ಪ್ರೀತಿ ಎಂದರೆ ಇದು ಕಣ್ರೀ; ಹುಂಜಕ್ಕೆ ಲಾಕ್ ಮಾಡಿದ ನಂತರ ಅದನ್ನು ಬಿಡಿಸಲು ಕೋಳಿ ಮಾಡಿದ ಪ್ರಯತ್ನ ನೋಡಿ; ಅದ್ಭುತ!
ಪ್ರೀತಿಗೆ ಯಾವುದೇ ಬಂಧನದಲ್ಲಿ ಕೂಡಿ ಹಾಕಲು ಅಥವಾ ಲಾಕ್ ಮಾಡಿ ಇಡಲು ಸಾಧ್ಯವಿಲ್ಲ. ಇದರಲ್ಲಿ ಅದ್ಭುತವಾದ ಶಕ್ತಿ ಇದೆ. ದಿನನಿತ್ಯ ಪ್ರೇಮಿಗಳ ಅನೇಕ ರೀತಿಯ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಓದುತ್ತೇವೆ ಮತ್ತು ನೋಡುತ್ತೇವೆ. ಇಲ್ಲಿ ನಿರ್ಬಂಧದ ಶಬ್ದವೇ ಇಲ್ಲ. ಎರಡು ಜೀವಿಗಳನ್ನು ಎಷ್ಟೇ ಬೇರ್ಪಡಿಸಲು ಪ್ರಯತ್ನಿಸಿದರೂ ಮತ್ತೆ ಅವು ಒಂದುಗೂಡುವ ಸಫಲ ಪ್ರಯತ್ನ ಮಾಡಿಯೇ ತೀರುತ್ತವೆ.
ಈಗ ಸೋಶಿಯಲ್ ಮೀಡಿಯಾದಲ್ಲಿ ಕೋಳಿ ಮತ್ತು ಹುಂಜದ ಇದೇ ರೀತಿಯ ವಿಡಿಯೋ ಒಂದು ನಿಮ್ಮ ಮನವನ್ನು ಗೆಲ್ಲುವುದರಲ್ಲಿ ಸಂಶಯವೇ ಇಲ್ಲ. ಇದರ ಅದ್ಭುತ ಉದಾರಣೆ ಈ ವಿಡಿಯೋದಲ್ಲಿ ನೀವು ನೋಡಬಹುದು. ವಿಡಿಯೋದ ದೃಶ್ಯದಲ್ಲಿ ಕಂಡು ಬರುವ ಪ್ರಕಾರ, ಮಾಲೀಕ ಹುಂಜವನ್ನು ಗೂಡಿನಲ್ಲಿ ಕೂಡಿಹಾಕಿ ಗೂಡಿನ ಬಾಗಿಲನ್ನು ತುಂಬಾ ಸರಿಯಾಗಿ ಲಾಕ್ ಮಾಡುತ್ತಾನೆ. ಅದಕ್ಕೆ ಒಂದಲ್ಲ ಏಳೆಂಟು ಕಡ್ಡಿಗಳನ್ನು ತೋರಿಸಿ ಸರಿಯಾಗಿ ಬಾಗಿಲು ಮುಚ್ಚುತ್ತಾನೆ. ಸ್ವಲ್ಪ ಸಮಯದ ನಂತರ ಹುಂಜದ ಪ್ರೀತಿಯಾದ ಕೋಳಿ ಅಲ್ಲಿ ಬರುತ್ತದೆ. ಬಂದದ್ದೇ ತಕ್ಷಣ ತನ್ನ ಚುಂಚಿನಿಂದ ಒಂದೊಂದೇ ಲಾಕ್ ಗಳನ್ನು ತೆಗೆದು ಒಗೆಯಲು ಸ್ಟಾರ್ಟ್ ಮಾಡುತ್ತದೆ. ನಂತರ ಬಾಗಿಲು ತೆಗೆದು ತನ್ನ ಪ್ರೀತಿಯನ್ನು ಪಂಜರದಿಂದ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ನಂತರದ ಸುಂದರ ದೃಶ್ಯ ನೋಡಿ ಈ ವಿಡಿಯೋದಲ್ಲಿ….
View this post on Instagram
ಪ್ರೀತಿಯ ಸುಂದರ ವಿಡಿಯೋವನ್ನು gupta_kirti_03 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಮಿಲಿಯನ್ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ. ಈ ವಿಡಿಯೋಗೆ ನೆಟ್ಟಿಗರು 2 ಮಿಲಿಯನ್ ಗಿಂತಲೂ ಮೇಲ್ಪಟ್ಟು ಲೈಕ್ಸ್ ಗಳನ್ನು ಮಾಡಿದ್ದಾರೆ.