ಬರೀ 5 ಸೇಕೆಂಡಿನಲ್ಲಿ ಐರನ್ ಮಾಡಿದ ಶರ್ಟ್ ಫೋಲ್ಡ್ ಮಾಡೋದು ಹೇಗೆ? ಟ್ರಿಕ್ ನೋಡಿ ಈ ವೈರಲ್ VIDEO ದಲ್ಲಿ.
ಸೋಶಿಯಲ್ ಮೀಡಿಯಾದಲ್ಲಿ ನೂರಾರು ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಉಪಾಯಗಳ ವಿಡಿಯೋಗಳು ನೋಡಲು ಸಿಗುತ್ತವೆ. ಈ ವಿಡಿಯೋಗಳನ್ನು ನೋಡಿದಾಗ ಈ ಕೆಲಸ ಇಷ್ಟೊಂದು ಸರಳವಾಗಿತ್ತಾ? ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ವಿಧವಿಧವಾದ ಬಟ್ಟೆಗಳನ್ನು ತೊಟ್ಟುಕೊಳ್ಳುವುದೆಂದರೆ ಎಲ್ಲರಿಗೂ ಎಷ್ಟು ಇಷ್ಟವೋ, ಅಷ್ಟೇ ಆ ಬಟ್ಟೆಗಳನ್ನು ಐರನ್ ಮಾಡುವುದು ನಂತರ ಅವುಗಳನ್ನು ಫೋಲ್ಡ್ ಮಾಡಿ ಇಡುವದೆಂದರೆ ಅಷ್ಟೇ ಕಷ್ಟ. ಸದ್ಯ ಈ ಕ್ಲಿಷ್ಟಕರವಾದ ಸಮಸ್ಯೆಯನ್ನು ಕ್ಷಣದಲ್ಲಿ ಬಗೆಹರಿಸುವ ಉಪಾಯದ ವಿಡಿಯೋ ಒಂದನ್ನು ನಿಮಗೆ ತೋರಿಸಲಿದ್ದೇವೆ.
ಐರನ್ ಮಾಡಿದ ನಂತರ ಸಾಕಷ್ಟು ಜನರಿಗೆ ಶರ್ಟ್ ಫೋಲ್ಡ್ ಮಾಡುವದು ಎಂದರೆ ತುಂಬಾನೇ ಬೇಸರ. ಆದರೆ ಈ ವಿಡಿಯೋ ನೋಡಿದ ನಂತರ ಈ ನಿಮ್ಮ ಸಮಸ್ಯೆ ಕ್ಷಣದಲ್ಲಿ ಮಾಯವಾಗುವ ಬಗ್ಗೆ ಸಂದೇಹವೇ ಇಲ್ಲ.
ಅದಕ್ಕಾಗಿ ಮೊದಲು ಈ ವಿಡಿಯೋ ನೋಡಿ…
ವಿಡಿಯೋದಲ್ಲಿ ಮಹಿಳೆಯು ಐರನ್ ಮಾಡಿದ ಶರ್ಟ್ ನ್ನು ಬರೀ 5 ಸೆಕೆಂಡುಗಳಲ್ಲಿ ತುಂಬಾ ಚೆನ್ನಾಗಿ ಫೋಲ್ಡ್ ಮಾಡಿ ತೋರಿಸಿದ್ದಾಳೆ. 10 ಸೆಕೆಂಡಿನ ಈ ವಿಡಿಯೋದಲ್ಲಿ 5 ಸೆಕೆಂಡ್ ಫೋಲ್ಡ್ ಹೇಗೆ ಮಾಡುವದು? ಎಂಬುದರ ಬಗ್ಗೆ ಐಡಿಯಾ ಹೇಳುತ್ತಾಳೆ ನಂತರ ಉಳಿದ ಐದು ಸೆಕೆಂಡ್ ನಲ್ಲಿ ಮಹಿಳೆ ಹೇಳಿದ ಹಾಗೆ ಫೋಲ್ಡ್ ಮಾಡಿ ತೋರಿಸುತ್ತಾಳೆ..
ವೀಡಿಯೋ ನೋಡಿ.
How to quickly fold a shirt. pic.twitter.com/hO0v3dZdjk
— Fascinating (@fasc1nate) October 19, 2022
ಹೇಗಿದೆ ಈ ಟ್ರಿಕ್ ಫ್ರೆಂಡ್ಸ್? ಸೂಪರ್ ಅಲ್ವಾ? ಶರ್ಟ್ ಫೋಲ್ಡ್ ಮಾಡುವ ಒಳ್ಳೆಯ ಉಪಾಯದ ಈ ವೀಡಿಯೋವನ್ನು ಟ್ವಿಟರ್ ನಲ್ಲಿ Fascinating ಹೆಸರಿನ ಐಡಿಯೊಂದರಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 7 ಮಿಲಿಯನ್ ಗಿಂತಲೂ ಜಾಸ್ತಿ ವೀಕ್ಷಣೆಯನ್ನು ಪಡೆದಿದೆ. ಇದರ ಮೇಲಿಂದಲೇ ಗೊತ್ತಾಗುತ್ತದೆ ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ ಎಂದು.