Video; ಮುಂಬಯಿ ಜೀವನಾಡಿ ವೇಗದ ಲೋಕಲ್ ಟ್ರೈನ್ ನಲ್ಲಿ ಮಹಿಳೆಯರು ಹತ್ತುವ ದೃಶ್ಯ ಒಮ್ಮೆ ನೋಡಿ..! ಮೈ ಜುಂ ಎನ್ನುತ್ತೆ.

ದೇಶದ ಆರ್ಥಿಕ ರಾಜಧಾನಿ ಎಂದೇ ಗುರುತಿಸಿಕೊಂಡಿರುವ ಮುಂಬಯಿಯ ಜನಸಂಚಾರದ 70% ಭಾರ ಅಲ್ಲಿ ಎಡೆಬಿಡದೆ ಓಡಾಡುವ ಲೋಕಲ್ ಟ್ರೈನ್ ಮೇಲೆಯೇ ಇದೆ ಎಂದರೆ ತಪ್ಪಲ್ಲ. ಕಾರಣ ಮುಂಬಯಿ ಇಷ್ಟೊಂದು ಫಾಸ್ಟ್ ಆಗಲು ಮುಖ್ಯ ಕಾರಣ ಅಲ್ಲಿಯ ಲೋಕಲ್ ಟ್ರೈನ್ ಎಂದೇ ಹೇಳಲಾಗುತ್ತದೆ. ಇಲ್ಲಿಯ ಪ್ಲಾಟ್ ಫಾರ್ಮ್ ಮೇಲೆ ಕಡಿಮೆ ಎಂದರೆ ಪ್ರತಿ 2 ರಿಂದ 3 ನಿಮಿಷದ ಒಳಗಾಗಿ ಒಂದು ಟ್ರೈನ್ ಬಂದೇ ಬರುತ್ತದೆ. ಯಾವುದೇ ಕಾರಣದಿಂದಾಗಿ ಟ್ರೈನ್ ಸೌಲಭ್ಯ ನಿಂತರೆ ಮುಂಬಯಿ ಪ್ರವಾಸಿ ಜನರ ಪಾಡು ಹೇಳತೀರದಂತಾಗುತ್ತದೆ. ಕಾರಣ ಹೆಚ್ಚು ಕಡಿಮೆ ಎಲ್ಲಾ ಭಾರ ಲೋಕಲ್ ಟ್ರೈನ್ ಮೇಲಿದ್ದ ಕಾರಣ ಬಹುತಾಂಶ ಜನರು ಈ ಲೋಕಲ್ ಟ್ರೈನ್ ಪ್ರವಾಸದ ಮೇಲೆಯೇ ಅವಲಂಬಿಸಿದ್ದಾರೆ.

ಸದ್ಯ ಈ ಮುಂಬಯಿ ಲೋಕಲ್ ಟ್ರೈನ್ ನಲ್ಲಿ ಮಹಿಳೆಯರು ಹೇಗೆ ಹತ್ತುತ್ತಾರೆ ಎಂಬುದನ್ನು ತೋರಿಸುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಇಲ್ಲಿ ಪ್ಲಾಟ್ ಫಾರ್ಮ್ ಗೆ ಲೋಕಲ್ ಟ್ರೈನ್ ಬಂದ ತಕ್ಷಣ ಬರೀ 12 ರಿಂದ 15 ಸೆಕೆಂಡುಗಳ ಒಳಗಾಗಿ ಜನರಿಂದ ತುಂಬಿದ ಪ್ಲಾಟ್ ಫಾರ್ಮ್ ಪೂರ್ತಿ ಖಾಲಿಯಾಗಿ ಬಿಡುತ್ತದೆ. ಅಂಥದ್ದರಲ್ಲಿಯೇ ಒಂದು ಮಹಿಳೆಯರ ಬೋಗಿಯಲ್ಲಿ ಮಹಿಳೆಯರು ಹೇಗೆ ಹತ್ತುತ್ತಾರೆ ಎಂಬುದನ್ನು ತೋರಿಸುವ ವಿಡಿಯೋ ನೋಡಿದಾಗ ಇಲ್ಲಿಯ ಜನ ಎಷ್ಟೊಂದು ಫಾಸ್ಟ್ ಆಗಿದ್ದಾರೆ ಎಂಬುದು ತಿಳಿದು ಬರುತ್ತದೆ. ಈ ವಿಡಿಯೋ ನೋಡಿದಾಗ ಮೈ ಜುಂ ಸಹ ಎನ್ನುವದು.

ನೋಡಿ ಈ ವಿಶೇಷ ವಿಡಿಯೋ…

 

View this post on Instagram

 

A post shared by Madhu Bala (@madhu.bala1732)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ madhu.bala1732 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಗಟ್ಟಲೆ ಜನರು ನೋಡಿದ್ದಾರೆ ಜೊತೆಗೆ ಸುಮಾರು 1 ಲಕ್ಷ 28 ಸಾವಿರ ಜನರು ಲೈಕ್ಸ್ ಮಾಡಿದ್ದಾರೆ.