Video; ಕೆಸರಿನಲ್ಲಿ ಸಿಕ್ಕ ಪುಟ್ಟಾನೆಗೆ ಸಹಾಯ ಮಾಡಿದಳು ಹುಡುಗಿ; ಬದಲಿಗೆ ಆನೆಮರಿ ಮಾಡಿದ್ದೇನು ನೋಡಿ? 😳👌

ಅವಶ್ಯಕತೆ ಇರುವ ವ್ಯಕ್ತಿಗೆ ಸಹಾಯ ಮಾಡಿದಾಗ ದೊಡ್ಡ ಪುಣ್ಯ ಲಭಿಸುವುದೆಂದು ತಿಳಿಯಲಾಗುತ್ತದೆ. ಅದರಲ್ಲೂ ಸಾಕಷ್ಟು ಕಷ್ಟದಲ್ಲಿದ್ದ ವ್ಯಕ್ತಿಗೆ ಅಥವಾ ಜೀವಿಗೆ ಸಹಾಯ ಮಾಡಲೇಬೇಕು. ಇದಕ್ಕಿಂತಲೂ ಒಳ್ಳೆಯ ಕೆಲಸ ಬೇರೊಂದಿಲ್ಲ. ಸದ್ಯದ ಸಮಯದಲ್ಲಿ ವ್ಯಕ್ತಿಗಳೇ ವ್ಯಕ್ತಿಗೆ ಸಹಾಯ ಮಾಡಲು ಸ್ವಲ್ಪ ಹಿಂದೆ ಮುಂದೆ ನೋಡುತ್ತಿರುವ ಪರಿಸ್ಥಿತಿಯಲ್ಲಿ ಪ್ರಾಣಿಗಳಿಗೆ ಯಾರು ಸಹಾಯ ಮಾಡಬೇಕು? ಅಲ್ವಾ. ಇಂಥದ್ದರಲ್ಲಿ ಹುಡುಗಿಯೊಬ್ಬಳು ಕೆಸರಿನಲ್ಲಿ ಸಿಲುಕಿಕೊಂಡ ಪುಟ್ಟ ಆನೆಯ ಮರಿಗೆ ಸಹಾಯ ಮಾಡಿದ್ದಾಳೆ. ಇಲ್ಲಿ ನಡೆದ ಒಂದು ಸುಂದರ ದೃಶ್ಯ ನೋಡುಗರ ಮನ ಮುಟ್ಟಿದೆ.

ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಪುಟ್ಟ ಆನೆಯ ಮರಿಗೆ ಸಹಾಯ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಆನೆಯ ಮರಿಯು ರಸ್ತೆಯ ಬದಿಗಿರುವ ಮೆತ್ತನೆಯ ಕೆಸರಿನಲ್ಲಿ ತನ್ನ ಕಾಲುಗಳನ್ನು ಹೂತು ಹಾಕಿಕೊಂಡಿದೆ. ಎಷ್ಟೇ ಪ್ರಯತ್ನ ಮಾಡಿದರೂ ಅದಕ್ಕೆ ಈ ಕೆಸರಿನಿಂದ ಪಾರಾಗಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ಹುಡುಗಿಯೊಬ್ಬಳು ಪುಟ್ಟಾನೆಗೆ ಸಹಾಯ ಮಾಡುತ್ತಿದ್ದಾಳೆ. ಜಗತ್ತಿನ ವಿಶಾಲಕಾಯ ಪ್ರಾಣಿಯಾದ ಆನೆಗೆ ಪುಟ್ಟ ಹುಡುಗಿ ಅದರ ಕಾಲನ್ನೆತ್ತಿ ಕೆಸರಿನಿಂದ ಈಚೆಗೆ ತರುವ ಪ್ರಯತ್ನ ಮಾಡುತ್ತಿದ್ದಾಳೆ. ಸ್ವಲ್ಪ ಸಮಯದ ನಂತರ ಕೊನೆಗೆ ಒಟ್ಟಿನಲ್ಲಿ ಹುಡುಗಿಯ ಪ್ರಯತ್ನ ಸಫಲವಾಗುತ್ತದೆ ಮತ್ತು ಆನೆ ಕೆಸರಿನಿಂದ ಈಚೆ ಬರುತ್ತದೆ. ಇಲ್ಲಿ ಗಮನಿಸುವ ಮಹತ್ವದ ವಿಷಯವೇನೆಂದರೆ ಪುಟ್ಟ ಆನೆಯ ಮರಿಯು ಕೆಸರಿನಿಂದ ಈಚೆ ಬಂದು ತನ್ನ ಸೊಂಡಿಲನ್ನು ಎತ್ತಿ ಸಹಾಯ ಮಾಡಿದ ಹುಡುಗಿಗೆ ಧನ್ಯವಾದಗಳನ್ನು ಅರ್ಪಿಸುತ್ತದೆ. ಈ ದೃಶ್ಯ ನೋಡುಗರಿಗೆ ನಿಜಕ್ಕೂ ಅದ್ಭುತವೆನಿಸುತ್ತದೆ.

ನೋಡಿ ಈ ಪುಟಾಣಿ ಹುಡುಗಿ ಆನೆಗೆ ಹೇಗೆ ಸಹಾಯ ಮಾಡಿದ್ದಾಳೆ ಹಾಗೂ ಬದಲಿಗೆ ಆನೆ ಹೇಗೆ ರಿಯಾಕ್ಟ್ ಮಾಡಿದೆ.

ವೀಡಿಯೋ ನೋಡಿ

ಆನೆಯ ಈ ಹೃದಯಸ್ಪರ್ಶಿಯಾದ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಟ್ವಿಟರ್ ನಲ್ಲಿ ಐಎಫ್ಎಸ್ ಆಫೀಸರ್ ಸುಶಾಂತ್ ನಂದಾ ಅವರು ಶೇರ್ ಮಾಡಿ, ಹುಡುಗಿಯ ಪುಟ್ಟ ಆನೆಯ ಮರಿಗೆ ಕೆಸರಿನಿಂದ ಈಚೆ ಬರಲು ಹೇಗೆ ಸಹಾಯ ಮಾಡಿದ್ದಾಳೆ ನೋಡಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಪ್ರಸ್ತುತ 36 ಸೆಕೆಂಡುಗಳ ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಾರೆ ಹಾಗೂ ಸಾವಿರಾರು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.