ಲಡಾಖ್ ಘರ್ಷಣೆ : ಯೋಧ ರಾಜೇಶನ ಮದುವೆ ತಯಾರಿ ನಡೆಸಿತ್ತು ಕುಟುಂಬ, ಆದರೆ ‘ಹುತಾತ್ಮ’ನಾದ ಸುದ್ದಿ ಬಂತು!

ಲದ್ದಾಕ್ ನ ಗಲವಾನ್ ಕಣಿವೆಯಲ್ಲಿ ಚೀನಾದ ಸೇನೆಯ ಜೊತೆ ಸೆಣೆಸಾಟ ನಡೆದಾಗ ರಾಜೇಶ್ ಒರಂಗ್ ಇವರು ಮೂವರು ಅಣ್ಣ-ತಂಗಿಯರಲ್ಲಿ ಹಿರಿಯರಾದವರು ಹುತಾತ್ಮರಾಗಿದ್ದಾರೆ. 2015 ರಲ್ಲಿ ಸೇನೆಯಲ್ಲಿ ಶಾಮೀಲಾಗಿದ್ದರು.

ಶೋಕಾಕುಲರಾದ ತಂದೆ ಸುಭಾಷ್ ಬುಧವಾರ ಮುಂಜಾನೆ ಹೇಳುತ್ತಾರೆ, ನನ್ನ ಮಗ ದೇಶಕ್ಕಾಗಿ ತನ್ನ ಜೀವನವನ್ನೇ ಅರ್ಪಣ ಮಾಡಿದ್ದಾರೆ.

ತಾಯಿ ಮಮತಾ ಸದ್ಯಕ್ಕೆ ಮಾತನಾಡುವ ಸ್ಥಿತಿಯಲ್ಲಿಲ್ಲ. ತಾಯಿ ಮುಂಬರುವ ಸೂಟಿಯಲ್ಲಿ, ಅಥವಾ ಬಿಡುವಿನಲ್ಲಿ ಮಗ ಮನೆಗೆ ಬಂದಾಗ ಮದುವೆ ಮಾಡುವ ಕನಸು ಹೊತ್ತು ಕುಳಿತಿದ್ದಳು.

ತಂದೆ ಸುಭಾಷ್ ಅವರು ಹೇಳುತ್ತಾರೆ, ರಾಜೇಶನಿಗೆ ಇಬ್ಬರು ಚಿಕ್ಕ ಸಹೋದರಿಯರು ಇದ್ದಾರೆ. ರಾಜೇಶ್ 2015 ರಲ್ಲಿ ಸೇನೆಯಲ್ಲಿ ಶಾಮೀಲಾಗಿ ಈಗ ಬಿಹಾರ್ ರೇಜಿಮೆಂಟ್ ನಲ್ಲಿದ್ದಾರೆ.

ಸೇನೆಯ ಅಧಿಕಾರಿಗಳು ಮಂಗಳವಾರ ರಾತ್ರಿ ರಾಜೇಶನು ಹುತಾತ್ಮನಾದ ಬಗ್ಗೆ ಸೂಚನೆಯನ್ನು ಕೊಟ್ಟಿದ್ದರು. ಮಗ ರಾಜೇಶನ ವಯಸ್ಸು 20 ಇತ್ತು.

ರಾಜೇಶ್ ನ ಚಿಕ್ಕ ತಂಗಿ ಶಕುಂತಲಾ, ಚಿಕ್ಕಂದಿನಿಂದ ನನ್ನ ಅಣ್ಣ ದೇಶಸೇವೆಯನ್ನು ಮಾಡುವ ಆಸೆಯನ್ನಿಟ್ಟಿದ್ದ. ಆದ್ದರಿಂದ ಸೇನೆಯಲ್ಲಿ ಶಾಮೀಲಾಗಿ ತುಂಬಾ ಖುಷಿ ಪಟ್ಟಿದ್ದ. ಕೆಲವು ತಿಂಗಳುಗಳ ಹಿಂದೆ ನನ್ನ ಅಣ್ಣ ಮನೆಗೆ ಬಂದಿದ್ದಾಗ ಆತನ ಮದುವೆಯ ಬಗ್ಗೆ ಚರ್ಚೆಗಳು ನಡೆದಿದ್ದವು ಎಂದು ಹೇಳಿದ್ದಾಳೆ.

ಪಶ್ಚಿಮ ಬಂಗಾಳದಲ್ಲಿಯ ಬೀರಭೂಮ್ ಜಿಲ್ಲೆಯಲ್ಲಿ ಬರುವ ಮೊಹಮ್ಮದ್ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೆಲೋಗೋರಿಯಾ ಊರಿನಲ್ಲಿಯ ಸಾಧಾರಣ ರೈತ ಸುಭಾಷ್ ಬಡತನದಲ್ಲಿಯೇ ತನ್ನ ಮಗನನ್ನು ಶಾಲೆ ಕಲಿಸಿ ಸೇನೆಯಲ್ಲಿ ಸೇರಿಸಿದ್ದನು.

ಸೋಮವಾರ ರಾತ್ರಿ ಗಲವಾನ್ ಕಣಿವೆಯಲ್ಲಿ ಚೀನಾದ ಸೈನಿಕರ ಜೊತೆಗೆ ಆದ ಆಕ್ರಮಣದಲ್ಲಿ ರಾಜೇಶ್ ಆ 20 ಭಾರತೀಯ ಸೈನ್ಯರಲ್ಲಿ ಒಬ್ಬನಾಗಿದ್ದನು. ಕಳೆದ 20 ವರ್ಷಗಳಲ್ಲಿ ಚೀನಾದ ಜೊತೆಗೆ ದೊಡ್ಡ ಜಗಳವಾಗಿದೆ. ಇದರಿಂದ ಆ ಕ್ಷೇತ್ರದಲ್ಲಿ ಮೊದಲೇ ನಡೆದ ಸೈನ್ಯದ ಚಲವಲನೆಗಳು ತೀವ್ರಗೊಂಡಿವೆ.