ಮೇಕೆಯನ್ನೆ ನುಂಗಿ ನೀರು ಕುಡಿದ 11 ಫೀಟ್ ಉದ್ದದ ಹೆಬ್ಬಾವು ಸೇರಿತು ಶಾಲಾ ಮಕ್ಕಳ ಬಸ್ಸಿನಲ್ಲಿ; ನೋಡಿ ಈ VIRAL VIDEO.
ಹಾವುಗಳು ಯಾವಾಗ ಎಲ್ಲಿ ಸೇರುತ್ತವೆ ಹಾಗೂ ನಂತರ ಒಮ್ಮೆಲೇ ಎಲ್ಲಿ ಉದ್ಭವವಾಗುತ್ತವೆ ಎಂದು ಹೇಳಲು ಸಾಧ್ಯವೇ ಇಲ್ಲ. ಚಿಕ್ಕದರಲ್ಲಿ ಅತಿ ಚಿಕ್ಕ ಬಿಲ ಅಥವಾ ಸಂಧಿ ಕಂಡುಬಂದರೂ ಅದರಲ್ಲಿಂದ ದೊಡ್ಡ ದೊಡ್ಡ ಹಾವುಗಳು ಹೊರಗೆ ಬರುವದನ್ನು ಎಷ್ಟೋ ಸಲ ನೋಡುತ್ತೇವೆ. ಅಂತದ್ದರಲ್ಲಿ ಶಾಲಾ ಮಕ್ಕಳ ಬಸ್ಸಿನಲ್ಲಿಯೇ ಹಾವು ಕಂಡರೆ ಹೇಗಾಗಿರಬೇಡ? ಇದರ ಬಗ್ಗೆ ಸ್ವಲ್ಪ ಯೋಚಿಸಿದರೂ ಮೈ ಜುಮ್ ಎನ್ನುತ್ತದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯಿಂದ ವರದಿಯಾಗಿದೆ. ಸ್ಕೂಲ್ ಬಸ್ಸಿನ ಎಂಜಿನ್ ನಲ್ಲಿ ಸುಮಾರು 11 ಫೀಟ್ ಉದ್ದಳತೆಯ ಹೆಬ್ಬಾವು ಒಂದು ಸೇರಿಕೊಳ್ಳುತ್ತಿತ್ತು ಅದು ಮೇಕೆಯನ್ನು ನುಂಗಿ. ಜಿಲ್ಲೆಯ ಸಿಇಓ ವಂದನಾ ಸಿಂಹ ಮತ್ತು ಮೆಜಿಸ್ಟ್ರೇಟ್ ಪಲ್ಲವಿ ಮಿಶ್ರಾ ಅವರು ಶೀಘ್ರಗತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆಯಿಸಿ ರೆಸ್ಕ್ಯೂ ಆಪರೇಷನ್ ಮಾಡಿದರು. ಎಲ್ಲಕ್ಕೂ ಸಮಾಧಾನದ ಸಂಗತಿ ಏನೆಂದರೆ ನಿನ್ನೆ ರವಿವಾರ ವಿದ್ದಕಾರಣ ಶಾಲೆಗೆ ರಜೆ ಇತ್ತು. ಹೀಗಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಗ್ರಾಮಸ್ಥರು ಹೇಳುವ ಪ್ರಕಾರ ಪ್ರಸ್ತುತ ಹೆಬ್ಬಾವು ಶನಿವಾರದ ರಾತ್ರಿ ಮೇಕೆಯ ಮರಿಯೊಂದನ್ನು ನುಂಗಿತ್ತು. ನಂತರ ಅದು ಬಸ್ಸಿನಲ್ಲಿಯೇ ಆರಾಮ ತೆಗೆದುಕೊಂಡಿದೆ. ಈ ವಿಷಯ ಗ್ರಾಮಸ್ಥರ ಗಮನಕ್ಕೆ ಬರುತ್ತಲೇ ಮೇಲಾಧಿಕಾರಿಗಳಿಗೆ ವರದಿ ಮುಟ್ಟಿದೆ.
ಈ ಹೆಬ್ಬಾವನ್ನು ರೆಸ್ಕ್ಯೂ ಮಾಡುವಾಗಿನ ದೃಶ್ಯ ನೋಡಿ ಈ ವಿಡಿಯೋದಲ್ಲಿ…
उत्तर प्रदेश के #रायबरेली में #स्कूल की एक बस के इंजन में #अजगर फंसा था।
कड़ी मशक़्क़त के बाद #वन विभाग की टीम ने निकाला बाहर।#UttarPradesh #Raebareli #snake #snakes #BOA2022 #India pic.twitter.com/nuKslyOXT4
— Gurmeet Singh 🇮🇳 (@Gurmeet_Singhhh) October 16, 2022
ಬೇರೊಂದು ವಿಡಿಯೋದಲ್ಲಿ ಕಂಡು ಬರುವ ಪ್ರಕಾರ ಹೆಬ್ಬಾವನ್ನು ಮೊದಲು ಒಂದು ಚೀಲದಲ್ಲಿ ಹಾಕಲು ಪ್ರಯತ್ನಿಸಿದ್ದಾರೆ. ಆದರೆ ಅದು ಯಶಸ್ವಿಯಾಗಿಲ್ಲ. ನಂತರ ಈ ವಿಡಿಯೋದಲ್ಲಿ ಕಂಡುಬರುವ ಹಾಗೆ ಹೆಬ್ಬಾವಿನ ಮುಖ ಎಂಜಿನ್ ನಲ್ಲಿ ಸಿಕ್ಕಿ ಬಿಟ್ಟಿತ್ತು. ಅದನ್ನು ತೆಗೆಯುವ ಸಲುವಾಗಿ ಕೊನೆಗೆ ಹಾವಿಗೆ ಹಗ್ಗವನ್ನು ಕಟ್ಟಿ ಎಳೆದು ಬಿಡಿಸುವ ಪ್ರಯತ್ನ ಮಾಡಲಾಯಿತು.