Video; ರಾಯಲ್ ಎನ್ ಫೀಲ್ಡ್ ಪೀಸ್ ಪೀಸ್ ಮಾಡಿದ ಈ ಶಕ್ತಿಶಾಲಿ ಟು ವೀಲರ್! ಇನ್ಮುಂದೆ ಇದೇ ಬೈಕ್ ಮಾಡುವಿರಿ ಡಿಮಾಂಡ್!

ರಸ್ತೆ ಮೇಲೆ ದಿನನಿತ್ಯ ಅನೇಕ ರೀತಿಯ ದುರ್ಘಟನೆಗಳು ನಡೆಯುವುದನ್ನು ಕೇಳುತ್ತೇವೆ ಇಲ್ಲ, ಸೋಶಿಯಲ್ ಮೀಡಿಯಾದಲ್ಲಿ ಇವುಗಳ ವಿಡಿಯೋಗಳನ್ನು ನೋಡುತ್ತೇವೆ. ಇಂಥ ಇನ್ಸಿಡೆಂಟ್ ಗಳಲ್ಲಿ ಕೆಲವುಗಳನ್ನು ವೀಕ್ಷಿಸಿದಾಗ ಒಮ್ಮೊಮ್ಮೆ ನಗಬೇಕೋ ಅಳಬೇಕೋ ಒಂದು ತಿಳಿಯುವುದಿಲ್ಲ. ಸದ್ಯ ಇಲ್ಲಿ ನೋಡಲಿರುವ ಒಂದು ವಿಚಿತ್ರ ಸನ್ನಿವೇಶ ಇದರ ಪಕ್ಕಾ ಉದಾಹರಣೆಯಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ಎರಡು ಬೈಕ್ ಗಳ ಡಿಕ್ಕಿಯಾಗಿದೆ. ಇಲ್ಲಿ ಹೆಚ್ಚು ಕಡಿಮೆ ಎಲ್ಲರ ಅಚ್ಚುಮೆಚ್ಚಿನ ಟೂ ವೀಲರ್ ಬೈಕ್ ಬುಲೆಟ್ ಅಥವಾ ರಾಯಲ್ ಎನ್ಫೀಲ್ಡ್ ಎರಡು ಪೀಸ್ ಗಳಾಗಿ ನೆಲದ ಮೇಲೆ ಬಿದ್ದುಬಿಟ್ಟಿದೆ. ವಿಡಿಯೋದ ದೃಶ್ಯದಲ್ಲಿ ಕಂಡುಬರುವುದನ್ನು ನೋಡಿದಾಗ ರಾಯಲ್ ಎನ್ಫೀಲ್ಡ್ ಈ ರೀತಿ ಎರಡು ಹೋಳುಗಳಾಗಿ ಬಿದ್ದಿರುವುದನ್ನು ಗಮನಿಸಿದಾಗ ಎದುರಿನ ವಾಹನ ಇದಕ್ಕಿಂತಲೂ ಶಕ್ತಿಶಾಲಿ ಆಗಿರಬೇಕೆಂಬ ಯೋಚನೆ ತಲೆಯಲ್ಲಿ ಸುಳಿಯುತ್ತದೆ. ವಿಡಿಯೋ ಹಾಗೆ ಮುಂದೆ ಚಲಿಸಿದಾಗ ಗೊತ್ತಾಗುತ್ತದೆ ರಾಯಲ್ ಎನ್ಫೀಲ್ಡ್ ಬೈಕ್ ಗೆ ಡಿಕ್ಕಿ ಹೊಡೆದ ವಾಹನ ಬೇರಾವುದೂ ದೊಡ್ಡ ವಾಹನವಲ್ಲದೆ ಚಿಕ್ಕ ಸ್ಕೂಟರ್ ಆಗಿದೆ ಎಂಬುದು ಕಂಡುಬರುತ್ತದೆ. ಇಲ್ಲಿ ರಾಯಲ್ ಎನ್ಫೀಲ್ಡ್ ಬೈಕಿನ ಮುಂದಿನ ಚಕ್ರ ಸಂಪೂರ್ಣ ಬೇರೆಯಾಗಿ ಬಿದ್ದುಬಿಟ್ಟಿದೆ. ಅದರ ಎದುರಿಗೆ ಸಂಪೂರ್ಣ ದೇಶಿ ಅವತಾರದಲ್ಲಿರುವ TVS 50 ಮಾತ್ರ ಹೆಚ್ಚು ಡ್ಯಾಮೇಜ್ ಗೊಳ್ಳದೆ ಹಾಗೆಯೇ ಟೈಟ್ ಪೋಸಿಶನ್ ನಲ್ಲಿ ನಿಂತಿದೆ.

ವೀಡಿಯೋ ನೋಡಿ

 

View this post on Instagram

 

A post shared by Shaikh Riyaz (@shaikhriyaz5821)

ಪ್ರಸ್ತುತ ಈ ವಿಡಿಯೋ ಇನ್‌ಸ್ಟಾಗ್ರಾಮ್ ನಲ್ಲಿ shaikhriyaz 5821 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಮಂದಿ ನೋಡಿದ್ದಲ್ಲದೆ ನೂರಾರು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ನೆಟ್ಟಿಗರು ರಾಯಲ್ ಎನ್ಫೀಲ್ಡ್ ನ ಪರಿಸ್ಥಿತಿ ನೋಡಿ ವಿವಿಧ ರೀತಿಯ ತಮಾಷೆಯ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ.