2.3 ಮಿ. ❤️) ಬಾಲ್ಯದ ದಿನಗಳನ್ನು ನೆನಪಿಸುವ ಅಮೋಘ VIDEO ವೈರಲ್! ವಿಡಿಯೋದ ಎಂಡ್ ನಲ್ಲಿದೆ ಸೂಪರ್ ಸೀನ್..!
ಬಾಲ್ಯದ ದಿನಗಳು ನೆನಪಿಗೆ ಬಂದಾಗ ಮನಸ್ಸು ಭಾರವಾಗುವುದು. ಜವಾಬ್ದಾರಿಯ ಜಂಜಾಟದಲ್ಲಿ ಸಿಕ್ಕ ಮನಸ್ಸಿಗೆ ಯಾಕಾದರೂ ದೊಡ್ಡವರಾದೆವು ಎಂಬ ನೋವು ಕಾಡುತ್ತದೆ. ಚಿಕ್ಕಂದಿನ ಆ ದಿನಗಳನ್ನು ನೆನೆದಾಗ ಗೆಳೆಯರ ಜೊತೆಗೆ ಆಡಿದ ತುಂಟಾಟದ ದೃಶ್ಯಗಳು ಒಂದರ ನಂತರ ಒಂದು ಸರಣಿಯಂತೆ ಮೆಲಕು ಹಾಕುತ್ತವೆ. ನಿಸ್ವಾರ್ಥದ ಆ ಗೆಳೆತನವೆಲ್ಲಿ? ಸ್ವಾರ್ಥ ತುಂಬಿದ ಈಗಿನ ಗೆಳೆತನವೆಲ್ಲಿ? ಎರಡರ ಮಧ್ಯದ ಅಂತರ ಸ್ಪಷ್ಟವಾಗಿ ಕಣ್ಣ ಮುಂದೆ ನಿಲ್ಲುತ್ತದೆ. ಬಾಲ್ಯದ ಆ ದಿನಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸುವರ್ಣ ಕ್ಷಣಗಳಾಗಿರುತ್ತವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದನ್ನೇ ನೆನಪಿಸುವ ಚಿಕ್ಕ ಮಕ್ಕಳ ಸುಂದರ ವಿಡಿಯೋ ಒಂದು ನೆಟ್ಟಿಗರಿಗೆ ತುಂಬಾ ಎಮೋಷನಲ್ ಮಾಡುತ್ತಿದೆ.
ಈ ವಿಡಿಯೋದ ದೃಶ್ಯದಲ್ಲಿ ನಾಲ್ಕು ಚಿಕ್ಕ ಮಕ್ಕಳು ಕಂಡುಬರುತ್ತಿವೆ. ನಾಲ್ಕೂ ಮಕ್ಕಳಲ್ಲಿ ಮೂವರು ಅಡ್ಡಲಾಗಿದ್ದ ಕಟ್ಟಿಗೆಯ ಬಾಂಬುವಿನ ಮೇಲೆ ಕುಳಿತಿದ್ದಾರೆ. ಇನ್ನೊಬ್ಬ ಅವರಂತೆ ತಾನು ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆದರೆ ಆತ ಆ ಪ್ರಯತ್ನದಲ್ಲಿ ಸಫಲವಾಗುತ್ತಿಲ್ಲ. ಇದನ್ನು ನೋಡಿದ ಬೇರೊಬ್ಬ ಮಿತ್ರ ಆತನಿಗೂ ಬಾಂಬುವಿನ ಮೇಲೆ ಕೂಡಿಸುವದಕ್ಕಾಗಿ ಸಹಾಯ ಮಾಡಲು ಮುಂದಾಗುತ್ತಾನೆ. ಈ ಪ್ರಯತ್ನದಲ್ಲಿ ಇಬ್ಬರೂ ಕೂಡಿ ಕೆಳಗೆ ಬೀಳುತ್ತಾರೆ. ಇಷ್ಟಾದರೂ ಸೋಲಪ್ಪದ ಹುಡುಗ ಯಾರ ಸಹಾಯವಿಲ್ಲದೆ ತಾನೇ ಕುಳಿತುಕೊಳ್ಳಲು ಮುಂದಾಗುತ್ತಾನೆ. ಈ ಪ್ರಯತ್ನದಲ್ಲಿ ಆತ ಯಶಸ್ವಿಯೂ ಆಗುತ್ತಾನೆ ಎನ್ನುವಷ್ಟರಲ್ಲಿಯೇ ಹುಡುಗನ ಬ್ಯಾಲೆನ್ಸ್ ತಪ್ಪುತ್ತದೆ. ಆಗ ಇನ್ನೇನು ತಾನು ಕೆಳಗೆ ಬೀಳುತ್ತೇನೆ ಎನ್ನುವಷ್ಟರಲ್ಲಿ ಬದಿಗೆ ಕುಳಿತ ಮಿತ್ರನನ್ನು ಹಿಡಿಯಲು ಹೋಗುತ್ತಾನೆ. ಆಗ ಮತ್ತಷ್ಟು ತಮಾಷೆಯ ಸಂಗತಿಯೊಂದು ನಡೆಯುತ್ತದೆ. ಅದೇನೆಂದರೆ ಇಬ್ಬರೂ ಕೂಡಿಯೇ ಧಪ್ ಅಂತ ಕೆಳಗೆ ಬೀಳುತ್ತಾರೆ. ಈ ಚಿಕ್ಕ ಮಕ್ಕಳ ನ್ಯಾಚುರಲ್ ದೃಶ್ಯ ನೆಟ್ಟಿಗರಿಗೆ ತುಂಬಾ ತುಂಬಾ ಮೋಡಿ ಮಾಡಿದೆ.
ವೀಡಿಯೋ ನೋಡಿ
View this post on Instagram
ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಅಮೋಘವಾದ ಬಾಲ್ಯದ ದಿನಗಳನ್ನು ಮರುಕಳಿಸುವ ಈ ಸುಂದರ ವಿಡಿಯೋದ ತುಣಕನ್ನು ಇನ್ಸ್ಟಾಗ್ರಾಮ್ ನಲ್ಲಿ devil_kabir ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಹದ್ದು ಮೀರಿ ವೈರಲ್ ಆಗಿದ್ದು ಮಿಲಿಯನ್ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ 2.3 ಮಿಲಿಯನ್ ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.