ಅಕ್ಕಳ ಈ ಸೂಪರ್ ಮೈಂಡ್ ಗೆ ನಾಸಾ ಸಹ ಬೆಚ್ಚಿ ಬೀಳಬಹುದು; ಮುಂದಿನ ನೊಬೆಲ್ ಪ್ರಶಸ್ತಿ ಈ ಅಕ್ಕಳಿಗೆ ಮಾತ್ರ ಎಂದ ನೆಟ್ಟಿಗರು.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವು ವಿಡಿಯೋಗಳು ಒಮ್ಮೊಮ್ಮೆ ನೆಟ್ಟಿಗರನ್ನು ಬೆಚ್ಚಿ ಬೀಳಿಸುತ್ತದೆ ಎಂದರೆ ತಪ್ಪಲ್ಲ. ಸದ್ಯ ಇದೇ ರೀತಿಯ ಬೆಚ್ಚಿ ಬೀಳಿಸುವ ಅಕ್ಕಳ ಸೂಪರ್ ಮೈಂಡ್ ನ ದರ್ಶನ ನೀಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ವಾ…ವ್ವಾ ಗಿಟ್ಟಿಸುತ್ತಿದೆ
ಪ್ರಸ್ತುತ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಅತೀ ಬುದ್ಧಿವಂತಿಕೆಯನ್ನು ಮೆರೆದಿದ್ದಾಳೆ ಎಂದರೆ ತಪ್ಪಾಗುವುದಿಲ್ಲ. ಕಾರಣ ಅಂಥ ಐಡಿಯಾವನ್ನೇ ಮಹಿಳೆ ಇಲ್ಲಿ ಜಗತ್ತಿಗೆ ತೋರಿಸಿದ್ದಾಳೆ ಎನ್ನಬಹುದು.

ಮನೆಯಲ್ಲಿ ಉಪಯೋಗಕ್ಕೆ ಬಾರದ ಹಾಸಿಗೆಗಳನ್ನು ಪಾಲಿಥೀನ್ ನಲ್ಲಿ ಪ್ಯಾಕ್ ಮಾಡಿ ಇಡುವಾಗ ಒಳಗೆ ತುಂಬಾ ಹವೆ ತುಂಬಿಕೊಳ್ಳುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಮಹಿಳೆ ಈ ಸಮಸ್ಯೆಯನ್ನು ವಾಕ್ಯುಮ್ ಕ್ಲೀನರ್ ಉಪಯೋಗ ಮಾಡಿಕೊಂಡು ತುಂಬಾ ಈಜಿಯಾಗಿ ಹಾಗೂ ಹಗುರವಾಗಿ ಮಾಡಿದ್ದಾಳೆ. ಜೊತೆಗೆ ಬಳಸಲು (ಹ್ಯಾಂಡಲ್ ಮಾಡಲು) ಸರಳವಾಗುವಂತೆ ಟ್ರಿಕ್ ಒಂದನ್ನು ಯೂಸ್ ಮಾಡಿದ್ದಾಳೆ. ಮಹಿಳೆಯ ಈ ಟ್ಯಾಲೆಂಟ್ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಹಳೆಯ ಬಟ್ಟೆಗಳನ್ನು ಅಥವಾ ದೊಡ್ಡ ದೊಡ್ಡ ಹಾಸಿಗೆಗಳನ್ನು ಪಾಲಿಥೀನ್ ಬ್ಯಾಗ್ ನಲ್ಲಿ ಹಾಕಿ ಪ್ಯಾಕ್ ಮಾಡುವಾಗ ಅವು ಹವೆಯಿಂದಾಗಿ ಹಾಗೆಯೇ ಉಬ್ಬಿಕೊಂಡು ಕುಳಿತುಕೊಳ್ಳುತ್ತವೆ. ಅದಕ್ಕಾಗಿ ಈ ಮಹಿಳೆ ವಾಕ್ಯೂಮ್ ಕ್ಲೀನರ್ ಸಹಾಯ ಪಡೆದು ಒಳಗಿನ ಎಲ್ಲ ಏರ್ ನ್ನು ಸಲೀಸಾಗಿ ಹೊರಗೆ ತೆಗೆದು ಬ್ಯಾಗ್ ತುಂಬಾ ಚಿಕ್ಕದನ್ನಾಗಿ ಮಾಡಲು ಯಶಸ್ವಿಯಾಗಿದ್ದಾಳೆ.

ವೀಡಿಯೋ ನೋಡಿ

ಮಹಿಳೆಯ ಟ್ಯಾಲೆಂಟ್ ನ ಈ ವಿಡಿಯೋ ಟ್ವಿಟರ್ ನಲ್ಲಿ @fastworkers6 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು, ಕ್ಯಾಪ್ಶನ್ ನಲ್ಲಿ ನಾಸಾ ನಿಮ್ಮನ್ನು ಗಮನಿಸುತ್ತಿದೆ ಎಂದು ಬರೆಯಲಾಗಿದೆ. ವಿಡಿಯೋ ನೋಡಿದ ಅನೇಕ ನೆಟ್ಟಿಗರು ತುಂಬಾ ಇಂಪ್ರೆಸ್ ಆಗಿ ತರತರದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಯೂಸರ್, ‘ನಿಮ್ಮ ಬ್ರೇನ್ ಯಾವಾಗ 100% ಯೂಸ್ ಮಾಡುತ್ತೀರಿ ಆಗ ಇಂಥ ಐಡಿಯಾ ಹೊಳೆಯಲು ಸಾಧ್ಯ’ ಎಂದಿದ್ದಾನೆ.