Video; ರಸ್ತೆ ಮೇಲೆ ನಡೆದ ಯುವತಿಯ ಮೇಲೆ ಮೇಲಿನಿಂದಲೇ ವಕ್ಕರಿದ್ದ ಯಮ! ಕೂದಲೆಳೆ ಅಂತರದಲ್ಲಿ ಪಾರಾದ ಯುವತಿ.
ಪ್ರತಿಯೊಂದು ಕಡೆಗೆ ಸಿಸಿಟಿವಿಗಳನ್ನು ಅಳವಡಿಸಿದ ಕಾರಣದಿಂದಾಗಿ ರಸ್ತೆಯ ಮೇಲೆ ನಡೆದ ಅಪಘಾತದ ಹಾಗೂ ಅಪಘಾತದಿಂದ ಪಾರಾದ ವ್ಯಕ್ತಿಗಳ ರೋಚಕ ವಿಡಿಯೋಗಳು ಸೋಶಿಯಲ್ ಮೀಡಿಯಾ ಮಾಧ್ಯಮದ ಮುಖಾಂತರ ನಮ್ಮ ತನಕ ಮುಟ್ಟಲು ಸಮಯ ಬೇಕಾಗುವುದಿಲ್ಲ. ಸದ್ಯ ಇದೇ ರೀತಿಯ ವಿಡಿಯೋವನ್ನು ನೀವು ಇಲ್ಲಿ ನೋಡಲಿದ್ದೀರಿ.
ಈ ವಿಡಿಯೋದಲ್ಲಿ ಯುವತಿಯೊಬ್ಬಳು ರಸ್ತೆಯ ಮೇಲೆ ತನ್ನಷ್ಟಕ್ಕೆ ತಾನು ನಡೆದು ಹೋಗುತ್ತಿದ್ದಾಳೆ. ಅಷ್ಟರಲ್ಲಿ ಏನೋ ಒಂದು ದೊಡ್ಡ ಧಮಾಕ ಆದದ್ದು ಆಕೆಯ ಕಿವಿಗಳಿಗೆ ಕೇಳಿಸುತ್ತದೆ. ಇದನ್ನು ಕೇಳಿದ ಯುವತಿ ಒಮ್ಮೆಲೇ ಬೆಚ್ಚಿಬಿದ್ದು ಅತ್ತಿತ್ತ ನೋಡುತ್ತಾಳೆ. ಆದರೆ ಏನಾಗುತ್ತಿದೆ ಎಂಬುದು ಆಕೆಯ ಗಮನಕ್ಕೆ ಬರುವ ಮುಂಚೆಯೆ ಕಣ್ಣುಗಳ ಮುಂದೆ ಕೆಂಪು ಬಣ್ಣದ ಕಾರೊಂದು ಬದಿಯಲ್ಲಿರುವ ಓವರ್ ಬ್ರಿಜ್ ಮೇಲಿಂದ ಕ್ರ್ಯಾಶ್ ಮಾಡಿ ಆಟಿಗೆ ಸಾಮಾನಿನಂತೆ ಕೆಳಗೆ ಬಿದ್ದು ಚೆಂಡಿನ ಹಾಗೆ ಪುಟಿಗೆ ತಿನ್ನುತ್ತಾ ಮುಂದೆ ಹೋಗುತ್ತದೆ. ಅದರ ನಂತರ ರಸ್ತೆ ಬದಿಗೆ ರೋಡ್ ಗೈಡ್ ಮಾಡಲು ನಿಲ್ಲಿಸಿದ ರೇಡಿಯಮ್ ಸ್ಟಾಂಡ್ ಒಂದು ನೇರ ಯುವತಿಯ ತಲೆಯ ಮೇಲೆ ಬೀಳಲು ಬರುತ್ತದೆ. ಯುವತಿಯು ಅದನ್ನೆಲ್ಲ ವೀಕ್ಷಿಸದೆ ತನ್ನ ಸುತ್ತಮುತ್ತ ಏನೋ ದುರಂತ ಸಂಭವಿಸುತ್ತಿದೆ ಎಂದು ಗಾಬರಿಯಾಗಿ ಏನೂ ತಿಳಿಯದಂತೆ ಎರಡೇ ಎರಡು ಹೆಜ್ಜೆ ಹಿಂದಕ್ಕೆ ಬರುತ್ತಾಳೆ. ಅಷ್ಟರಲ್ಲಿ ಕಬ್ಬಿಣದ ರೇಡಿಯಮ್ ಸ್ಟಾಂಡ್ ಆಕೆ ಮೊದಲ ನಿಂತ ಸ್ಥಳದಲ್ಲಿಯೇ ಬಂದು ಬೀಳುತ್ತದೆ. ಯುವತಿ ಸಂಪೂರ್ಣವಾಗಿ ತಬ್ಬಿಬ್ಬಾಗಿರುವುದನ್ನು ಇಲ್ಲಿ ಗಮನಿಸಬಹುದು. ಒಟ್ಟಿನಲ್ಲಿ ಕೂದಲೆಳೆಯ ಅಂತರದಲ್ಲಿ ಯುವತಿಯು ಅಪಘಾತದಿಂದ ಅದೃಷ್ಟವಶಾತ್ ಪಾರಾಗಿದ್ದನ್ನು ಇಲ್ಲಿ ನೋಡಬಹುದು.
ವೀಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮಿನಲ್ಲಿ JMARTINEZ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಸುಮಾರು ಮಿಲಿಯನ್ ಗಳಷ್ಟು ವೀಕ್ಷಣೆ ಪಡೆದಿದ್ದು 1.1 ಮಿಲಿಯನ್ ನಷ್ಟು ಲೈಕ್ಸಗಳನ್ನು ಪಡೆದಿದೆ.