10/12 ರ ಈ ಪೋರ ಬೈಕ್ ಮೇಲೆ ಮಾಡಿದನು ಸಹಜವಾಗಿಯೇ ಸೂಪರ್ ಸ್ಟಂಟ್; ಇಲ್ಲಿ ನೋಡಿ ಒಮ್ಮೆ 😳😳👌

ಈಗಿನ ಮಕ್ಕಳು ತುಂಬಾ ಆಕ್ಟಿವ್ ಆಗಿರುತ್ತಾರೆ. ಇವರು ಕಲಿಕೆಯ ಜೊತೆಗೆ ಅನೇಕ ಆಸಕ್ತಿ, ಹವ್ಯಾಸಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಕಾಣಲು ಚಿಕ್ಕವರಾಗಿ ಕಂಡರೂ, ವಯಸ್ಸಿನಲ್ಲಿ ಚಿಕ್ಕವರಿದ್ದರೂ ಅನೇಕ ರೀತಿಯ ಸ್ಟಂಟ್ ಗಳನ್ನು ಮಾಡುವ ಕೌಶಲ್ಯ ಹೊಂದಿರುತ್ತಾರೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ನೀವು ಇಲ್ಲಿ ನೋಡಲಿದ್ದೀರಿ.

ಪ್ರಸ್ತುತ ವಿಡಿಯೋದಲ್ಲಿ ಕಂಡುಬರುವ ಹಾಗೆ 10/12 ವಯಸ್ಸಿನ ಹುಡುಗನೊಬ್ಬ ರಸ್ತೆಯಲ್ಲಿ ಸೈಕಲ್ ಮೇಲಿಂದ ಬರುತ್ತಾನೆ. ಬಂದವನೇ ಆತನಿಗೆ ಬೈಕ್ ತೆಗೆದುಕೊಂಡು ಕಾಯುತ್ತಿದ್ದ ಇಬ್ಬರು ವ್ಯಕ್ತಿಗಳ ಹತ್ತಿರ ನಿಲ್ಲುತ್ತಾನೆ. ತನ್ನ ಸೈಕಲ್ ಅವರಿಗೆ ನೀಡಿ ಅವರ ಸ್ಪೋರ್ಟ್ಸ್ ಬೈಕ್ ತೆಗೆದುಕೊಂಡು ಸಹಜವಾಗಿ ನಡೆಸಲು ಶುರು ಮಾಡುತ್ತಾನೆ. ಸ್ವಲ್ಪ ದೂರ ಹೋಗುತ್ತಲೇ ಒಮ್ಮೆಲೇ ಬೈಕಿನ ಮುಂದಿನ ಭಾಗವನ್ನು ಹವೆಯಲ್ಲಿ ಎತ್ತಿ ಸ್ಟಂಟ್ ಮಾಡಲು ಶುರು ಮಾಡುತ್ತಾನೆ. ಈ ದೃಶ್ಯ ಯಾರೇ ನೋಡಿದರೂ ಒಮ್ಮೆಲೆ ಅದ್ಭುತ ಎನಿಸದೆ ಇರಲಾರದು. ಹುಡುಗ ತನ್ನ ವಯಸ್ಸಿಗೆ ಮೀರಿ ಈ ರೀತಿಯ ಸ್ಟಂಟ್ ಮಾಡುವುದನ್ನು ನೋಡಿದರೆ ಯಾರಿಗಾದರೂ ಭಯ ಹುಟ್ಟುವುದು ಸಹಜ. ದಯವಿಟ್ಟು ಈ ರೀತಿಯ ಸ್ಟಂಟ್ ಮಾಡುವ ವಿಚಾರವೂ ಮಾಡಬೇಡಿ. ಇವರೆಲ್ಲ ಇದರ ಬಗ್ಗೆ ತುಂಬಾ ಸಖತ್ತಾಗಿ ತರಬೇತಿ ಪಡೆದು ನಂತರ ಸ್ಟಂಟ್ ಮಾಡುತ್ತಿರುತ್ತಾರೆ.

ವೀಡಿಯೋ ನೋಡಿ

ಪ್ರಸ್ತುತ ಈ ಖತರ್ನಾಕ್ ವಿಡಿಯೋ ಇಲ್ಲಿಯವರೆಗೆ ಇನ್ಸ್ಟಾಗ್ರಾಮ್ ನಲ್ಲಿ 12.5 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಹಾಗೂ ಈ ವಿಡಿಯೋಗೆ ಇಲ್ಲಿಯವರೆಗೆ 1.2 ಮಿಲಿಯನ್ ಲೈಕ್ಸ್ ಗಳು ಬಂದಿವೆ.