ಪಾರ್ಸಲ್ ಕದಿಯಲು ಬಂದ ಕಳ್ಳ ಡೆಲಿವರಿ ಬಾಯ್ ನನ್ನು ತಬ್ಬಿಕೊಂಡ! ಮುಂದೇನಾಯಿತು ನೋಡಿ ಅಚ್ಚರಿ ಪಡುವ ವೈರಲ್ ವಿಡಿಯೋ!
ಸದ್ಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಕೆಲವೊಮ್ಮೆ ಪ್ರಾಣಿಗಳ ಹಾಗೂ ಕೆಲವೊಮ್ಮೆ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತವೆ. ಅಂತಹದೇ ಒಂದು ವಿಡಿಯೋ ಕುರಿತು ನಾವು ನಿಮಗೆ ತಿಳಿಸುವವರಿದ್ದೇವೆ. ಕಳ್ಳ ತನ್ನ ಕಾರ್ಯವನ್ನು ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ಕಾಳಜಿಪೂರ್ವಕವಾಗಿ ಮಾಡುತ್ತಾನೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಈ ಕಳ್ಳತನ ಮಾಡುವ ವಿಡಿಯೋ ಸದ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಪಾಕಿಸ್ತಾನದ ಕರಾಚಿಯಲ್ಲಿ ಕಳ್ಳತನದ ಕುರಿತು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಗಲ್ಫ್ ನ್ಯೂಜ ಕೊಟ್ಟ ಮಾಹಿತಿಯ ಪ್ರಕಾರ, ಡೆಲಿವರಿ ಬಾಯ್ ಆರ್ಡರ್ ಡೆಲಿವರಿ ಮಾಡುವ ಸಲುವಾಗಿ ಮನೆಯ ಬಾಗಿಲಿಗೆ ಬರುತ್ತಾನೆ. ಅದೇ ವೇಳಗೆ ಬೈಕ್ ಮೇಲೆ ಇಬ್ಬರು ಕಳ್ಳರು ಬರುತ್ತಾರೆ. ಅವರಿಗೆ ಪಾರ್ಸಲ್ ನೋಡಿ ಅದನ್ನು ಕದಿಯಬೇಕು ಎಂಬ ಆಸಕ್ತಿ ಮೂಡುತ್ತದೆ. ಅದನ್ನು ಕದಿಯುವ ಸಲುವಾಗಿ ಇಬ್ಬರಲ್ಲಿ ಒಬ್ಬ ಬೈಕ್ ಮೇಲಿಂದ ಕೆಳಗಡೆ ಇಳಿದು ಅವನ ಕಡೆಗೆ ಬರುತ್ತಾನೆ. ಈ ಕಳ್ಳನು ಕಳ್ಳತನ ಮಾಡುವದನ್ನು ಬಿಟ್ಟು ಪಾರ್ಸಲ್ ಬಾಯ್ ಯೊಂದಿಗೆ ಮಾತನಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಡೆಲಿವರಿ ಬಾಯ್ ಕಳ್ಳನಿಗೆ ಏನೋ ಹೇಳುತ್ತಾ ಅಳಲು ಪ್ರಾರಂಭಿಸುತ್ತಾನೆ. ಆದುದರಿಂದ ಈ ಕಳ್ಳನ ಮನಸ್ಸು ಕರಗುತ್ತದೆ ತಕ್ಷಣ ಆತನು ಕಸಿದುಕೊಂಡಿರುವ ಪಾರ್ಸಲ್ ಅನ್ನು ಮರಳಿ ಅವನಿಗೆ ಕೊಟ್ಟು ಅವನನ್ನು ಅಪ್ಪಿಕೊಂಡು ಹೊರಟು ಹೋಗುತ್ತಾನೆ.
ಪಾರ್ಸಲ್ ಕದಿಯುವ ಸಲುವಾಗಿ ಬಂದ ಕಳ್ಳನು ಡೆಲಿವರಿ ಬಾಯ್ ಗೆ ತಬ್ಬಿಕೊಳ್ಳುತ್ತಾನೆ, ಮುಂದೇನಾಯಿತು ಎಂಬುದು ನೀವೇ ವಿಡಿಯೋದಲ್ಲಿ ನೋಡಿ.
ಕಳ್ಳರು ಕಳ್ಳತನ ಮಾಡಿ ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನಾವು ಎಷ್ಟೋ ವಿಡಿಯೋ ನೋಡಿದ್ದೇವೆ. ಆದರೆ ಒಂದು ವಿಚಿತ್ರ ಕಳ್ಳತನದ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಪಾಕಿಸ್ತಾನದಲ್ಲಿಯ ಸ್ಥಾನಿಕ ಮೀಡಿಯಾ ನೀಡಿದ ಮಾಹಿತಿಯ ಅನುಸಾರ, ಕಳ್ಳತನ ಮಾಡುವವನು ಡೆಲಿವರಿ ಬಾಯ್ ಗೆ ಬೆದರಿಸಲು ಪ್ರಯತ್ನ ಮಾಡುತ್ತಾನೆ. ಆದರೆ ಡೆಲಿವರಿ ಮಾಡಲು ಬಂದ ಯುವಕ ಜೋರಾಗಿ ಅಳಲು ಪ್ರಾರಂಭ ಮಾಡಿದಾಗ ಅವನ ಸಮಸ್ಯೆಯನ್ನು ತಿಳಿದುಕೊಂಡು ಕಳ್ಳನು ಕಸಿದುಕೊಂಡ ಎಲ್ಲಾ ವಸ್ತುಗಳನ್ನು ಮರಳಿ ನೀಡಿ ಅವನನ್ನು ತಬ್ಬಿಕೊಂಡು ಅಲ್ಲಿಂದ ಹೋಗಿದ್ದಾನೆ.
ಕೋವಿಡ್-19 ಸಂದರ್ಭದಲ್ಲಿ ಜನರೆಲ್ಲ ಮನೆಯ ಒಳಗಡೆ ವಾಸವಾಗಿದ್ದರೆ ಇನ್ನೂ ಕೆಲವು ಜನರು ಮನೆಯ ಹೊರಗಡೆ ಬಂದು ಜನರ ಸೇವೆಯನ್ನು ಮಾಡುತ್ತಿದ್ದಾರೆ. ಅವರನ್ನು ನಾವು “ಕೋವಿಡ್ ವಾರಿಯರ್ಸ್” ಎಂದು ಕರೆಯುತ್ತೇವೆ. ಆಹಾರ ಡೆಲಿವರಿ ಮಾಡುವ ಹುಡುಗರು ಕೂಡಾ ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಹಾರ ಪೂರೈಕೆ ಮಾಡುತ್ತ ಅದೆಷ್ಟೋ ಜನರಿಗೆ ಸಹಾಯ ಮಾಡುತ್ತಾರೆ. ಇವರಿಗೆ ಕೂಡಾ ‘ಕೋವಿಡ್ ವಾರಿಯರ್ಸ್’ ಅಂತಾನೆ ಹೇಳಬಹುದು.