ಚಾಲೆಂಜ್! ನಿಮ್ಮ ಬೇಜಾರು ದೂರ ಮಾಡುವ ಸ್ಪೆಷಲ್ ವಿಡಿಯೋ, ನಿಮ್ಮ ಮೂಡ್ ಫ್ರೆಶ್ ಆಗಲಿಲ್ಲ ಅಂದ್ರೆ ಆವಾಗ ಹೇಳಿ.
ಪ್ರತಿಯೊಂದು ವ್ಯಕ್ತಿಯ ಹತ್ತಿರ ಏನಾದರೊಂದು ವಿಶೇಷ ಕಲೆ, ಕೌಶಲ್ಯ ಅಡಗಿರುತ್ತದೆ. ಇಂದಿನ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಆ ಅಡಗಿ ಕುಳಿತ ಕೌಶಲ್ಯಗಳು ನೆಟ್ಟಿಗರ ಮುಂದೆ ಪ್ರೆಸೆಂಟ್ ಆಗುತ್ತಿವೆ. ಒಂದು ವೇಳೆ ಆ ಕೌಶಲ್ಯಗಳು ಅಥವಾ ಚಟುವಟಿಕೆಗಳು ತುಂಬಾ ಹೃದಯ ಮುಟ್ಟುವಂತಿದ್ದರೆ ಆ ವಿಡಿಯೋದಲ್ಲಿಯ ದೃಶ್ಯಗಳು ಅಥವಾ ಫೋಟೋಗಳು ಕ್ಷಣದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತವೆ. ಸದ್ಯ ಇದೇ ರೀತಿಯ ಯುವತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಈ ವಿಡಿಯೋದಲ್ಲಿ ಯುವತಿಯು ತನ್ನ ಕೈಗಳಿಂದ ತುಂಬಾ ಸುಂದರವಾದ ಆಕ್ಟಿವಿಟಿ ಒಂದನ್ನು ಮಾಡಿ ತೋರಿಸಿದ್ದಾಳೆ. ಈ ವಿಡಿಯೋದಲ್ಲಿಯ ದೃಶ್ಯ ನೋಡುವುದೇ ಒಂದು ಸೊಬಗು ಎನಿಸುತ್ತದೆ.
ಪ್ರಸ್ತುತ ವಿಡಿಯೋದಲ್ಲಿ ಯುವತಿಯು ತನ್ನ ಸುಂದರವಾದ ಕೈ ಬೆರಳುಗಳಿಂದ ಸಂಗೀತಕ್ಕೆ ಅನುಗುಣವಾಗಿ ಚಲನವಲನೆಯನ್ನು ಮಾಡಿ ತೋರಿಸಿದ್ದಾಳೆ. ಈ ವಿಡಿಯೋ ನೋಡುವಾಗ ಮನುಷ್ಯ ತಾನಾಗಿಯೇ ಮಂತ್ರಮುಗ್ಧವಾಗುವುದು ಖಚಿತ. ಬೆರಳಗಳನ್ನು ನೋಡುವಾಗ ಇವುಗಳಲ್ಲಿ ಜೀವವಿದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ನೋಡುವವನಿಗೆ ಹುಟ್ಟುತ್ತದೆ. ಅಷ್ಟೊಂದು ಲೀಲಾಜಾಲವಾಗಿ ಕೈ ಬೆರಳುಗಳನ್ನು ಕೂದಲೇಳೆಯಷ್ಟೂ ತಪ್ಪದಂತೆ ವಿಧವಿಧವಾಗಿ ಡಿಸೈನ್ ಮಾಡಿ ತೋರಿಸಿದ್ದಾಳೆ. ಯುವತಿ ಮಾಡುತ್ತಿರುವ ಕೈ ಬೆರಳುಗಳ ಈ ಸುಂದರ ಆಟ ಎಷ್ಟೇ ಸಮಯ ಕಳೆದರೂ ಬೇಸರವಿಲ್ಲದೆ ನೋಡುವಂತೆಯೇ ಇದೆ. ಅಷ್ಟೊಂದು ಅದ್ಭುತವಾದ ವಿಡಿಯೋ ದೃಶ್ಯ ಇದಾಗಿದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ artstik _bros _ ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 17 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ ಹಾಗೂ ಸುಮಾರು 8 ಲಕ್ಷ 32 ಸಾವಿರಕ್ಕೂ ಹೆಚ್ಚು ಲೈಕ್ಸುಗಳನ್ನು ಪಡೆದಿದೆ.