👌👌 Supar Video; ಎಲ್ಲವೂ ಅವರಿಗಾಗಿಯೇ, ಜನುಮ ನೀಡಿದವರಿಗಾಗಿಯೇ…ಎಮೋಷನಲ್ ನೆಟ್ಟಿಗರಿಗೆ ಮಾತ್ರ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವು ವಿಡಿಯೋಗಳು ಎಲ್ಲರ ಮನಸ್ಸನ್ನು ತಟ್ಟಿಬಿಡುತ್ತವೆ. ಇಂಥ ವಿಡಿಯೋಗಳನ್ನು ನೋಡಿದಾಗ ಕ್ಷಣದಲ್ಲಿ ಕಣ್ಣಂಚಿನಲ್ಲಿ ಕಣ್ಣೀರು ತಾನಾಗಿಯೇ ಹರಿದು ಬರುತ್ತದೆ. ಸದ್ಯ ಇಲ್ಲಿ ನೋಡಲಿರುವ ವಿಡಿಯೋ ಸಹ ಇದೇ ರೀತಿಯ ಅನುಭವವನ್ನು ನೀಡುತ್ತದೆ.
ಪ್ರಸ್ತುತ ವಿಡಿಯೋ ತುಂಬಾ ಭಾವಕನನ್ನಾಗಿಸುತ್ತದೆ. ಈ ವಿಡಿಯೋ ತಂದೆ ತಾಯಿಯರನ್ನು ತುಂಬ ಪ್ರೀತಿಸುವವರಿಗಾಗಿದೆ ಎಂದು ಹೇಳಲು ಬಯಸುತ್ತೇನೆ. ಇಲ್ಲಿ ಮಗ ತಂದೆಗಾಗಿ ಒಂದು ವಸ್ತುವನ್ನು ಪ್ರೀತಿಯಿಂದ ಖರೀದಿಸಿದ್ದಾನೆ. ಅದೇ ವಸ್ತುವನ್ನು ತಂದೆಗೆ ಸರ್ಪ್ರೈಸ್ ರೂಪದಲ್ಲಿ ತೋರಿಸಲು ಮಗ ತಂದೆಯ ಕಣ್ಣುಗಳನ್ನು ಮುಚ್ಚಿಕೊಂಡು ಬಾಗಿಲಿಂದ ಹೊರಗೆ ತರುತ್ತಾನೆ. ಆಗ ಅಲ್ಲಿ ನಡೆಯುವ ಸುಂದರವಾದ ಹೃದಯ ತಟ್ಟುವ ದೃಶ್ಯವನ್ನು ವರ್ಣಿಸುವದಕ್ಕಿಂತ ಪ್ರತ್ಯಕ್ಷ ಕಣ್ಣುಗಳಿಂದ ನೀವೂ ಅನುಭವಿಸಿ ಈ ವಿಡಿಯೋದಲ್ಲಿ…
ನೋಡಿ ಈ ವಿಡಿಯೋ…
View this post on Instagram
ತಂದೆಗಾಗಿ ಮಗ ಮಾಡಿದ ಒಂದು ಸುಂದರ ಕೆಲಸದ ಈ ಭಾವುಕ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಗಾನೋ ಕಿ ದುನಿಯಾ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಮಿತ್ರರೇ ಈ ವಿಡಿಯೋ ಬಗ್ಗೆ ನಿಮ್ಮ ಒಪೀನಿಯನ್ ಏನು?