Video: ರಸ್ತೆಯ ಅ#ಫಘಾ#ತದಲ್ಲಿ ತನ್ನ ಮರಿಯನ್ನು ಕಳೆದುಕೊಂಡ ನಾಯಿ ಹಾಗೂ ಅದರ ಮತ್ತೊಂದು ಮರಿಯ ರೋಧನೆ ನೋಡಿದರೆ ಕರಳು ಕಿತ್ತಿ ಬರುತ್ತೆ!!!😢😢
ವಾಹನ ಸೌಕರ್ಯಗಳ ಅಭಿವೃದ್ಧಿಯ ಜೊತೆಜೊತೆಗೆ ಅಪಘಾತವೂ ಸಹ ಬಳುವಳಿಯಾಗಿ ಬಂತು. ಈ ವಾಹನಗಳ ದುರ್ಘಟನೆ 99 ಪ್ರತಿಶತ ಚಾಲಕರ ತಪ್ಪಿನಿಂದಾಗಿಯೇ ಘಟಿಸುತ್ತವೆ. ಈಗ ನೀವು ಇಲ್ಲಿ ನೋಡುವ ವಿಡಿಯೋ ಸಹ ಇದನ್ನೇ ಹೇಳುತ್ತದೆ.
ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಒಂದು ನಾಯಿ ತನ್ನ ಎರಡು ಮರಿಗಳನ್ನು ಕರೆದುಕೊಂಡು ರಸ್ತೆ ಕ್ರಾಸ್ ಮಾಡುತ್ತಿರುತ್ತದೆ. ಆದರೆ ಅಷ್ಟರಲ್ಲಿ ಬೈಕ್ ಅಥವಾ ಗಾಡಿ ಬಂದು ಅದರ ಒಂದು ಮರಿಗೆ ಡಿಕ್ಕಿ ಹೊಡೆಯುತ್ತದೆ ಹೀಗಾಗಿ ಆ ಮರಿ ಚಡಪಡಿಸಿ ಸ್ಥಳದ ಮೇಲೇ ಪ್ರಾಣ ಬಿಡುತ್ತದೆ. ಪಾಪ ಮೂಕ ಪ್ರಾಣಿ ನಾಯಿ ಅದರ ಮರಿಯನ್ನು ಎಷ್ಟೇ ಮೇಲೆ ಎಬ್ಬಿಸಿದರು ಸಹ ಅದು ಮೇಲಕ್ಕೆ ಏಳೋದೋ ಇಲ್ಲ. ಆಗ ಮಾತ್ರ ತನ್ನ ಮರಿ ಉಳಿದಿಲ್ಲ ಎಂದು ಖಚಿತ ಪಡಿಸಿಕೊಂಡ ನಾಯಿ ತನ್ನ ದುಃಖ ಹೊರಗೆ ಹಾಕಲು ಶುರು ಮಾಡುತ್ತದೆ. ತುಂಬಾ ಜೋರಾಗಿ ಅಳುತ್ತದೆ ಈ ನಾಯಿಯ ದುಃಖವನ್ನು ಕಂಡು ಅಲ್ಲಿದ್ದ ಮತ್ತೊಂದು ನಾಯಿ ಮರಿ ಸಹ ತಾಯಿಯೊಂದಿಗೆ ಅಳಲು ಶುರು ಮಾಡುತ್ತದೆ. ಆ ಎರಡು ನಾಯಿಗಳ ರೋಧನೆ ನೋಡಿದರೆ ದುಃಖ ತುಂಬಿ ಬರುತ್ತದೆ.ಆದರೆ ಅದರ ಬದಿಯಿಂದ ಎಷ್ಟೋ ಬೈಕ್ ಗಳು ಹೋಗುತ್ತವೆ ಯಾರೂ ಸಹ ಸಹಾಯ ಮಾಡುವದೇ ಇಲ್ಲ. ದಯವಿಟ್ಟು ಯಾರಾದರೂ ಇಂತಹ ಪ್ರಸಂಗ ಬಂದರೆ ಅವುಗಳಿಗೆ ಸಹಾಯ ಮಾಡಿ. ಏಕೆಂದರೆ ಅವುಗಳಿಗೆ ಮನುಷ್ಯರಂತೆ ತಮ್ಮ ದುಃಖವನ್ನು ಹೇಳಿಕೊಳ್ಳಲು ಬಾಯಿ ಇರುವದಿಲ್ಲ.
ವೀಡಿಯೋ ನೋಡಿ
View this post on Instagram
ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ yadav_bhai7778 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದನ್ನು ಇದುವರೆಗೆ ಸುಮಾರು ಒಂದು ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಪ್ರತಿಯೊಬ್ಬರು ನಾಯಿಯ ದುಃಖವನ್ನು ಕಂಡು ಅದರ ಬಗ್ಗೆ