ಎಲ್ಲವನ್ನು ನೋಡಿ ಸಾಕಾಗಿದ್ದರೆ ಬೇಜಾರು ದೂರ ಮಾಡುವ ಈ ಯೂನಿಕ್ ಫ್ಯಾಷನ್ ಶೋ ಒಮ್ಮೆ ನೋಡಿ!

ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ವಿಶೇಷ ವಿಡಿಯೋಗಳನ್ನು ಕೆಲವರು ಪ್ರೆಸೆಂಟ್ ಮಾಡುತ್ತಿರುತ್ತಾರೆ. ವಿಡಿಯೋಗಳನ್ನು ನೋಡಿದಾಗ ಕೆಲವು ಸಲ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳಬೇಕಾಗುತ್ತದೆ. ಇಂಥ ಅದ್ಭುತ ಐಡಿಯಾಗಳು ಇವರ ತಲೆಯಲ್ಲಿ ಅದ್ಹೇಗೆ ಹೊಳೆಯುತ್ತವೆ ಗೊತ್ತಿಲ್ಲ. ಈ ರೀತಿಯ ಕೆಲವು ವಿಡಿಯೋಗಳು ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತವೆ. ಸದ್ಯ ಇದೇ ರೀತಿಯ ವಿಶೇಷ ವಿಡಿಯೋ ನೀವಿಲ್ಲಿ ನೋಡಲಿದ್ದೀರಿ. ಈ ವಿಡಿಯೋ ಫುಲ್ ಮಜಾ ನೀಡುತ್ತೆ.

ಪ್ರಸ್ತುತ ವಿಡಿಯೋದಲ್ಲಿ ಯುವಕನೊಬ್ಬ ವಿವಿಧ ರೀತಿಯ ವಸ್ತುಗಳನ್ನು ತೆಗೆದುಕೊಂಡು ಬರುತ್ತಾನೆ. ಬರುವಾಗ ಸುಮ್ಮನೆ ಬರುವುದಿಲ್ಲ. ಒಂದೊಂದು ವಸ್ತುಗಳನ್ನು ಹೊತ್ತುಕೊಂಡು ಬರುವಾಗ ಒಂದೊಂದು ರೀತಿಯಲ್ಲಿ ಎಂಟ್ರಿ ಮಾಡುತ್ತಾನೆ. ಆತನನ್ನು ನೋಡಿದಾಗ ದೊಡ್ಡ ದೊಡ್ಡ ಫ್ಯಾಷನ್ ಶೋ ಗಳಲ್ಲಿ ಮಾಡಲಿಂಗ್ ಮಾಡುವ ಯುವತಿಯರು ಕ್ಯಾಟ್ ವಾಕ್ ಮಾಡುವ ತರ ನಕಲು ಮಾಡಿದ್ದಾನೆ. ಆತ ತನ್ನ ಈ ಕೆಲಸವನ್ನು ತುಂಬಾ ಧೀರ ಮತ್ತು ಗಂಭೀರವಾಗಿ ಮಾಡುತ್ತಿದ್ದಾನೆ. ಈ ವಿಡಿಯೋ ನೋಡಿದಾಗ ನೋಡುಗರಿಗೆ ಮಾತ್ರ ನಗು ತಡೆದುಕೊಳ್ಳಲು ಸಾಧ್ಯವಿಲ್ಲ.

ನೋಡಿ ಈ ವಿಡಿಯೋ…

ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ @TheFigen_ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 3 ಮಿಲಿಯನ್ ವಿಕ್ಷಣೆಯನ್ನು ಪಡೆದಿದೆ. 90 ಸಾವಿರಕ್ಕೂ ಹೆಚ್ಚು ಜನರು ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.