Viral Video; ದೀಪಾವಳಿಯಲ್ಲಿ ಟೆರೆಸ್ ಮೇಲಿಂದ ಹಾರಿಸಿದ ಬಾಣ ಹೋಗಿದ್ದೆಲ್ಲಿ ನೋಡಿ!

ದೀಪಾವಳಿ ಎಂದರೆ ಮದ್ದು, ಪಟಾಕಿಗಳ ಸದ್ದು ಇಲ್ಲದೆ ಹಬ್ಬ ಮುಗಿಯಲು ಸಾಧ್ಯವೇ ಇಲ್ಲ. ಈ ಸಂದರ್ಭದಲ್ಲಿ ಪಟಾಕಿಗಳಿಂದ ಅನೇಕ ಅವಾಂತರಗಳು ಘಟಿಸುತ್ತವೆ. ಕೆಲವೊಮ್ಮೆ ಇದರಿಂದ ದೊಡ್ಡ ದೊಡ್ಡ ಅನಾಹುತಗಳು ಸಹ ನಡೆದು ಹೋಗುತ್ತವೆ.

ಸದ್ಯ ಇವತ್ತಿನ ಈ ಅಂಕಣದಲ್ಲಿ ಕಂಡುಬರುವ ವಿಡಿಯೋ ಒಂದು ಇದೇ ರೀತಿಯದಾಗಿದೆ. ಇಲ್ಲಿ ಕೆಲವರು ಕೂಡಿಕೊಂಡು ಬಿಲ್ಡಿಂಗ್ ನ ಟೆರೇಸ್ ಮೇಲಿಂದ ಮದ್ದಿನ ಬಾಣವನ್ನು ಹಾರಿಸಲು ಯತ್ನಿಸಿದ್ದಾರೆ. ಆದರೆ ಇವರು ಮಾಡಿದ ಈ ಚಟುವಟಿಕೆ ಬೇರೆಯವರಿಗೆ ತುಂಬಾ ದುಬಾರಿಯಾಗಿ ಪರಿಣಮಿಸಿದ್ದು ಇಲ್ಲಿ ಕಂಡು ಬಂದಿದೆ. ಮದ್ದಿನ ಈ ಬಾಣಕ್ಕೆ ಬೆಂಕಿ ತಗುಲಿದ ನಂತರ ಅದು ನೇರವಾಗಿ ಇನ್ನೊಂದು ಬಹು ಮಹಡಿಯ ಕಟ್ಟಡದ ಕಿಟಕಿಯಿಂದ ಒಳಗೆ ಸೇರಿದ್ದು ಕಂಡುಬರುತ್ತದೆ. ಅಷ್ಟೇ ಅಲ್ಲ ಒಳಸೇರಿದ ಬಾಣವು ಜೋರಾಗಿ ಸ್ಪೋಟಗೊಂಡ ಶಬ್ದವು ಸಹ ಕೇಳಿ ಬಂದಿದೆ. ನಮ್ಮ ಹವ್ಯಾಸಕ್ಕಾಗಿ ಮಾಡಿದ ಇಂತಹ ಚಟುವಟಿಕೆಗಳಿಂದ ಇನ್ನೊಬ್ಬರಿಗೆ ದೊಡ್ಡ ಹಾನಿ ಮಾಡುವುದು ಎಷ್ಟರಮಟ್ಟಿಗೆ ಸರಿ? ಎಂಬ ವಿಚಾರ ಸ್ವಲ್ಪವಾದರೂ ಮಾಡಲೇಬೇಕಲ್ಲ.

ವೀಡಿಯೋ ನೋಡಿ

 

View this post on Instagram

 

A post shared by Tanu Shakya (@tanu_shakya_3126)

ಪ್ರಸ್ತುತ ಈ ಒಳ್ಳೆಯ ಪಾಠವನ್ನು ಕಲಿಸುವ ವಿಡಿಯೋ instagram ನಲ್ಲಿ tanu_shakya_3126 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ಇನ್ಸಿಡೆಂಟ್ ನಂತರ ಬಾಣವನ್ನು ಹೊತ್ತಿಸಿದ ಟೆರೇಸ್ ಮೇಲಿನವರು ತುಂಬಾ ಚೆನ್ನಾಗಿ ಆನಂದವನ್ನು ವ್ಯಕ್ತಪಡಿಸುತ್ತಾರೆ. ಇದು ಸರಿಯೇ? ಈ ವಿಡಿಯೋ ಇಲ್ಲಿಯವರೆಗೆ 5.2 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಸುಮಾರು 4 ಲಕ್ಷ 28 ಸಾವಿರ ಲೈಕ್ಸ್ ಗಳನ್ನು ಹೊಂದಿದೆ.