Video; ಚಿರತೆ ಕಾಡಿನಲ್ಲಿ ಅಳವಡಿಸಿದ ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬ ನೋಡಿ ಕೊಟ್ಟಿತು ಖತರ್ನಾಕ್ ರಿಯಾಕ್ಷನ್!
ಪ್ರಾಣಿಗಳ ವಿಡಿಯೋಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಅಭಿರುಚಿಯಿಂದ ನೋಡುವದು ಕಂಡು ಬರುತ್ತವೆ. ಸಾಕಷ್ಟು ಜನರು ವಿವಿಧ ಪ್ರಾಣಿಗಳ ಬಗ್ಗೆ ಏನಾದರೂ ಹೊಸದನ್ನು ನೋಡಲು ಮತ್ತು ತಿಳಿದುಕೊಳ್ಳಲು ಆಶಿಸುತ್ತಾರೆ. ಹೀಗಾಗಿ ವೈಲ್ಡ್ ಫೋಟೋಗ್ರಾಫರ್ ಗಳು ಸಹ ಕಾಡಿನಲ್ಲಿಯ ಪ್ರಾಣಿಗಳ ಜೊತೆಗೆ ಅನೇಕ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ಸದ್ಯ ಅವರು ಮಾಡಿದ ಕನ್ನಡಿಯ ವಿಶೇಷ ಪ್ರಯೋಗದ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ಕಾಡಿನಲ್ಲಿ ಒಂದು ದೊಡ್ಡ ಕನ್ನಡಿಯನ್ನು ಹಚ್ಚಲಾಗಿದೆ. ಅಲ್ಲಿಂದಲೇ ಚಿರತೆಯೊಂದು ಹಾಯ್ದು ಹೋಗುತ್ತಿರುವಾಗ ತನ್ನ ಪ್ರತಿಬಿಂಬವನ್ನು ಆ ಕನ್ನಡಿಯಲ್ಲಿ ನೋಡುತ್ತದೆ. ಅದು ತನ್ನ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡುತ್ತಲೇ ಆಶ್ಚರ್ಯವಾಗುವದರ ಜೊತೆಗೆ ಅದಕ್ಕೆ ಕೋಪವೂ ಬರುತ್ತದೆ. ಬಂದ ಕೋಪಿನಿಂದಾಗಿ ಚಿರತೆ ಒಂದೇ ಸವನೆ ಕನ್ನಡಿಯ ಮುಂದೆ ತನ್ನದೇ ಪ್ರತಿಬಿಂಬಿಕ್ಕೆ ರೇಗಿಸಲು ಮತ್ತು ಅದರ ಮೇಲೆ ಏರಿ ಹೋಗಿ ಹೊಡೆಯಲು ಪ್ರಯತ್ನ ಮಾಡುತ್ತದೆ. ಒಟ್ಟಿನಲ್ಲಿ ಚಿರತೆ ಮಾತ್ರ ಇಲ್ಲಿ ತುಂಬಾ ಕ್ರೋಧದಲ್ಲಿ ಕಂಡು ಬರುತ್ತಿದೆ.
ಚಿರತೆಯ ರಿಯಾಕ್ಷನ್ ನೋಡಿ ಈ ವಿಡಿಯೋದಲ್ಲಿ…
https://twitter.com/OTerrifying/status/1583615570309951488?ref_src=twsrc%5Etfw%7Ctwcamp%5Etweetembed%7Ctwterm%5E1583615570309951488%7Ctwgr%5Ec51e02feff63d13e0266f027c0195c6ac0c74f6c%7Ctwcon%5Es1_c10&ref_url=https%3A%2F%2Fzeenews.india.com%2Fhindi%2Foff-beat%2Fwild-animals-reacting-to-see-mirror-people-laugh-out-loud-at-leopard-video-going-viral%2F1407310
ಈ 15 ಸೆಕೆಂಡುಗಳ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದ್ದು ಇಲ್ಲಿಯವರಿಗೆ ಲಕ್ಷ ಲಕ್ಷ ಜನರು ನೋಡಿದ್ದಾರೆ. ಹಾಗೂ ತಮ್ಮ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ಚಿರತೆಗೆ ತುಂಬಾ ಮುಗ್ಧ ಎಂದರೆ ಇನ್ನೂ ಕೆಲವರು ಕ್ಯೂಟ್ ಅಂತಲೂ ಹೇಳಿದ್ದಾರೆ.