿಯನ್ನು ಸಾಕುವುದು ದೊಡ್ಡ ಸ್ಟೇಟಸ್ ಎಂದು ತಿಳಿದುಕೊಳ್ಳುತ್ತಾರೆ. ಭಾರತದಲ್ಲಿ ಗೋವಿಗೆ ಎಲ್ಲಿಲ್ಲದ ಮಹತ್ವ ಇದೆ. ಗೋವನ್ನು ಕಾಮಧೇನು ಎಂದು ತಿಳಿಯಲಾಗುತ್ತದೆ. ಇಂಥ ಗೋವಿನ ಪುಟ್ಟ ಕರುಗಳನ್ನು ಮನೆಯಲ್ಲಿ ಸಾಕುವುದು ನಿಜಕ್ಕೂ ಹೆಮ್ಮೆಯ ವಿಷಯವೆ ಸರಿ. ಆದ್ದರಿಂದಲೇ ಈ ವ್ಯಕ್ತಿ ಕಾಮಧೇನುವಿಗೆ ತನ್ನ ಮನೆಯಲ್ಲಿ ಮಹತ್ವದ ಸ್ಥಾನವನ್ನು ನೀಡಿದ್ದಾನೆ ಎಂದು ತಿಳಿದು ಬರುತ್ತದೆ.

ಮನೆಯಲ್ಲಿ ಓಡಾಡುವ ಈ ಪುಟ್ಟ ಗೋವಿನ ಕರುಗಳನ್ನು ನೋಡಿದಾಗ ಯಾರಿಗೂ ಮಮತೆ ಉಕ್ಕಿ ಹರಿಯುತ್ತದೆ. ಕಾರಣ ಇಲ್ಲಿಯವರೆಗೆ ಈ ರೀತಿ ಮನೆಯಲ್ಲಿ ಸ್ಥಾನ ನೀಡಿದ್ದ ಉದಾಹರಣೆ ಅಥವಾ ವಿಡಿಯೋ ಎಲ್ಲಿಯೂ ನೋಡಿರಲಿಲ್ಲ ಎನಿಸುತ್ತದೆ. ಈ ಕರುಗಳು ಬಹುಶಃ ಪುಂಗನೂರು ಜಾತಿಗೆ ಸೇರಿದ ಕರುಗಳಾಗಿರಬಹುದು. ಈ ಪುಂಗನೂರು ಜಾತಿಯ ಹಸುಗಳು ಕಾಣಲು ಮುದ್ದಾಗಿ ಹಾಗೂ ದೇಹ ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುತ್ತವೆ.

ವೀಡಿಯೋ ನೋಡಿ

 

View this post on Instagram

 

A post shared by Satish Sen (@sati6447)

ಪ್ರಸ್ತುತ ವಿಡಿಯೋ instagram ನಲ್ಲಿ sati6447 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಸುಮಾರು 7 ಲಕ್ಷಕ್ಕೂ ಮೀರಿ ಲೈಕ್ಸ್ ಗಳನ್ನು ಹೊಂದಿದೆ.