VIDEO; ಬಾಳೆಹಣ್ಣು ತಿನ್ನಲು ಹೋಗಿ ನಕಲಿ ಹಾವನ್ನು ಕಂಡು ಮಂಗ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ!!!

ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವೀಡಿಯೋಗಳು ವೈರಲ್ ಆಗುತ್ತಿವೆ. ಪ್ರತಿಯೊಂದು ವೈರಲ್ ಆಗುವ ವೀಡಿಯೋಗಳು ಜನರ ಮನಸ್ಸನ್ನು ತುಂಬಾನೇ ಗೆಲ್ಲುತ್ತವೆ. ವೈರಲ್ ಆಗುವ ವಿಡಿಯೋಗಳಲ್ಲಿ ಹೆಚ್ಚಾಗಿ ಪ್ರಾಣಿಗಳ ವೀಡಿಯೋನೆ ತುಂಬಾ ಕಂಡು ಬರುತ್ತವೆ. ಅದರಲ್ಲಿಯೂ ವಿಶೇಷವಾಗಿ ಮಂಗಗಳ ಕುರಿತಾದ ವಿಡಿಯೋ ಇದ್ದರೆ ಸಾಕು ಅದು ತನ್ನಿಂದ ತಾನೇ ವೈರಲ್ ಆಗಲು ಶುರುವಾಗುತ್ತದೆ.

ಪ್ರಸ್ತುತ ಇನ್ಸ್ಟಾಗ್ರಾಮ್ ನಲ್ಲಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ಸಹ ಒಂದು ಮಂಗನ ವೀಡಿಯೋ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಮಂಗಣ್ಣನಿಗೆ ಫ್ರಾಂಕ್ ಮಾಡಿದ್ದಾನೆ. ವ್ಯಕ್ತಿ ಒಂದು ಖಾಲಿ ಕೈಚೀಲದಲ್ಲಿ ಹಾವನ್ನು ಇಟ್ಟು ಅದಕ್ಕೆ ಕಟ್ಟಿದ ದಾರಕ್ಕೆ ಸುಲಿದ ಬಾಳೆಹಣ್ಣನ್ನು ಕಟ್ಟಿದ್ದಾನೆ. ಮಂಗ ಸಾವಕಾಶವಾಗಿ ಅಲ್ಲಿ ಕಾಣುತ್ತಿದ್ದ ಸುಲಿದ ಬಾಳೆಹಣ್ಣನ್ನು ತಿನ್ನಲು ಬರುತ್ತದೆ. ಆ ಬಾಳೆಹಣ್ಣನ್ನು ಕೈಯಲ್ಲಿ ಹಿಡಿದು ಜಗ್ಗುತ್ತಿದ್ದಂತೆಯೇ ಕೈಚೀಲದಲ್ಲಿರುವ ನಕಲಿ ಹಾವು ಸಹ ಹೊರಗೆ ಬರುತ್ತದೆ. ನಕಲಿ ಹಾವು ಹೊರಗೆ ಬರುತ್ತಲೇ ಮಂಗ ದಿಕ್ಕೆಟ್ಟು ಓಡಲು ಶುರುಮಾಡುತ್ತದೆ. ಕೈಯಲ್ಲಿ ಬಾಳೆಹಣ್ಣನ್ನು ಬಿಡದ ಕಾರಣ ನಕಲಿ ಹಾವು ಮಂಗಕ್ಕೆ ಹಾಗೆಯೇ ಫಾಲೋ ಮಾಡುತ್ತದೆ. ಇದರಿಂದ ಮಂಗ ಅಕ್ಷರಶಃ ಬೆಚ್ಚಿ ಬಿದ್ದಿದೆ. ನನ್ನ ಜೊತೆಗೆ ಇದೇನಾಗುತ್ತಿದೆ ಎಂದು ತಿಳಿದು ತಬ್ಬಿಬ್ಬಾಗಿಬಿಟ್ಟಿದೆ. ಈ ವಿಡಿಯೋ ನೋಡಿದಾಗ ನಕ್ಕು ನಕ್ಕು ಸಾಕಾಗುತ್ತದೆ.

ವೀಡಿಯೋ ನೋಡಿ

 

View this post on Instagram

 

A post shared by Geko Samsung (@luckywoma)

ಪ್ರಸ್ತತ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ luckywoma ಎಂಬ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು 6.71 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅಲ್ಲದೆ ಸುಮಾರು 35 ಸಾವಿರಕ್ಕೂ ಹೆಚ್ಚು ಲೈಕ್ ಮಾಡಿದ್ದಾರೆ. ಸದ್ಯಕ್ಕೆ ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.