ಎಲೆಗಳ ಮರೆಯಲ್ಲಿ ಅವಿತು ಕುಳಿತಿದೆ ನಾಯಿ; ನಿಮ್ಮ ಕಣ್ಣುಗಳು ಇದ್ದರೆ ತೀಕ್ಷ್ಣ, ಹುಡುಕಿ ಹೇಳಿ ಎಲ್ಲಿದೆ ಅಂತ…
ಇಂಟರ್ನೆಟ್ ನಲ್ಲಿ ದಿನನಿತ್ಯ ಅನೇಕ ರೀತಿಯ ಚಿತ್ರಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವೊಂದು ಚಿತ್ರಗಳು ವ್ಯಕ್ತಿಯ ತಲೆ ತುಂಬಾ ತಿನ್ನುತ್ತವೆ. ಅಲ್ಲಿ ಕಂಡು ಬರುತ್ತಿರುವ ಸಹಜವಾದ ಚಿತ್ರಗಳಲ್ಲಿ ಬೇರೆ ವಿಷಯವೇ ಅಡಗಿರುತ್ತದೆ. ಇಂಥ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳೆಂದು ಕರೆಯುತ್ತಾರೆ. ಈ ಚಿತ್ರಗಳಲ್ಲಿರುವ ಯಾವುದಾದರೂ ಒಂದು ಘಟಕವನ್ನು ಶೋಧಿಸಬೇಕಾದರೆ ಸಾಕು ಸಾಕಾಗಿ ಹೋಗುತ್ತದೆ. ಸದ್ಯ ಇಂಟರ್ನೆಟ್ ಯೂಸರ್ಸ್ ಗಳ ತಲೆ ತಿನ್ನುತ್ತಿರುವ ಹೊಸದಾದ ಫೋಟೋ ಒಂದು ಇಂಟರ್ನೆಟ್ ನಲ್ಲಿ ನೋಡಲು ಸಿಗುತ್ತಿದೆ. ಹಾಗೆ ನೋಡಲಾಗಿ ಈ ಫೋಟೋ ಮೊದಲ ದೃಷ್ಟಿಯಲ್ಲಿ ತುಂಬಾ ನಾರ್ಮಲ್ ಫೋಟೋ ಎನಿಸುತ್ತದೆ. ಆದರೆ ಈ ಫೋಟೋದಲ್ಲಿ ಅಡಗಿದ ನಾಯಿಯನ್ನು ಹುಡುಕಬೇಕಾದರೆ ನಿಮ್ಮ ಕಣ್ಣುಗಳು ಸಾಕಷ್ಟು ತೀಕ್ಷ್ಣ ವಾಗಿದ್ದರೂ ಉತ್ತರ ಮಾತ್ರ ಸಿಗುವುದು ತುಂಬಾ ಕಷ್ಟ.
ಫೋಟೋ ಇಳಿಸಿಕೊಳ್ಳುವುದು ಅಥವಾ ಕ್ಲಿಕ್ ಮಾಡುವದು ಒಂದು ಕಲೆ ಇದೆ. ಈ ಕಲೆ ಪ್ರತಿಯೊಬ್ಬ ಫೋಟೋಗ್ರಾಫರ್ ಗೆ ಸಾಧ್ಯವಿಲ್ಲ. ಪ್ರಸ್ತುತ ಲೇಖನದಲ್ಲಿ ನೀವು ನೋಡಲಿರುವ ಚಿತ್ರ ತುಂಬಾ ವಿಶೇಷವಾಗಿದೆ. ಇಲ್ಲಿ ಕಂಡು ಬರುವ ಚಿತ್ರ ಒಂದು ಪಾರ್ಕ್ ನಲ್ಲಿಯದಿದೆ. ಇಲ್ಲಿ ಒಣಗಿದ ತರಗೆಲೆಗಳ ಮಧ್ಯೆ ನಾಯಿಯೊಂದು ಅವಿತು ಕುಳಿತಿದೆ. ಈ ನಾಯಿಯನ್ನು ಹುಡುಕಬೇಕಾದರೆ ನಿಮಗೆ ಬೇಕು ತೀಕ್ಷ್ಣವಾದ ದೃಷ್ಟಿ.
ಮೊದಲು ಈ ಫೋಟೋ ನೋಡಿ…

ಪ್ರಸ್ತುತ ಚಿತ್ರದಲ್ಲಿ ನಾಯಿಯೊಂದು ಒಣಗಿದ ಎಲೆಗಳ ಮಧ್ಯೆ ನಮ್ಮ ಕಣ್ಣುಗಳ ಮುಂದೆಯೇ ಸರಿಯಾಗಿ ಕುಳಿತಿದ್ದರೂ ಅದು ನಮ್ಮ ಕಣ್ಣುಗಳಿಗೆ ಹುಡುಕಲು ಸಾಧ್ಯವಾಗುತ್ತಿಲ್ಲ. ಅಲ್ಲಿರುವ ನಾಯಿ ಸಂಪೂರ್ಣವಾಗಿ ಎಲೆಗಳ ಜೊತೆಗೆ ಕೂಡಿಕೊಂಡು ಬಿಟ್ಟಿದೆ.
ಮಿತ್ರರೇ ನಿಮಗೆ ಇಲ್ಲಿರುವ ನಾಯಿಯು ಕಂಡುಬಂದರೆ ನಿಮ್ಮ ಕಣ್ಣುಗಳು ತುಂಬಾ ತೀಕ್ಷ್ಣವಾಗಿವೆ ಎಂದರ್ಥ. ಒಂದು ವೇಳೆ ನಿಮ್ಮ ಕಣ್ಣುಗಳು ಚಿತ್ರದಲ್ಲಿ ಅಡಗಿದ ನಾಯಿಯನ್ನು ಹುಡುಕಲು ಯಶಸ್ವಿಯಾಗದಿದ್ದರೆ ಉತ್ತರ ಕೆಳಗೆ ನೀಡಿದ್ದೇವೆ ನೋಡಿ.
