ನೀರು ಹೊಯ್ಯುವ ಕೆಲಸವನ್ನೇ ಬಿಟ್ಟು ತಾನೇ ನೀರು ಕುಡಿಯುತ್ತಿರುವ ‘ನಲ್ಲಿ’! ಇಲ್ಲಿ ನೋಡಿ ತಮಾಷೆಯ VIDEO.
ಸಾಧಾರಣವಾಗಿ ನಲ್ಲಿಯನ್ನು ನೋಡಿದಾಗ ಅದರಲ್ಲಿನ ನೀರು ಬರುತ್ತೆ ಎಂಬ ಸಹಜ ಮನಸ್ಥಿತಿ ನಮ್ಮದಾಗಿದೆ. ಅಷ್ಟೇ ಏಕೆ ಇನ್ನಿತರ ಪ್ರಾಣಿ ಪಕ್ಷಿಗಳು ಸಹ ಅದರ ಹತ್ತಿರ ನೀರು ಸಿಗುತ್ತೆ ಅಂತಲೇ ಬರುತ್ತವೆ, ತಮ್ಮ ಬಾಯಾರಿಕೆಯನ್ನು ನಲ್ಲಿಯು ನೀಗಿಸುತ್ತದೆ ಎಂಬ ಭಾವನೆಯಿಂದಲೇ ಅದರ ಹತ್ತಿರ ಬರುತ್ತವೆ. ಆದರಿಲ್ಲಿ ನೋಡುವ ವಿಡಿಯೋದಲ್ಲಿ ನಲ್ಲಿಯೇ ನೀರು ಕುಡಿಯುತ್ತಿದೆ ಎಂದರೆ ನಂಬುತ್ತೀರಾ?
ಹೌದು ನಂಬಲೇ ಬೇಕು. ಈ ನಲ್ಲಿಯೊಂದು ಎಷ್ಟು ದಿನಗಳಿಂದ ನೀರಿನ ತೃಷೆಯಿಂದ ಮರಗುತ್ತಿದೆ ಗೊತ್ತಿಲ್ಲ! ಆದರೆ ಈ ನಲ್ಲಿ ಮಾತ್ರ ಚೆನ್ನಾಗಿಯೇ ನೀರು ಕುಡಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನೀರು ತುಂಬಿದ ಗ್ಲಾಸ್ ನ್ನು ಸಿಂಕ್ ಮೇಲಿನ ನಲ್ಲಿಯ ಮುಂದೆ ಹಿಡಿಯುತ್ತಾನೆ. ನಂತರ ಅದನ್ನು ನಲ್ಲಿಯ ಬಾಯಿಗೆ ಹಿಡಿದದ್ದೇ ತಡ, ನಲ್ಲಿಯು ಗಟಗಟನೆ ಗ್ಲಾಸ್ ನಲ್ಲಿಯ ನೀರು ಕುಡಿಯಲು ಶುರು ಮಾಡಿ ಬಿಡುತ್ತದೆ, ಅದು ಸಂಪೂರ್ಣವಾಗಿ. ಪ್ರಸ್ತುತ ವಿಡಿಯೋ ನೋಡುವವರಿಗೆ ತುಂಬಾ ತಮಾಷೆ ಎನಿಸುತ್ತಿದೆ. ಬೇಲಿಯೇ ಎದ್ದು ಹೊಲ ಮೇಯುವ ಸಮಸ್ಯೆಯ ಹಾಗೆ, ನೀರು ಹೊಯ್ಯುವ ನಲ್ಲಿಯೇ ನೀರು ಕುಡಿಯಲು ಶುರು ಮಾಡಿದರೆ ಹೇಗೆ ಎಂಬ ಪ್ರಶ್ನೆ ಇಲ್ಲಿ ಹುಟ್ಟು ಹಾಕುತ್ತಿದೆ.
ವೀಡಿಯೋ ನೋಡಿ
View this post on Instagram
ಈ ನಲ್ಲಿ ಮಾಡುತ್ತಿರುವ ಸಂಪೂರ್ಣ ಉಲ್ಟಾ ಕೆಲಸಿನ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ videonation_teb ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಜನರನ್ನು ಆಶ್ಚರ್ಯಕ್ಕೆ ತಳ್ಳಿದೆ. ಸುಮಾರು ಸಾವಿರ ಜನ ಈ ವಿಡಿಯೋಗೆ ಲೈಕ್ ಸಹ ಮಾಡಿದ್ದಾರೆ.