ರಸ್ತೆ ಮಧ್ಯೆಯೇ ಬೈಕ್ ಮೇಲೆ ಕುಳಿತುಕೊಳ್ಳಲು ಯತ್ನಿಸಿದ ಗೂಳಿ! ನೋಡಿ ಈ ತಮಾಷೆಯ ವಿಡಿಯೋ…
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ದಿನನಿತ್ಯ ಕಂಡುಬರುವ ಮತ್ತು ತಮಗೆ ಇಷ್ಟವಾದ ಅನೇಕ ರೀತಿಯ ವಿಶೇಷ ವಿಡಿಯೋಗಳನ್ನು ಶೇರ್ ಮಾಡುತ್ತಾ ಇರುತ್ತಾರೆ. ಇವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದಾಗ ನಗುತಡೆದುಕೊಳ್ಳುವುದು ಅಸಾಧ್ಯವಾಗಿ ಬಿಡುತ್ತದೆ. ಸದ್ಯ ಈಗ ನೋಡುವ ವಿಡಿಯೋ ಒಂದು ಇದೇ ರೀತಿಯ ತಮಾಷೆಯಿಂದ ಕೂಡಿದ್ದಾಗಿದೆ. ಪ್ರಸ್ತುತ ವಿಡಿಯೋದಲ್ಲಿ ಗೂಳಿ ಮಾಡಿದ ಕೆಲಸ ನೋಡೋಣ ಬನ್ನಿ.
ಈ ತಮಾಷೆಯ ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ವ್ಯಕ್ತಿಯೊಬ್ಬ ಇನ್ನೇನು ತನ್ನ ಬೈಕ್ ಸ್ಟಾರ್ಟ್ ಮಾಡಿ ಅದರ ಮೇಲೆ ಕುಳಿತು ಹೋಗಬೇಕು ಎನ್ನುವಷ್ಟರಲ್ಲಿಯೇ ಬೇರೊಂದು ಇನ್ಸಿಡೆಂಟ್ ನಡೆದು ಹೋಗುತ್ತದೆ. ನಂತರ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಎಲ್ಲರೂ ನೋಡಿ ಮನರಂಜನೆ ಪಡೆಯುವಂತಾಗುತ್ತದೆ. ಕಾರಣ ವ್ಯಕ್ತಿ ತನ್ನ ಬೈಕ್ ಸ್ಟಾರ್ಟ್ ಮಾಡಿ ಇನ್ನೇನು ಹೋಗಬೇಕು ಎನ್ನುವಷ್ಟರಲ್ಲಿಯೇ ಆಕಸ್ಮಿಕವಾಗಿ ಹಿಂದಿನಿಂದ ಗೂಳಿಯೊಂದು ತನ್ನ ಮುಂದಿನ ಎರಡು ಕಾಲುಗಳನ್ನು ಎತ್ತಿ ಬೈಕ್ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತದೆ. ಇದರಿಂದ ಬೈಕ್ ಸವಾರ ಹಠಾತ್ತನೆ ಗಾಬರಿಯಾಗಿ ಹಾಗೆಯೇ ತನ್ನ ಬೈಕನ್ನು ಮುಂದೆ ಓಡಿಸಲು ಪ್ರಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಗೂಳಿಯು ಅದೇ ಪೊಜಿಷನ್ನಲ್ಲಿ ಕೆಲವು ಮೀಟರ್ ಗಳವರೆಗೆ ಮುಂದೆ ಸಾಗುತ್ತದೆ. ನಂತರ ಬೈಕಿನ ವೇಗ ಹೆಚ್ಚಿಸಿದಂತೆ ಗೂಳಿ ಈ ಬೈಕಿನ ಸಹವಾಸವೇ ಬೇಡ ಎಂದು ತನ್ನ ಕಾಲುಗಳನ್ನು ಕೆಳಗಿಳಿಸುತ್ತದೆ. ಈ ದೃಶ್ಯ ನೋಡಿದಾಗ ಗೂಳಿಯು ಬೈಕ್ ಸವಾರನಿಗೆ ಲಿಫ್ಟ್ ಕೇಳುತ್ತಿದೆ ಎನ್ನುವಂತಿತ್ತು. ಈ ಎಲ್ಲ ದೃಶ್ಯವನ್ನು ನೋಡಿದಾಗ ನಿಮಗೆ ನಗುತಡೆದುಕೊಳ್ಳುವುದು ಅಸಾಧ್ಯವಾಗಿ ಬಿಡುತ್ತದೆ.
ವಿಡಿಯೋ ನೋಡಿ
https://twitter.com/HasnaZarooriHai/status/1583688805910925312?ref_src=twsrc%5Etfw%7Ctwcamp%5Etweetembed%7Ctwterm%5E1583688805910925312%7Ctwgr%5Eb0351991b0561f2d19b3c46d16ecd09037a58caa%7Ctwcon%5Es1_c10&ref_url=https%3A%2F%2Fwww.abplive.com%2Ftrending%2Fox-tries-to-take-lift-from-bike-rider-funny-viral-video-on-social-media-2247908
ಪ್ರಸ್ತುತ ಈ ತಮಾಷೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ “ಹಸನಾ ಜರೂರಿ ಹೈ” ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ 5 ಲಕ್ಷ ಜನರಿಗೂ ಮೇಲ್ಪಟ್ಟು ಮನರಂಜನೆಯನ್ನು ನೀಡಿದ್ದಲ್ಲದೆ ಸಾವಿರಾರು ಜನರು ಸಹ ಖುಷಿಯಿಂದ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.