ಶಕ್ತಿಮಾನ್ ದಲ್ಲಿಯ ವಿಲನ್ ತಮರಾಜ್ ಕಿಲವಿಶ್ ಮಗಳಿದ್ದಾಳೆ ತೆಲುಗು,ಮಲಯಾಳಿ ಚಿತ್ರರಂಗದ ಪ್ರಸಿದ್ಧ ನಟಿ!

ಸದ್ಯದ ಟಿವಿ ಕಾರ್ಯಕ್ರಮಗಳು ಮತ್ತು 90 ರ ದಶಕದ ಟಿವಿ ಕಾರ್ಯಕ್ರಮಗಳು ಇವೆರಡರಲ್ಲಿ ತುಂಬಾ ಬದಲಾವಣೆ ಕಂಡು ಬರುತ್ತದೆ. ಸಾಕಷ್ಟು ಚಾನೆಲ್ ಗಳು ಸಾಕಷ್ಟು ಸೀರಿಯಲ್ ಗಳನ್ನು ಬಿತ್ತರಿಸುವದರಿಂದ ಯಾವ ಸೀರಿಯಲ್ ನೋಡಬೇಕು ಯಾವುದು ಬಿಡಬೇಕು ಎನ್ನುವದೇ ತಿಳಿಯುವದಿಲ್ಲ. ಆದರೆ 90 ರ ದಶಕದಲ್ಲಿ ಹಾಗಿರಲಿಲ್ಲ. ಆಗ ನೋಡಿದ ಧಾರಾವಾಹಿಗಳು ಇನ್ನು ಸಹಿತ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿವೆ. ಒಂದು ವೇಳೆ ನೀವು 90 ದಶಕದಲ್ಲಿಯವರಾಗಿದ್ದರೆ ಆಗಿನ ಒಂದು ಸುಪ್ರಸಿದ್ಧ ಧಾರಾವಾಹಿ ‘ಶಕ್ತಿಮಾನ್’ ಯಾರು ಮರೆಯುವ ಹಾಗಿಲ್ಲ.

ಈ ಲಾಕ್ ಡೌನ್ ಸಂದರ್ಭದಲ್ಲಿ ಈ ಧಾರಾವಾಹಿಯು ಮತೊಮ್ಮೆ ಪ್ರಸಾರವಾಯಿತು. ಯಾರು ಮೊದಲೊಮ್ಮೆ ಈ ದಾರಾವಾಹಿಯನ್ನು ವೀಕ್ಷಿಸಿದ್ದರು ಅವರೂ ಸಹ ಮತ್ತೊಮ್ಮೆ ಮಕ್ಕಳೊಡನೆ ಈ ಸೀರಿಯಲ್ ವೀಕ್ಷಿಸಿದರು. ಈ ದಾರಾವಾಹಿಯಲ್ಲಿ ಮುಕೇಶ್ ಖನ್ನಾ ಅವರು ಶಕ್ತಿಮಾನ್ ಭೂಮಿಕೆಯಲ್ಲಿ ಕಾಣಿಸಿದ್ದಾರೆ ತಮರಾಜ್ ವಿಲಕಿಶ್ ಹೆಸರಿನ ಖಳನಟನಾಗಿ ಸುರೇಂದ್ರ ಪಾಲ್ ನಟಿಸಿದ್ದರು.

ಸುರೇಂದ್ರ ಪಾಲ್ ಅವರ ಮಗಳ ಹೆಸರು ರೀಚಾ ಪನಾಯಿ ಇದ್ದು ಇವಳು ಲಖನೌನಲ್ಲಿ ಜನಿಸಿದ್ದಾಳೆ. ಶಾಲೆಯ ಶಿಕ್ಷಣ, ಹಿಂದೂಸ್ತಾನ್ ಏರೊನಾಟಿಕಲ್ಸ್ ಲಿಮಿಟೆಡ್ ಸ್ಕೂಲ್ ನಲ್ಲಿ ಆಯಿತು. ರೀಚಾ ತನ್ನ ಶಿಕ್ಷಣ ಪೂರ್ಣಗೊಳಿಸಿದ ನಂತರ ಮಿಸ್ ಲಖನೌ ಪುರಸ್ಕಾರವನ್ನು ಗೆದ್ದರು.

ಮಿಸ್ ಲಖನೌ ಪುರಸ್ಕಾರ ಮುಡಿಗೇರಿಸಿದ ನಂತರ ರೀಚಾ ಮಾಡೆಲಿಂಗ್ ಕ್ಷೇತ್ರದಲ್ಲಿ ಇಳಿಯುವ ನಿರ್ಧಾರ ಮಾಡಿದರು. ಮುಂದೆ ಮಾಡೆಲಿಂಗ್ ಮಾಡುತ್ತ ದೆಹಲಿ ಯೂನಿವರ್ಸಿಟಿ ಮುಖಾಂತರ ಪದವಿಯನ್ನು ಪೂರ್ಣ ಮಾಡಿದರು. ಇದೆಲ್ಲ ಮಾಡುವಾಗ ಮಾಡೆಲಿಂಗ್ ನಲ್ಲಿ ಆಶಿಸಿದಷ್ಟು ಸಫಲತೆ ಸಿಗದ ಕಾರಣ ಮುಂದೆ ಏರಿಹೋಸ್ಟೆಸ್ ಶಿಕ್ಷಣ ಪೂರ್ಣಗೊಳಿಸಿ ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಜಾಬ್ ಮಾಡಿದರು.

ಹೀಗೆ ಕೆಲಸ ಅಂತ ಮಾಡುವಾಗ ಅವರಿಗೆ ಒಂದು ಜಾಹೀರಾತಿನ ಆಫರ್ ಬಂತು. ಆ ಸಿಕ್ಕ ಅವಕಾಶವನ್ನು ಅವರು ಸುವರ್ಣವಕಾಶವನ್ನಾಗಿ ಪರಿವರ್ತಿಸಿದರು. ದುರದೃಷ್ಟ ಅಂದರೆ ಅದರ ನಂತರ ಅನೇಕ ಅವಕಾಶಗಳು ಸಿಕ್ಕರೂ ಅದೃಷ್ಟ ಬೇಗ ಒಲಿಯಲಿಲ್ಲ. ರೀಚಾ ಮಾತ್ರ ಸೋಲೊಪ್ಪಿಕೊಳ್ಳುವಳಾಗಿರಲಿಲ್ಲ.

ಕೊನೆಗೆ 2011 ರಲ್ಲಿ ಒಂದು ಚಲನಚಿತ್ರದ ಆಫರ್ ಬಂತು. ಮಲಯಾಳಂ ಚಿತ್ರ “ವಾಡಮಲ್ಲಿ” ಚಿತ್ರದಿಂದ ರೀಚಾಳ ಕರಿಯರ್ ಪ್ರಾರಂಭವಾಯಿತು. ಈ ಚಿತ್ರದಿಂದ ರೀಚಾಳಿಗೆ ಯಶಸ್ಸು ಲಭಿಸಿತು. ಮುಂದೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಮಲಯಾಳಂ ಅಷ್ಟೇ ಅಲ್ಲ ಬಾಲಿವುಡ್, ಟಾಲಿವುಡ್ ಹಾಗೂ ಕನ್ನಡದ ಬುಗುರಿ ಚಿತ್ರದಲ್ಲೂ ನಟಿಸಿದ್ದಾರೆ.

ಏತನ್ಮಧ್ಯೆ, ರೀಚಾಳಿಗೆ ಏಷಿಯಾ ನೆಟ್ ಫಿಲ್ಮ್ ಅವಾರ್ಡ್ ಅವರಿಂದ ‘ಬೆಸ್ಟ್ ಫೇಸ್ ಆಫ್ ದಿ ಇಯರ್’ ಪುರಸ್ಕಾರವು ದೊರೆಕಿದೆ.