ಚೀನಾದಲ್ಲಿ ನಡೆಯುವ ಡ್ರೈವಿಂಗ್ ಟೆಸ್ಟ್ ಇಷ್ಟೊಂದು ಕಠಿಣವೇ? ವಿಡಿಯೋ ನೋಡಿ ಹರಿಯಿತು ನೆಟ್ಟಿಗರ ಬೆವರು.

ಸದ್ಯಕ್ಕೆ ಹೆಚ್ಚು ಕಡಿಮೆ ಎಲ್ಲರೂ ಬೈಕ್ ಅಥವಾ ಕಾರು ಚಲಾಯಿಸುತ್ತಾರೆ. ಈ ವಾಹನಗಳನ್ನು ನಡೆಸುವ ಮುಂಚೆ ನಿಮ್ಮ ಹತ್ತಿರ ಇರಬೇಕಾದ ಮಹತ್ವದ ಡಾಕ್ಯುಮೆಂಟ್ ಡ್ರೈವಿಂಗ್ ಲೈಸೆನ್ಸ್. ಈ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕಾಗಿ ಯಾವ ಯಾವ ಪ್ರೋಸೆಸ್ ಗಳನ್ನು ಮಾಡಿದ್ದೀರಿ ಎಂಬುದು ಡ್ರೈವಿಂಗ್ ಲೈಸೆನ್ಸ್ ಪಡೆದವರಿಗೆ ಗೊತ್ತೇ ಇರುತ್ತದೆ. ಇದರಲ್ಲಿ ಮುಖ್ಯವಾಗಿ ಹಾಗೂ ಕೊನೆಯದಾಗಿ ಪಾಸ್ ಆಗಬೇಕಾಗಿದ್ದು ಡ್ರೈವಿಂಗ್ ಟೆಸ್ಟ್ ನಲ್ಲಿ ಅಲ್ವಾ? ಡ್ರೈವಿಂಗ್ ಲೈಸೆನ್ಸ್ ಪಡೆಯುವ ಸಂದರ್ಭದಲ್ಲಿ ಅಭ್ಯರ್ಥಿಗೆ ಡ್ರೈವಿಂಗ್ ಟೆಸ್ಟ್ ನಲ್ಲಿ ಪಾಸ್ ಆಗಬೇಕಾದರೆ ಸಾಕು ಸಾಕಾಗಿ ಹೋಗುತ್ತದೆ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚೀನಾದ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಚೀನಾದಲ್ಲಿ ನಡೆಯುವ ಕಠಿಣವಾದ ಡ್ರೈವಿಂಗ್ ಟೆಸ್ಟ್ ನ ದೃಶ್ಯ ಕಂಡು ನೆಟ್ಟಿಗರು ಅಕ್ಷರಶಃ ದಂಗಾಗಿದ್ದಾರೆ.

ವೈರಲ್ ಆಗುತ್ತಿರುವ ಚೀನಾದ ಡ್ರೈವಿಂಗ್ ಟೆಸ್ಟ್ ನೋಡಿ ನೆಟ್ಟಿಗರ ಬೆವರು ಹರಿಯುತ್ತಿದೆ. ಪ್ರಸ್ತುತ ಈ ವಿಡಿಯೋದಲ್ಲಿ ಕಂಡುಬರುವ ತಿರುವುಮುರುವಿನ ರಸ್ತೆ ಮತ್ತು ಇಂಗ್ಲೀಷ್ 8 ಸೈನ್ ನಲ್ಲಿ ಡ್ರೈವ್ ಮಾಡುವ ಈ ದೃಶ್ಯ ನೋಡಿದಾಗ ಈ ಟಾಸ್ಕ್ ಪೂರ್ಣಗೊಳಿಸುವುದೆಂದರೆ ಅಭ್ಯರ್ಥಿಗೆ ದೊಡ್ಡ ಸವಾಲೇ ಆಗಿದೆ ಎಂದು ತಿಳಿದು ಬರುತ್ತದೆ. ಈ ಸಂದರ್ಭದಲ್ಲಿ ಅಭ್ಯರ್ಥಿಯು ನಡೆಸುತ್ತಿರುವ ಕಾರು ಎಲ್ಲಿಯೂ ಒಂದು ಬಾರಿಯೂ ವ್ಹೈಟ್ ಔಟ್ಲೈನ್ ಗೆ ಟಚ್ ಮಾಡುವುದಿಲ್ಲ. ಹೊಸದಾದ ಅಥವಾ ಲೈಸೆನ್ಸ್ ಪಡೆಯಲು ಪ್ರಯತ್ನಿಸುತ್ತಿರುವ ಮೊದಲ ಡ್ರೈವರ್ ಗೆ ಇದೊಂದು ತುಂಬಾ ಕಠಿಣವಾದ ಕೆಲಸವೇ ಆಗಿದೆ. ಚೀನಾದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರೆ ಅಭ್ಯರ್ಥಿಯು ಯಾವ ರೀತಿ ಪರಿಶ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂಬುದು ಈ ವಿಡಿಯೋದಿಂದ ತಿಳಿದು ಬರುತ್ತದೆ.

ಪ್ರಸ್ತುತ ಈ ಕಠಿಣವಾದ ಡ್ರೈವಿಂಗ್ ಟೆಸ್ಟ್ ನೋಡಿ ಈ ವಿಡಿಯೋದಲ್ಲಿ…

ಚೀನಾದಲ್ಲಿಯ ಡ್ರೈವಿಂಗ್ ಟೆಸ್ಟ್ ನೀಡುವ ಈ ವಿಡಿಯೋದ ದೃಶ್ಯವನ್ನು ಟ್ವಿಟರ್ ನಲ್ಲಿ ತಾನಸು ಯೆನ್ ಹೆಸರಿನಿಂದ ಶೇರ್ ಮಾಡಲಾಗಿದೆ. ಜೊತೆಗೆ ಕ್ಯಾಪ್ಷನ್ ನಲ್ಲಿ “ಚೀನಾದಲ್ಲಿ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಸ್ಟೇಷನ್” ಎಂದು ಬರೆದುಕೊಂಡಿದ್ದಾನೆ. 48 ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ಸದ್ಯ ಇಂಟರ್ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಒಂದು ಕೋಟಿಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ಲಕ್ಷ ಲಕ್ಷ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ಸಂಖ್ಯೆ ಕ್ಷಣ ಕ್ಷಣಕ್ಕೆ ಹೆಚ್ಚುವುದರ ಜೊತೆಗೆ ಸಾಕಷ್ಟು ನೆಟ್ಟಿಗರು ಪ್ರಸ್ತುತ ವಿಡಿಯೋ ನೋಡಿ ತಮ್ಮ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ.