Video; K L ರಾಹುಲ್ ಬಾರಿಸಿದ ಭರ್ಜರಿ ಸಿಕ್ಸ್ ನೋಡಿ ವಿರಾಟ್ ಅವರ ಸೂಪರ್ ಏಕ್ಸಪ್ರೇಶನ್ ನೋಡಿ ಈ ವಿಡಿಯೋದಲ್ಲಿ…

ಭಾರತ-ಬಾಂಗ್ಲಾದೇಶ ಪಂದ್ಯದಲ್ಲಿ ಕೊನೆಯ ಬಾಲ್ ವರೆಗೆ ನಡೆದ ರೋಚಕ ಹಣಾಹಣಿಯಲ್ಲಿ ಕೊನೆಗೂ ಭಾರತ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದರಲ್ಲಿ ಕರ್ನಾಟಕದ ಕಣ್ಮಣಿ ಕೆ ಎಲ್ ರಾಹುಲ್ ಮತ್ತು ವಿರಾಟ್ ಅವರ ಬ್ಯಾಟಿಂಗ್ ಜೊತೆಗೆ ಸುರ್ಯಾ ಅವರ ಬ್ಯಾಟ್ ಸಹ ಚೆನ್ನಾಗಿಯೇ ಅಬ್ಬರಿಸಿದರು.

ಈ ಪಂದ್ಯದಲ್ಲಿ ಕೊನೆಗೂ ಕೆ ಎಲ್ ರಾಹುಲ್ ಅವರು ಮೂರು ಪಂದ್ಯಗಳ ಬಳಿಕ ಉತ್ತಮವಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಮ್ಮ 50 ರನ್ ಗಳ ಸ್ಕೋರ್ ನಲ್ಲಿ ಕೆ ಎಲ್ ರಾಹುಲ್ ಅವರು ಕೇವಲ 32 ಎಸೆತಗಳಲ್ಲಿ 4 ಸಿಕ್ಸ್ ಮತ್ತು 3 ಫೋರ್ ಗಳನ್ನು ಬಾರಿಸಿದರು. ಏತನ್ಮಧ್ಯೆ ಅವರು ಬಾರಿಸಿದ ಬಾನೆತ್ತರದ ಸಿಕ್ಸ ಒಂದಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ತುಂಬಾ ವಿಶೇಷವಾಗಿ ಸ್ಪಂದಿಸಿದ್ದಾರೆ. ರಾಹುಲ್ ಬಾರಿಸಿದ ಎತ್ತರದ ಸಿಕ್ಸ್ ನೋಡುತ್ತಾ ತುಂಬಾ ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಒಮ್ಮೆ ಚೆಂಡಿಗೆ ಇನ್ನೊಮ್ಮೆ ಬೌಲರ್ ಗೆ ಮತ್ತೊಮ್ಮೆ ರಾಹುಲ್ ಅವರಿಗೆ ತುಂಬಾ ಅದ್ಭುತವಾಗಿ ಗಮನಿಸಿದ್ದಾರೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Miraaj Ansari (@miraj__edits7)

ವಿರಾಟ್ ಕೊಹ್ಲಿ ಅವರು ಆಶ್ಚರ್ಯ ವ್ಯಕ್ತ ಮಾಡಿದ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ miraj_edits7 ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 1 ಲಕ್ಷ 10 ಸಾವಿರ ಜನರು ನೋಡಿದ್ದಾರೆ ಮತ್ತು ಸಾವಿರಾರು ಜನರು ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.