DRS ತೆಗೆದುಕೊಳ್ಳುವಲ್ಲಿ ಮಾಹಿ ಮೈಂಡ್ ಎಷ್ಟು ಸೂಪರ್ ಫಾಸ್ಟ್? ನೋಡಿ ಈ Video ದಲ್ಲಿ…

ಮಾಹಿ ಕ್ರಿಕೆಟ್ ರಸಿಕರ ಮನದಲ್ಲಿ ಅಚ್ಚಳಿಯದಂತೆ ಮನೆ ಮಾಡಿದ್ದಾರೆ. ಇದಕ್ಕೆ ಕಾರಣ ಅವರಲ್ಲಿರುವ ಕ್ರಿಕೆಟ್ ಕೌಶಲ್ಯದ ಜೊತೆಗೆ ಕ್ರಿಕೆಟ್ ನ್ನು ಅದ್ಭುತವಾಗಿ ತಿಳಿದುಕೊಂಡಿದ್ದರು. ಮೈದಾನದ ಮೇಲೆ ಅವರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯಗಳು ಎಷ್ಟೊಂದು ಪ್ರಭಾವ ಬೀರುತ್ತಿದ್ದವು ಎಂಬುದು ಅನೇಕ ಬಾರಿ ಸಾಬೀತಾಗಿದೆ. ಜೊತೆಗೆ ಅವರು ತೆಗೆದುಕೊಳ್ಳುತ್ತಿದ್ದ ನಿರ್ಣಯಗಳು ತುಂಬಾ ಫಾಸ್ಟಾಗಿರುತ್ತಿದ್ದವು. ಸದ್ಯ ಇದೇ ರೀತಿಯ ಒಂದು ವಿಡಿಯೋ ನಮಗೆ ಇಲ್ಲಿ ನೋಡಲು ಸಿಗುತ್ತದೆ.

ಪ್ರಸ್ತುತ ಈ ವಿಡಿಯೋದಲ್ಲಿ ಭಾರತ ತಂಡ ಶ್ರೀಲಂಕಾದ ವಿರುದ್ಧ ಆಡುತ್ತಿತ್ತು. ಈ ಸಂದರ್ಭದಲ್ಲಿ ಭಾರತ 87 ರನ್ ಗಳಿಗೆ 8 ವಿಕೆಟ್ ಗಳು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ನಿಂತಿದ್ದರು. ಎದುರಿಗೆ ಜಸ್ ಪ್ರೀತ್ ಬುಮರಾ ಬ್ಯಾಟ್ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಶ್ರೀಲಂಕಾದ ಬೌಲರ್ ಎಲ್ ಬಿ ಡಬ್ಲ್ಯೂ ಗಾಗಿ ಅಂಪೈರ್ ಕಡೆಗೆ ಜೋರಾದ ಅಪಿಲ್ ಮಾಡುತ್ತಾರೆ. ಆಗ ಅಂಪೈರ್ ತಕ್ಷಣ ಬೌಲರ್ ನ ಮನವಿಯನ್ನು ಸಮ್ಮತಿಸಿ ಜಸ್ ಪ್ರೀತ್ ಬುಮರಾಗೆ ಎಲ್ ಬಿ ಡಬ್ಲ್ಯೂ ಔಟ್ ಕೊಡುತ್ತಾರೆ. ಬೌಲರ್ ಇತ್ತ ಆನಂದೋತ್ಸವ ಶುರು ಮಾಡುವಷ್ಟರಲ್ಲಿಯೇ ಅತ್ತ ಧೋನಿ ಥರ್ಡ್ಅಂಪೈರ್ಗೆ ಡಿ ಆರ್ ಎಸ್ ಮನವಿಯನ್ನು ಸಲ್ಲಿಸಿರುತ್ತಾರೆ. ಡಿ ಆರ್ ಎಸ್ ನಲ್ಲಿ ನೋಡಿದಾಗ ಥರ್ಡ್ಅಂಪೈರ್ ಗ್ರೌಂಡ್ ಅಂಪೈರ್ ನ ನಿರ್ಣಯವನ್ನು ತಿರಸ್ಕರಿಸಿ ಜಸ್ ಪ್ರೀತ್ ಬುಮರಾ ಔಟ್ ಆಗಿಲ್ಲವೆಂದು ಡಿಸಿಷನ್ ನೀಡುತ್ತಾರೆ. ಒಟ್ಟಿನಲ್ಲಿ ಧೋನಿಯವರು ಮೈದಾನದಲ್ಲಿದ್ದಾಗ ಮೈಯೆಲ್ಲಾ ಕಣ್ಣುಗಳಾಗಿ ಎಲ್ಲ ಕಡೆಗೂ ಗಮನವಿಟ್ಟಿರುತ್ತಾರೆ ಎಂದು ತಿಳಿದು ಬರುತ್ತದೆ. ಅದಕ್ಕಾಗಿಯೇ ಮಹೇಂದ್ರ ಸಿಂಗ್ ಧೋನಿ ಅವರಿಗೆ ದೊಡ್ಡ ಫ್ಯಾನ್ ಬಳಗ ಇದೆ ಎಂದು ಹೇಳಬಹುದು. ಅವರ ಪ್ರೆಸೆನ್ಸ್ ಆಫ್ ಮೈಂಡ್ ಅದ್ಭುತವಾಗಿತ್ತು.

ವೀಡಿಯೋ ನೋಡಿ

ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ mrkishan_8601 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 3.3 ಮಿಲಿಯನ್ ವರೆಗೆ ವೀಕ್ಷಣೆಯನ್ನು ಪಡೆದಿದೆ ಹಾಗೂ ಸುಮಾರು ಮೂರು ಲಕ್ಷ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.