🤦🤷 ಮಾಹಿಯ CSK ತಂಡದಿಂದ ಇಂಥ ತಲೆ ಚಚ್ಚಿಕೊಳ್ಳುವಂಥ ಅಪೇಕ್ಷೆ ಯಾರು ಮಾಡಿರಲಾರರು! Video ನೋಡಿ🤣🤣
ಕ್ರಿಕೆಟ್ ನಲ್ಲಿ ಅನೇಕ ಸಲ ಎಮೋಷನಲ್ ಜೊತೆಗೆ ಸಾಕಷ್ಟು ಹಾಸ್ಯದ ಘಟನೆಗಳು ಸಹ ನಡೆಯುತ್ತವೆ. ಈ ದೃಶ್ಯಗಳನ್ನು ನೋಡಿದಾಗ ಕ್ರಿಕೆಟ್ ಪ್ರೇಮಿಗಳಿಗೆ ನಗು ತಡೆದುಕೊಳ್ಳುವುದು ಅಸಾಧ್ಯವಾಗಿ ಬಿಡುತ್ತದೆ.
ಕ್ರಿಕೆಟ್ ನಲ್ಲಿ ಅದ್ಭುತ ಯಶಸ್ಸು ಸಾಧಿಸಿದ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ನಾಯಕತ್ವವನ್ನು ಸಹ ತುಂಬಾ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮಾಹಿಯವರ ಸಿಎಸ್‌ಕೆ ತಂಡವೆಂದರೆ ಐಪಿಎಲ್ ನಲ್ಲಿ ವಿಶೇಷ ಪ್ರಾಬಲ್ಯ ಮೆರೆದ ತಂಡವಾಗಿದೆ. ಇಂಥ ತಂಡದಿಂದ ಬೌಲಿಂಗ್ ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ಹೀಗೆ ಯಾವುದೇ ಘಟಕವಾಗಲಿ ಒಳ್ಳೆಯದನ್ನೇ ಅಪೇಕ್ಷಿಸುತ್ತಾರೆ. ಸದ್ಯ ರನ್ ಔಟ್ ಸಂದರ್ಭದಲ್ಲಿ ಮಾಹಿ ನೇತೃತ್ವದ ಸಿಎಸ್‌ಕೆ ತಂಡ ಯಾವ ರೀತಿ ಪರದಾಟ ಮಾಡಿ ಪೇಚಾಟಕ್ಕೆ ಸಿಲುಕಿಕೊಂಡು ಒದ್ದಾಡಿದೆ ಎಂಬುದನ್ನು ಇಲ್ಲಿ ನೋಡಬಹುದು. ಪ್ರಸ್ತುತ ಈ ದೃಶ್ಯವನ್ನು ವರ್ಣನೆ ಮಾಡುವುದಕ್ಕಿಂತ ಕಣ್ಣಾರೆ ನೋಡುವುದೇ ಒಂದು ವಿಶೇಷ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋದಲ್ಲಿಯ ಆಟಗಾರರ ಪರದಾಟವನ್ನು ನೋಡಿ ಸ್ವತಃ ಧೋನಿ ಅವರೇ ತಲೆತಲೆ ಚಚ್ಚಿಕೊಂಡಿರಬೇಕು. ಒಂದರ ಮೇಲೊಂದರಂತೆ ಅನೇಕ ಅವಕಾಶಗಳು ಸಿಕ್ಕಾಗಲೂ ಒಬ್ಬ ಬ್ಯಾಟ್ಸಮನ್ ಗೆ ಸರಿಯಾಗಿ ರನ್ ಔಟ್ ಸಹ ಮಾಡಲಾಗದೆ ಎಂಥ ಅಸಹಾಯಕ ಪರಿಸ್ಥಿತಿಯಲ್ಲಿ ತಮ್ಮ ಫೀಲ್ಡರ್ ಗಳಿದ್ದಾರೆ ಎಂಬ ಅರಿವು ಬಹುಶಃ ಧೋನಿಯವರಿಗೆ ಆಗಿರಬೇಕು.
ಈ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ popular0031 ಹೆಸರಿನ ಪೇಜ್ ನಿಂದ ಸೋಶಿಯಲ್ ಮೀಡಿಯಾ ಸೈಟ್ ನಲ್ಲಿ ಶೇರ್ ಮಾಡಲಾಗಿದೆ.