Video; ಈ ಮುದ್ದು ಮಗು ತನ್ನ ಗೆಲುವಿಗೆ ನೀಡಿತು ಸೂಪರ್ ಏಕ್ಸಪ್ರೇಶನ್..! ನೋಡಿ ನೀವೂ ಆಗುವಿರಿ ಮರುಳ.

ಮುಗ್ಧ ಮಕ್ಕಳ ವಿಡಿಯೋಗಳು ಯಾರನ್ನೇ ಆಗಲಿ ಮಂತ್ರಮುಗ್ದಮಾಡುತ್ತವೆ. ಈ ವಿಡಿಯೋಗಳಲ್ಲಿ ಮಕ್ಕಳ ನೈಸರ್ಗಿಕ ಮುಗ್ಧತೆಯು ವಿಡಿಯೋ ನೋಡುಗರನ್ನು ಕ್ಷಣದಲ್ಲಿ ಮೋಹಗೊಳಿಸುತ್ತದೆ. ಮಕ್ಕಳ ಆಟ ಚೆಂದ, ಮಕ್ಕಳ ನೋಟ ಚೆಂದ ಪುಟಾಣಿ ಮಕ್ಕಳು ಮನೆಯಲ್ಲಿ ಇದ್ದರೆ ಅಲ್ಲಿ ಬೇಸರ ಅನ್ನೋದೆ ಇರಲ್ಲ. ಹೀಗೆಲ್ಲಾ ಹೇಳೋ ನಾವು ಅನೇಕ ಸಂದರ್ಭಗಳಲ್ಲಿ ಈ ಮಕ್ಕಳು ನೀಡೋ ಎಕ್ಸ್‌ಪ್ರೆಷನ್ ಗಳನ್ನು ನೋಡಿರೋದೇ ಇಲ್ಲ. ಆದರೆ ಕೆಲವರು ಹಾಗಲ್ಲ ತಮ್ಮ ಮಕ್ಕಳಿಗೆ ತಾವು ಮಕ್ಕಳಾಗಿದ್ದಾಗ ಏನೆಲ್ಲಾ ಆಟ ಆಡಿದ್ರು, ಹೇಗೆಲ್ಲಾ ತುಂಟಾಟ ಮಾಡಿದ್ರು ಅನ್ನೋದನ್ನು ತೋರಿಸೋಕೆ, ಆ ಮಧುರವಾದ ಸ್ಮರಣೀಯ ಕ್ಷಣಗಳನ್ನು ಫೋಟೋಗಳಲ್ಲಿ, ವೀಡಿಯೋಗಳಲ್ಲಿ ತಮ್ಮ ಮಕ್ಕಳ ಮುದ್ದು ಮುದ್ದಾದ ಆಟಗಳನ್ನು, ಹಾಡುಗಳನ್ನು, ತುಂಟಾಟಗಳನ್ನು ಎಲ್ಲವನ್ನೂ ಕೂಡಾ ಸಂಗ್ರಹಿಸಿ ಇಡ್ತಾರೆ. ಇನ್ನೂ ಕೆಲವರು ತಮ್ಮ ಮಕ್ಕಳ ಈ ಮುದ್ದಾದ ಎಕ್ಸ್‌ಪ್ರೆಷನ್ ಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ತಮ್ಮ ಸಂತೋಷವನ್ನು ಎಲ್ಲರಿಗೂ ಹಂಚೋದು ಕೂಡಾ ಉಂಟು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸೂಪರ್ ಆಗಿ ಎಕ್ಸ್ಪ್ರೆಶನ್ ನೀಡಿದ ಸುಂದರ ವಿಡಿಯೋ ಒಂದು ಎಲ್ಲರಿಗೂ ಸಮ್ಮೋಹನಗೊಳಿಸುತ್ತಿದೆ.

ಈ ವಿಡಿಯೋದಲ್ಲಿ ಹೆಚ್ಚೆಂದರೆ ಎಂಟರಿಂದ ಹತ್ತು ತಿಂಗಳಿನ ಮಗು ನೆಲದ ಮೇಲೆ ಕುಳಿತುಕೊಂಡು ತನ್ನ ಪೋಷಕರ ಜೊತೆಗೆ ನೀರಿನ ಬಾಟಲ್ ನೊಂದಿಗೆ ಆಟ ಆಡುತ್ತಿದೆ. ತಂದೆ ಅರ್ಧ ತುಂಬಿದ ನೀರಿನ ಬಾಟಲ್ ನೆಲದ ಮೇಲೆ ಎಸೆದಾಗ ಆ ಬಾಟಲ್ ಸರಿಯಾಗಿ ನಿಲ್ಲದೆ ಕೆಳಗೆ ಅಡ್ಡಲಾಗಿ ಬೀಳುತ್ತದೆ. ನಂತರ ಅದೇ ಬಾಟಲ್ ಮಗು ತೆಗೆದುಕೊಂಡು ಮತ್ತೆ ಕೆಳಗೆ ಎಸೆಯುತ್ತದೆ. ಆಗ ಬಾಟಲ್ ಸರಿಯಾಗಿ ನಿಂತುಬಿಡುತ್ತದೆ. ಅದನ್ನು ನೋಡಿದ ಮಗು ಒಮ್ಮೆಲೆ ವಾವ್ ಎನ್ನುವ ರೀತಿಯಲ್ಲಿ ಆಶ್ಚರ್ಯವನ್ನು ವ್ಯಕ್ತ ಮಾಡಿದೆ. ಮಗುವಿನ ರಿಯಾಕ್ಷನ್ ನ ಈ ದೃಶ್ಯ ನಿಜಕ್ಕೂ ನೋಡುಗರಿಗೆ ಮಂತ್ರಮುಗ್ಧ ಮಾಡುತ್ತದೆ.

ನೋಡಿ ಈ ವಿಡಿಯೋ…

ಪ್ರಸ್ತುತ ಈ ಮಗು ಅದ್ಭುತವಾಗಿ ಎಕ್ಸ್ಪ್ರೆಶನ್ ನೀಡಿದ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 28 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ಅಷ್ಟೇ ಅಲ್ಲ ಸುಮಾರು 2.3 ಮಿಲಿಯನ್ ಗಿಂತಲೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.