Video; SA ವೇಗಿ ರಬಾಡಾ ಮಾತನಾಡಿದರು ಹಿಂದಿಯಲ್ಲಿ; ಮಾವನಿಗೆ (ಸಸುರ್ ಬದಲಾಗಿ ಸುಅರ್/ಹಂದಿ) ಎಂದರು ಕಾಗಿಸೋ ರಬಾಡಾ.
ಸೌತ್ ಆಫ್ರಿಕಾ ತಂಡದ ವೇಗದ ಬೌಲರ್ ಕಾಗಿಸೋ ರಬಾಡಾ ಹಿಂದಿಯಲ್ಲಿ ಮಾತನಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ತನ್ನ ಅತ್ತೆ ಮಾವನವರಿಗೆ ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಸ್ತುತ ವಿಡಿಯೋದಲ್ಲಿ ಕಾಗಿಸೋ ರಬಾಡಾ ಅವರು ಕೆಲವೊಂದು ಶಬ್ದಗಳನ್ನು ಅರ್ಥದ ಅನರ್ಥ ಮಾಡಿದ್ದಾರೆ. ಈ ವಿಡಿಯೋ ನೋಡಿದ ನಂತರ ನಕ್ಕು ನಕ್ಕು ಸುಸ್ತಾಗುತ್ತದೆ.
ಪ್ರಸ್ತುತ ವಿಡಿಯೋದಲ್ಲಿ ಭಾರತೀಯ ರೇಡಿಯೋ ಜಾಕಿ RJ ಕರಿಷ್ಮಾ ಜೊತೆಯಲ್ಲಿ ಕಾಗಿಸೋ ರಬಾಡಾ ಕಂಡು ಬರುತ್ತಿದ್ದಾರೆ ಹಾಗೂ ಇಂಡಿಯನ್ ಗರ್ಲ್ ಫ್ರೆಂಡ್ ಒಬ್ಬಳ ಪೋಷಕರಿಗೆ ಇಂಪ್ರೆಸ್ ಮಾಡುವ ಬಗೆಯನ್ನು ಹೇಳಲು ಪ್ರಯತ್ನಿಸುತ್ತಿದ್ದಾಳೆ. ಆದರೆ ರಬಾಡಾ ಮಾತ್ರ ಇಲ್ಲಿ ಸಂಪೂರ್ಣವಾಗಿ ಫೇಲ್ ಆಗಿದ್ದಾರೆ. ಒಟ್ಟಿನಲ್ಲಿ ಕಾಗಿಸೋ ರಬಾಡಾ ಅವರ ಹಿಂದಿ ಪೂರಾ ಖರಾಬ್ ಆಗಿ ಹೋಗಿದೆ. ಅವರ ಕೆಲವು ಶಬ್ದಗಳು ಸಂಪೂರ್ಣವಾಗಿ ಅರ್ಥ ಬಿಟ್ಟು ಅನರ್ಥಕ್ಕೆ ಹುಟ್ಟು ಹಾಕಿವೆ. ನೆಟ್ಟಿಗರು ಮಾತ್ರ ಈ ರೀತಿ ಎಂದಿಗೂ ಪೋಷಕರಿಗೆ ಇಂಪ್ರೆಸ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ರಬಾಡಾ ಅವರಿಗೆ ಚೆನ್ನಾಗಿಯೇ ಟ್ರೊಲ್ ಮಾಡಲಾಗುತ್ತಿದೆ.
ಮೊದಲು ಈ ವಿಡಿಯೋ ನೋಡಿ…
View this post on Instagram
ಇಲ್ಲಿ ಕರೀಷ್ಮಾಳು ರಬಾಡಾ ಅವರ ಕೆಲವು ತಪ್ಪುಗಳನ್ನು ಸರಿಪಡಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಈ ಪ್ರಯತ್ನ ತುಂಬಾ ಕಡಿಮೆಯಾಗಿದೆ. ಅವರು ಮಾತನಾಡಿದ ಕೆಲವು ಮಾತುಗಳು ಮತ್ತು ಅವುಗಳ ಅರ್ಥ ಹೀಗಿದೆ… ಧನ್ಯ ಹೋ ಗಯಾ ಎನ್ನುವ ಬದಲು “ಧನಿಯಾ” ಅಂದರೆ ಕೊತ್ತಂಬರಿ ಎಂದಿದ್ದಾರೆ. ಮತ್ತೆ ನಮಸ್ತೆ ಸಸುರ್ ಜಿ ಎನ್ನೋ ಬದಲು ನಮಸ್ತೆ ಸುಅರ್ ಜಿ ಎಂದಿದ್ದಾರೆ, ಇಲ್ಲಿ ಸುಅರ್ ಪದದ ಅರ್ಥ “ಹಂದಿ” ಯಾಗುತ್ತದೆ. ಕರೀಷ್ಮಾಳ ಸಾಕಷ್ಟು ಪ್ರಯತ್ನದ ನಂತರವೂ ರಬಾಡಾಗೆ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ. ಸದ್ಯ ಈ ವಿಡಿಯೋ ಇಲ್ಲಿಯವರೆಗೆ ಲಕ್ಷ ಲಕ್ಷ ಜನರು ನೋಡಿದ್ದಾರೆ ಹಾಗೂ ಸಾವಿರಾರು ಜನರು ಲೈಕ್ ಮಾಡಿದ್ದಾರೆ.