52 ಅಪಾಯಕಾರಿ ಚೀನಿ ಆಪ್’ಗಳ ಬಗ್ಗೆ ಸರಕಾರಕ್ಕೆ ಎಚ್ಚರಿಕೆ ಕೊಟ್ಟ ಇಂಟೆಲಿಜೆನ್ಸ್ ಏಜೆನ್ಸಿ! ಆಪ್’ಗಳ ಲಿಸ್ಟ್ ಒಮ್ಮೆ ನೋಡಿ

ಭಾರತೀಯ ಸುರಕ್ಷಾ ಅಧಿಕಾರಿಗಳು ಭಾರತ ಸರಕಾರಕ್ಕೆ ಚೀನಾ ಮೂಲದ ಈ 52 ಮೊಬೈಲ್ ಅಪ್ಲಿಕೇಶನ್ ಗಳನ್ನು ಬ್ಲಾಕ್ ಮಾಡಿ ಇಲ್ಲದಿದ್ದರೆ ಜನರಿಗೆ ಈ ಅಪ್ಲಿಕೇಶನ್ ಉಪಯೋಗಿಸಬಾರದಂತೆ ಸಲಹೆ ನೀಡಿ ಎಂದು ಮನವಿ ಮಾಡಿದ್ದಾರೆ. ಏಕೆಂದರೆ ಈ ಅಪ್ಲಿಕೇಶನ್ ಉಪಯೋಗಿಸುವದು ಅಸುರಕ್ಷಿತವಾಗಿದೆ. ಈ ಅಪ್ಲಿಕೇಶನ್ ಗಳು ನಮ್ಮ ಡೇಟಾವನ್ನು ಭಾರತದಿಂದ ಹೊರ ದೇಶಕ್ಕೆ ಕಳುಹಿಸುತ್ತಿವೆ. ಇದರ ಕುರಿತು ಸಂಬಂಧಿತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭದ್ರತಾ ಪಡೆಯು ಸರಕಾರಕ್ಕೆ ನೀಡಿದ ಆಪ್ ಲಿಸ್ಟ್ ನಲ್ಲಿ ವಿಡಿಯೋ ಕಾನ್ಫೆರೆನ್ಸಿಂಗ್, ಜೂಮ್ ಆಪ್, ಟಿಕ್ ಟಾಕ್, ಯೂಸಿ ಬ್ರೌಸರ್, ಶೇರ್ ಇಟ್, ಕ್ಲಿನ್ ಮಾಸ್ಟರ್ ದಂತಹ ಮುಂತಾದ ಆಪ್ ಗಳಿವೆ.

ಗುಪ್ತಚರ ಸಂಸ್ಥೆಗಳು ಮಾಡಿದ ಈ ಪ್ರಸ್ತಾಪವನ್ನು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯವು ಬೆಂಬಲಿಸಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಅಪ್ಲಿಕೇಶನ್‌ಗಳು ಭಾರತದ ಭದ್ರತೆಗೆ ಅಪಾಯವನ್ನುಂಟು ಮಾಡಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

ಒಬ್ಬ ಅಧಿಕಾರಿಯು ಹೇಳಿದ್ದೇನೆಂದರೆ, “ಪ್ರಸ್ತಾವದ ಮೇಲೆ ಚರ್ಚೆ ನಡೆಯುತ್ತಿದೆ”. ಅಲ್ಲದೆ ಎಲ್ಲ ಮೊಬೈಲ್ ಆಪ್ ಗಳ ಗುಣಮಟ್ಟ ಮತ್ತು ಅದಕ್ಕೆ ಸಂಬಂಧಿಸಿದ ಅಪಾಯಗಳನ್ನು ಪರಿಶೀಲಿಸಲಾಗುತ್ತದೆ’. ಎಂದು ಹೇಳಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ಗೃಹ ಸಚಿವಾಲಯವು ಜೂಮ್ ಅಪ್ ಬಳಕೆ ಕುರಿತು ಒಂದು ಸಲಹೆ ಜಾರಿಯಲ್ಲಿ ತಂದಿತ್ತು. ನ್ಯಾಷನಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಇಂಡಿಯಾ (CERT-in) ಪ್ರಸ್ತಾಪದ ಕುರಿತು ಸಚಿವಾಲಯ ಈ ಸಲಹೆಯನ್ನು ನೀಡಿತ್ತು. ಜೂಮ್ ಆಪ್ ಬಳಕೆಯ ಮೇಲೆ ನಿರ್ಬಂಧ ಹೇರಿದ ದೇಶಗಳಲ್ಲಿ ಭಾರತವೂ ಸಹ ಇದೆ. ನಮ್ಮ ದೇಶಕ್ಕಿಂತ ಮೊದಲು ತೈವಾನ್ , ಅಮೇರಿಕಾ ಮತ್ತು ಜರ್ಮನಿ ಸಹ ಈ ಆಪ್ ಬಳಕೆಯನ್ನು ನಿರ್ಬಂಧಿಸಲಾಗಿತ್ತು. ಗೃಹ ಸಚಿವಾಲಯದ ಸಲಹೆಗೆ ಪ್ರತಿಕ್ರಿಯಿಸಿದ ಕಂಪನಿಯು, ನಾವು ಬಳಕೆದಾರರ ಸುರಕ್ಷತೆಯ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಹೇಳಿದೆ.

ಪಾಶ್ಚಿಮಾತ್ಯ ದೇಶಗಳ ಭದ್ರತಾ ಸಂಸ್ಥೆಗಳು ಸಹ ಚೀನಾಕ್ಕೆ ಸಂಬಂಧಿಸಿರುವ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಬಗ್ಗೆ ಇದೇ ರೀತಿಯ ಕಳವಳ ವ್ಯಕ್ತಪಡಿಸಿವೆ. ಯುದ್ಧದ ಸಂದರ್ಭದಲ್ಲಿ, ಅವರು ಸಂವಹನ ಸೇವೆಗಳಿಗೆ ಹಾನಿಯುಂಟು ಮಾಡಬಹುದು ಎಂಬ ವಾದವನ್ನೂ ಸಹ ಮಾಡಲಾಗಿದೆ.

ರಡಾರ್ ನಲ್ಲಿರುವ ಆಪ್ ಗಳು ಕೆಳಗಿನಂತಿವೆ.

TikTok, Vault-Hide, Vigo Video, Bigo Live, Weibo

WeChat, SHAREit, UC News, UC Browser

BeautyPlus, Xender, ClubFactory, Helo, LIKE

Kwai, ROMWE, SHEIN, NewsDog, Photo Wonder

APUS Browser, VivaVideo- QU Video Inc

Perfect Corp, CM Browser, Virus Cleaner (Hi Security Lab)

Mi Community, DU recorder, YouCam Makeup

Mi Store, 360 Security, DU Battery Saver, DU Browser

DU Cleaner, DU Privacy, Clean Master – Cheetah

CacheClear DU apps studio, Baidu Translate, Baidu Map

Wonder Camera, ES File Explorer, QQ International

QQ Launcher, QQ Security Centre, QQ Player, QQ Music

QQ Mail, QQ NewsFeed, WeSync, SelfieCity, Clash of Kings

Mail Master, Mi Video call-Xiaomi, Parallel Space