Video; ರೋಹಿತ್ ಶರ್ಮಾ ಇಂಟರ್ವ್ಯೂ ನೀಡುವಾಗ ಅವರ ಹಿಂದಿನ ಬದಿಗೆ R ಅಶ್ವಿನ್ ಮಾಡುತ್ತಿರುವ ಕೆಲಸ ನೋಡಿ..🤣
T20 World Cup 2022: ಟೀಮ್ ಇಂಡಿಯಾ ತನ್ನ ಗ್ರೂಪಿನ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಪರಾಭವಗೊಳಿಸಿ ಗ್ರೂಪ್ 2 ರಲ್ಲಿ ಅಗ್ರಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಈಗ ಪ್ರಸ್ತುತ ಟಿ20 ವಿಶ್ವಕಪ್ 2022 ರ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಜೊತೆಗೆ ಸೆಣೆಸಲಿದೆ. ಜಿಂಬಾಂಬ್ವೆ ತಂಡದೊಂದಿಗೆ ಭಾರತದ ಅನೇಕ ನೆನಪಿನ ಕ್ಷಣಗಳು ಕೂಡಿಕೊಂಡಿರುವಾಗ ಸದ್ಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲಾಗುತ್ತಿದೆ. ಈ ವಿಡಿಯೋದಲ್ಲಿ ಭಾರತದ ಸ್ಪಿನ್ನರ್ ಅಶ್ವಿನ್ ಅವರು ಬೇರೆ ಕೆಲಸ ಮಾಡುತ್ತಿದ್ದಾರೆ ಅದು ರೋಹಿತ್ ಶರ್ಮ ಅವರ ಹಿಂದೆಯೇ. ಈ ವಿಚಿತ್ರ ಸೀನ್ ಕ್ಯಾಮೆರಾದಲ್ಲಿ ರೆಕಾರ್ಡ ಆಯ್ತು, ಬನ್ನಿ ಏನದು ನೋಡೋಣ.
ರೋಹಿತ್ ಶರ್ಮಾ ಮತ್ತು ಜಿಂಬಾಂಬ್ವೆ ತಂಡದ ನಾಯಕ ಗ್ರೇಗ್ ಇರ್ವಿನ್ ಇಬ್ಬರು ಟಾಸ್ ಗಾಗಿ ಇಯಾನ್ ಬಿಷಪ್ ಜೊತೆಗೆ ನಿಂತಿರುವಾಗ ಅವರ ಹಿಂದೆಯೇ ಸ್ವಲ್ಪ ಅಂತರದಲ್ಲಿ ಆರ್ ಅಶ್ವಿನ್ ಅವರು ಸ್ವಲ್ಪ ವಿಚಿತ್ರ ಚಟುವಟಿಕೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಅಶ್ವಿನ್ ಅವರು ತಮ್ಮ ಜಾಕೆಟ್ ಗಳ ವಾಸನೆಯನ್ನು (ಮೂಸಿ) ನೋಡುತ್ತಿದ್ದಾರೆ. ಪ್ರಸ್ತುತ ಟ್ವಿಟರ್ ಯೂಸರ್ ನೊಬ್ಬ ಅಶ್ವಿನ್ ಅವರ ಈ ವಿಡಿಯೋವನ್ನು ತನ್ನ ಅಕೌಂಟಿನಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ಇದನ್ನು ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ನಲ್ಲಿ ಮೀಮ್ಸ್ ಗಳ ಅಕ್ಷರಶಃ ಪ್ರವಾಹ ಹರಿದು ಬಂತು. ವಿಡಿಯೋ ನೋಡಿದ ನಂತರ ಕೆಲವರು ಇದನ್ನು ತುಂಬಾ ಸಾಮಾನ್ಯವೆಂದು ಪ್ರತಿಕ್ರಿಸಿದರೆ ಇನ್ನು ಕೆಲವರು ಈ ರೀತಿ ಪ್ರತಿಯೊಬ್ಬ ವ್ಯಕ್ತಿ ತಮ್ಮ ಜೀವನದಲ್ಲಿ ಮಾಡಿಯೇ ಮಾಡುತ್ತಾನೆ ಎಂದಿದ್ದಾರೆ. ಕೆಲವರಂತೂ ಈ ದೃಶ್ಯವನ್ನು ನೋಡಿ ತಮ್ಮ ಹಾಸ್ಟೆಲ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನೋಡಿ ಈ ವಿಡಿಯೋ…
Ashwin Anna Supremacy
This is the right way to find your clothes pic.twitter.com/a9YSakerU4
— chintubaba (@chintamani0d) November 7, 2022
ಚಿಂಟುಬಾಬಾ ಹೆಸರಿನ ಟ್ವಿಟರ್ ಅಕೌಂಟ್ ನಲ್ಲಿ ಒಂದು ಮೀಮ್ ತುಂಬಾ ತಮಾಷೆಯಾಗಿ ಶೇರ್ ಮಾಡುತ್ತಾ, ಅಶ್ವಿನ್ ಅಣ್ಣ ಸುಪ್ರಿಮಿಸಿ. ನಿಮ್ಮ ಬಟ್ಟೆಗಳನ್ನು ಶೋಧಿಸುವ ಈ ಪದ್ಧತಿ ತುಂಬಾ ಚೆನ್ನಾಗಿದೆ ಎಂದಿದ್ದಾನೆ. ಈ ರೀತಿ ನೇಟಿಜನ್ಸ್ ಗಳು ತುಂಬಾ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
That's how bachelor's select their clothes in hostel
— abhishek (@abhibhai) November 7, 2022