Vairal Video; 180° ಯಲ್ಲಿ ನಾಯಿ ಇಷ್ಟೊಂದು ಆಸಕ್ತಿಯಿಂದ ನೋಡುತ್ತಿರುವದೇನು? ಆನಂದ್ ಮಹೀಂದ್ರ ಕೇಳುತ್ತಾರೆ…
ಮಹಿಂದ್ರ ಕಂಪನಿಯ ಮಾಲೀಕರಾದ ಆನಂದ್ ಮಹೀಂದ್ರಾ ಅವರು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ ಯಾವತ್ತೂ ಕೆಲವು ವಿಶೇಷ ವಿಡಿಯೋಗಳನ್ನು ತಮಾಷೆಯ ವಿಡಿಯೋ ಅಥವಾ ಫೋಟೋಗಳನ್ನು ಶೇರ್ ಮಾಡುತ್ತಾ ಇರುತ್ತಾರೆ. ಸಮಾಜದಲ್ಲಿ ಕಂಡು ಬಂದ ವಿಶೇಷ ದೃಶ್ಯಗಳನ್ನು ಮತ್ತೆ ಸಮಾಜದ ಉಳಿದ ಘಟಕವೂ ನೋಡಲಿ ಎಂಬ ಉದ್ದೇಶದಿಂದ ಶೇರ್ ಮಾಡುತ್ತಾ ಇರುತ್ತಾರೆ. ಸದ್ಯ ಒಂದು ನಾಯಿಯ ವಿಡಿಯೋ ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದಾಗ ನಿಜಕ್ಕೂ ತುಂಬಾ ತಮಾಷೆ ಎನಿಸುತ್ತದೆ. ಪ್ರಸ್ತುತ ವಿಡಿಯೋಗೆ ಅಷ್ಟೇ ತಮಾಷೆಯ ಕ್ಯಾಪ್ಷನ್ ಸಹ ನೀಡಿದ್ದಾರೆ.
ಪ್ರಸ್ತುತ ವಿಡಿಯೋದಲ್ಲಿ ನಾಯಿಯೊಂದು ಗೋಡೆಯ ಆಚೆಯ ದೃಶ್ಯವನ್ನು ನೋಡಲು ತುಂಬಾನೇ ಹಾತೊರೆಯುತ್ತಿದೆ. ಇದಕ್ಕಾಗಿ ನಾಯಿ ತುಂಬಾ ಕಟಿಪಿಟಿ ಬಿಡುತ್ತಿದೆ. ಗೋಡೆಯ ಆಚೆ ನಡೆದಿರುವ ದೃಶ್ಯ ಅದಕ್ಕೆ ಸರಿಯಾಗಿ ಕಾಣದೆ ಇದ್ದಾಗ ತನ್ನ ಕಾಲುಗಳನ್ನು ಹಿಂದಿರುವ ತೆಂಗಿನ ಮರಕ್ಕೆ ಮತ್ತು ಮುಂದಿನ ಗೋಡೆಗೆ ಆನಿಸಿ ಹಾಗೆಯೇ ಸ್ವಲ್ಪ ಸ್ವಲ್ಪ ಎನ್ನುತ್ತಾ ಮೇಲೆ ಏರುತ್ತಾ ಹೋಗಿದೆ. ಕೊನೆಗೆ ನಾಯಿ ಸಂಪೂರ್ಣವಾಗಿ 180 ಡಿಗ್ರಿ ಪೊಸಿಷನ್ ನಲ್ಲಿ ನಿಂತುಬಿಡುತ್ತದೆ. ಅಷ್ಟಕ್ಕೂ ಇಷ್ಟೊಂದು ಪರಿಶ್ರಮ ಪಟ್ಟು ಅಲ್ಲಿ ಕಾಣುವ ದೃಶ್ಯವಾದರೂ ಏನಿರಬಹುದು ಎಂಬ ಪ್ರಶ್ನೆ ನೆಟ್ಟಿಗರಿಗೆ ಬಿದ್ದಿದೆ.
ಆನಂದ್ ಮಹೀಂದ್ರಾ ಅವರು ಮಾತ್ರ ಈ ವಿಡಿಯೋಗೆ ತುಂಬಾ ತಮಾಷೆಯ ಕ್ಯಾಪ್ಶನ್ ನೀಡಿದ್ದಾರೆ. ಅವರು “ಭವಿಷ್ಯದಲ್ಲಿ ಟಿ20 ವರ್ಲ್ಡ್ ಕಪ್ ಫೈನಲ್ ಪಂದ್ಯ, ಯಾರ ಮಧ್ಯೆ ನಡೆಯಲಿದೆ ಎಂದು ನಾಯಿಗೆ ಕೇಳಲಾಗಿ ನಾಯಿಯು ಉತ್ತರಿಸಲು ಈ ದಾರಿಯನ್ನು ಹುಡುಕಿದೆ ಎಂದು ಬರೆದಿದ್ದಾರೆ. ಪ್ರಸ್ತುತ ಈ ವಿಡಿಯೋವನ್ನು ಇಲ್ಲಿಯವರೆಗೆ 8 ಲಕ್ಷ 48 ಸಾವಿರ ಜನರು ವೀಕ್ಷಿಸಿದ್ದಾರೆ.
ವೀಡಿಯೋ ನೋಡಿ
I asked this pooch to look into the future and tell me who would be in the finals of the #T20WorldCup2022 It figured out this ingenious way to look over the ‘wall’ of the present. What do you think it saw? 😊 pic.twitter.com/a5H5OPRiVU
— anand mahindra (@anandmahindra) November 6, 2022