Video: ಜಿಂಕೆ ಮೇಲೆ ಹಠಾತ್ ಅಟ್ಯಾಕ್ ಮಾಡಿದ ಸಿಂಹಿಣಿ; ಗೇಮ್ ಹೊಡೆಯಿತು ಉಲ್ಟಾ! ಬಾಲ ಮುದುರಿಕೊಂಡು ಓಡಿ ಹೋದ ಸಿಂಹಿಣಿ.

ಸಿಂಹಕ್ಕೆ ಸುಮ್ಮನೆ ಕಾಡಿನ ರಾಜ ಎನ್ನುವುದಿಲ್ಲ. ಬೇಟೆ ಇದರ ಅಟ್ಯಾಕ್ ನಿಂದ ತಪ್ಪಿಸಿಕೊಳ್ಳುವುದೇ ದುರ್ಲಭ. ಇಂಥದರಲ್ಲಿ ಜಿಂಕೆಯೊಂದು ಸಿಂಹದ ಕೈಯಿಂದ ತಪ್ಪಿಸಿಕೊಂಡು ಓಡಿಹೋದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಜಿಂಕೆಯು ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಹೊಂಡದಲ್ಲಿಯ ನೀರನ್ನು ಕುಡಿಯುತ್ತಿದೆ. ಸರಿಯಾಗಿ ಇದೇ ಸಮಯಕ್ಕೆ ಹೆಣ್ಣು ಸಿಂಹ ಒಂದು ಜಿಂಕೆಯ ಬೇಟೆಗೆ ಪ್ಲಾನ್ ಹಾಕಿದೆ. ಅದು ತನ್ನ ಪ್ಲಾನ್ ಪ್ರಕಾರ ಶಾಂತವಾಗಿ ಜಿಂಕೆಯ ಹಿಂದಿನಿಂದ ಹಠಾತ್ ಅಟ್ಯಾಕ್ ಮಾಡಿದೆ. ಈ ಗಂಡಾಂತರವನ್ನು ಭಾವಿಸದ ಜಿಂಕೆ ತನ್ನಷ್ಟಕ್ಕೆ ತಾನು ನೀರು ಕುಡಿಯುತ್ತಿದೆ. ಆಕಸ್ಮಿಕವಾದ ತನ್ನ ಮೇಲಾದ ಅಟ್ಯಾಕ್ ನಿಂದಾಗಿ ಜಿಂಕೆಯು ಒಮ್ಮೆಲೇ ತಬ್ಬಿಬ್ಬಾಗಿದೆ. ಆದರೂ ಜಿಂಕೆ ತನ್ನ ಬದುಕಿನ ಹೋರಾಟ ಮುಂದುವರಿಸಿ ಸಿಂಹದ ಹಿಡಿತವನ್ನು ಸಡಿಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಜಿಂಕೆಯು ತನಗಿರುವ ವರ್ತುಲಾಕಾರದ ಕೊಂಬಿನ ಉಪಯೋಗವನ್ನು ತುಂಬಾ ಒಳ್ಳೆಯದಾಗಿ ತೆಗೆದುಕೊಂಡಿದೆ. ಹೆಣ್ಣು ಸಿಂಹವು ಜಿಂಕೆಯ ಹೋರಾಟದಿಂದ ಸಂಪೂರ್ಣವಾಗಿ ಬೆದರಿದೆ, ಮತ್ತು ಬದುಕಿದರೆ ಸಾಕೆಂಬ ಭಾವನೆಯಿಂದ ಬಾಲಮುದುರಿಕೊಂಡು ನೀರಿನ ಮುಖಾಂತರ ಓಡಿಹೋಗಿದೆ.

ನೋಡಿ ಈ ವಿಡಿಯೋ…

ಜಿಂಕೆಯ ಎಡೆಬಿಡದ ಹೋರಾಟ ಮತ್ತು ತನ್ನ ಜೀವ ಉಳಿಸಿಕೊಂಡ ದೃಶ್ಯದ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 13 ಲಕ್ಷಕ್ಕೂ ಮೀರಿ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ ಸುಮಾರು 75000 ಸನಿಹ ಲೈಕ್ಸಗಳನ್ನು ಹೊಂದಿದೆ.