Video; ಸಮಯವಿದ್ದರೆ ಈ ಮಂಗಣ್ಣನ ಪ್ರೊಫೆಷನಲ್ ಸ್ಕೇಟಿಂಗ್ ಆಟ ಸ್ವಲ್ಪ ನೋಡಿ! ಏನು ಟ್ಯಾಲೆಂಟ್…

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಬುದ್ಧಿವಂತಿಕೆಯ ಅನೇಕ ವಿಡಿಯೋಗಳು ನೋಡಲು ಸಿಗುತ್ತವೆ. ಇಂಥ ಅದ್ಭುತ ವಿಡಿಯೋಗಳು ಇಂಟರ್ನೆಟ್ ನಲ್ಲಿ ವೈರಲ್ ಆಗುವುದು ಉಂಟು. ಸದ್ಯ ಇದೇ ರೀತಿಯ ಮಂಗಣ್ಣನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಬರಿ ಮನುಷ್ಯರಲ್ಲಷ್ಟೇ ಟ್ಯಾಲೆಂಟ್ ಇದೆ ಎಂದು ತಿಳಿಯಬೇಡಿ. ಕಾರಣ ಮಂಗಣ್ಣನ ಸ್ಕೇಟಿಂಗ್ ಆಡುವ ಈ ವಿಡಿಯೋ ನೋಡಿದಾಗ ನೀವು ಯೋಚನೆಯಲ್ಲಿ ಬೀಳುತ್ತೀರಿ. ಸ್ಕೇಟಿಂಗ್ ಆಡುವ ಪ್ರಾರಂಭದ ಹಂತದಲ್ಲಿ ಮನುಷ್ಯ ಅನೇಕ ಸಲ ಬ್ಯಾಲೆನ್ಸ್ ಆಗದೆ ಕೆಳಗೆ ಬೀಳುತ್ತಾನೆ. ಆದರೆ ಈ ವಿಡಿಯೋದಲ್ಲಿ ಮಂಗ ಎಕ್ಸಪಿರಿಯನ್ಸ್ ಮಕ್ಕಳಂತೆ ರೋಡ್ ಮೇಲೆ ತುಂಬಾ ಈಸಿಯಾಗಿ ಅಷ್ಟೇ ಪ್ರೊಫೆಷನಲ್ ತರ ಸ್ಕೇಟಿಂಗ್ ಆಡುತ್ತಿರುವುದು ಕಂಡು ಬರುತ್ತಿದೆ. ವಿಡಿಯೋ ನೋಡಿದ ನಂತರ ಈ ಮಂಗಣ್ಣನಲ್ಲಿ ತುಂಬಾ ಟ್ಯಾಲೆಂಟ್ ಇದ್ದ ಹಾಗೆ ಕಾಣುತ್ತಿದೆ ಎಂದು ನೀವೇ ಎನ್ನುತ್ತೀರಾ. ಸಿಮೆಂಟ್ ರೋಡ್ ಮೇಲೆ ಮಂಗವು ತುಂಬಾ ಚೆನ್ನಾಗಿ ಸ್ಕೇಟಿಂಗ್ ಆಡುತ್ತಿದೆ. ಮಧ್ಯದಲ್ಲಿ ಅಡೆತಡೆ ಬಂದಾಗ ಮಂಗವು ಜಂಪ್ ಮಾಡುವುದು ಕಂಡು ಬರುತ್ತದೆ. ಮಂಗನಲ್ಲಿರುವ ಈ ಕಲಾಗುಣಗಳನ್ನು ನೋಡಿದ ನೆಟ್ಟಿಗರು ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ. ಎನಿಮಲ್ ಲವರ್ಸ್ ಗಳು ಈ ವಿಡಿಯೋವನ್ನು ಹೆಚ್ಚಾಗಿ ಲೈಕ್ ಮಾಡುತ್ತಿದ್ದಾರೆ ಹಾಗೂ ಜೊತೆಗೆ ಶೇರ್ ಸಹ ಮಾಡುತ್ತಿದ್ದಾರೆ.

ವೀಡಿಯೋ ನೋಡಿ

ಪ್ರಸ್ತುತ ಮಂಗನ ಈ ಸುಂದರ ವಿಡಿಯೋವನ್ನು
@MorissaSchwartz ಹೆಸರಿನ ಐಡಿಯಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷ ಲಕ್ಷ ಜನರು ನೋಡಿ ಆನಂದಿಸಿದ್ದಾರೆ. ಮತ್ತು ಅಷ್ಟೇ ಅಲ್ಲದೆ ಮಂಗನಲ್ಲಿರುವ ಸ್ಕಿಲ್ ಬಗ್ಗೆ ಸಾಕಷ್ಟು ಹೊಗಳುತ್ತಿದ್ದಾರೆ. ಒಬ್ಬ ಯೂಸರ್ ಈ ಮಂಗನಲ್ಲಿ ತುಂಬಾ ಟ್ಯಾಲೆಂಟೆ ತುಂಬಿದೆ ಎಂದರೆ ಇನ್ನೊಬ್ಬ ನನಗಿಂತಲೂ ತುಂಬಾ ಚೆನ್ನಾಗಿ ಸ್ಕೇಟಿಂಗ್ ಆಡುತ್ತಿದೆ ಈ ಮಂಗ ಎಂದಿದ್ದಾನೆ.