ಕಾಂತಾರ! World Wide Box Office Collection: ಕಾಂತಾರದ ಹಣ ಗಳಿಕೆಯ ವೇಗ ಬುಲ್ಲೆಟ್ ಟ್ರೈನ್ ನಂತೆ; ಈವರೆಗೆ ಗಳಿಸಿದ ಹಣ ಎಷ್ಟು?

ಬೆಂಗಳೂರು: ಮಣಿರತ್ನಂ ಅವರ ಐತಿಹಾಸಿಕ ಚಲನಚಿತ್ರ ಪಾನ್ನಿಯಿನ್ ಸೆಲ್ವನ್ -1 ಚಿತ್ರ ಜೊತೆಗೆ ಕನ್ನಡದ ಬ್ಲಾಕ್ಬಸ್ಟರ್ ಚಲನಚಿತ್ರ ಕಾಂತಾರ ಸಪ್ಟೆಂಬರ್ 30 ರಂದು ರಿಲೀಸ್ ಆಯ್ತು. ಅಂದಿನಿಂದ ಕನ್ನಡದ ಈ ಕಾಂತರ ಚಿತ್ರ ದಿನಂಪ್ರತಿ ಒಂದೊಂದು ಹೊಸ ದಾಖಲೆಯನ್ನು ಮಾಡುತ್ತಾ ದಾಪುಗಾಲು ಇಡುತ್ತಾ ಮುನ್ನುಗ್ಗುತ್ತಿದೆ. ಕನ್ನಡದಲ್ಲಿ ಈ ಚಿತ್ರ ಯಶಸ್ಸು ಗಳಿಸಿದ ನಂತರ ರಿಷಬ್ ಶೆಟ್ಟಿ ಅವರು ಈ ಚಿತ್ರವನ್ನು ನಂತರ ತೆಲುಗು, ತಮಿಳ್, ಮಲಯಾಳಿ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಮಾಡಿದರು. ಪ್ರಸ್ತುತ ಚಿತ್ರವನ್ನು ಜನರು ಪ್ರತಿಯೊಂದು ಭಾಷೆಯಲ್ಲಿ ಇಷ್ಟಪಟ್ಟಿದ್ದಾರೆ.

ಬಾಲಿವುಡ್ ಬಾಲ ಮುರಿದ ಕಾಂತಾರ…

ಹಿಂದಿಯಲ್ಲಿ ಈ ಚಿತ್ರವು ನೂರು ಕೋಟಿ ರೂಪಾಯಿಗಳ ಗಳಿಕೆಯನ್ನು ತಲುಪಲು ತುಂಬಾ ಹತ್ತಿರ ಬಂದಿದೆ. ಕನ್ನಡದಲ್ಲಿ ಈಗಾಗಲೇ 150 ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿದೆ. ರಿಷಬ್ ಶೆಟ್ಟಿ ಅವರ ಈ ಚಿತ್ರದ ಮುಂದೆ ಬಾಲಿವುಡ್ ನಲ್ಲಿ ತೆರೆ ಕಂಡ ಹೊಸ ಫಿಲಂಗಳು ಹೇಳಹೆಸರಿಲ್ಲದಂತೆ ನೆಲಕಚ್ಚಿವೆ.

ಜಗತ್ತಿನಾದ್ಯಂತ ಕಾಂತಾರ ಗಳಿಸಿದ ಗಳಿಕೆ…

ಹೊಂಬಾಳೆ ಫಿಲಂ ಪ್ರೊಡಕ್ಷನ್ ನಲ್ಲಿ ತಯಾರಾದ ಕಾಂತರ ಚಿತ್ರವು ಹಳೆಯ ಚಿತ್ರಗಳ ಅನೇಕ ದಾಖಲೆಗಳನ್ನು ಈಗಾಗಲೇ ಮುರಿದಿದೆ. ಜಗತ್ತಿನಾದ್ಯಂತ ಈ ಚಿತ್ರವನ್ನು ರಸಿಕರು ತುಂಬಾ ಇಷ್ಟಪಡುತ್ತಿದ್ದಾರೆ. ಚಿತ್ರವು ಈಗಾಗಲೇ 300 ಕೋಟಿ ರೂಪಾಯಿಗಳ ಗಳಿಕೆ ಮಾಡಿದ್ದು ಸದ್ಯ ಜಗತ್ತಿನಾದ್ಯಂತ ಇಲ್ಲಿಯವರೆಗೆ 342 ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿದೆ. ಸದ್ಯಕ್ಕಂತೂ ಈ ಚಿತ್ರವು ಗಳಿಕೆಯಲ್ಲಿ ಬುಲೆಟ್ ಟ್ರೈನ್ ನಂತೆ ವೇಗ ಪಡೆದಿದೆ ಎಂದರೆ ತಪ್ಪಾಗಲಾರದು. ಈ ಚಿತ್ರದ ಗಳಿಕೆಯ ಸದ್ಯದ ವೇಗ ನೋಡಿದರೆ ಅತಿ ಶೀಘ್ರದಲ್ಲಿಯೇ 400 ಕೋಟಿ ರೂಪಾಯಿಗಳ ಎಲ್ಲೆಯನ್ನು ಮೀರಲಿದೆ.

ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಕಳೆದ 25 ದಿನಗಳಲ್ಲಿ ಕಾಂತರಾದ ಗಳಿಕೆ.

ಜಗತ್ತಿನಾದ್ಯಂತ ಈ ಚಿತ್ರವು ಪ್ರಶಂಸೆಗೆ ಪಾತ್ರರಾಗಿದ್ದಲ್ಲದೆ ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರವು ಅನೇಕ ಬಾಲಿವುಡ್ ಚಿತ್ರಗಳಿಗೆ ನೀರು ಕುಡಿಸಿದೆ. ಪ್ರಸ್ತುತ ಚಿತ್ರವು ರಿಲೀಸ್ ಆಗಿ ಒಂದು ತಿಂಗಳಷ್ಟೇ ಆಗಿದೆ. ಈ ಚಿತ್ರವು ಅಕ್ಷಯ್ ಕುಮಾರ್ ಅವರ ರಾಮ್ ಸೇತು, ಥ್ಯಾಂಕ್ ಗಾಡ್, ಫೋನ್ ಭೂತ್ ಡಬಲ್ ಎಕ್ಸ್ ಎಲ್ ಅಂತಹ ಚಿತ್ರಗಳಿಗೆ ಪುಡಿಪುಡಿ ಮಾಡಿದೆ. ಕಾಂತಾರ ಚಿತ್ರವು 25 ದಿನಗಳಲ್ಲಿ 270 ಕೋಟಿ ರೂಪಾಯಿಗಳ ಬಿಜಿನೆಸ್ ಮಾಡಿದೆ. ಹಿಂದಿಯಲ್ಲಿ 64.1 ಕೋಟಿ, ತೆಲುಗಿನಲ್ಲಿ 38.63 ಕೋಟಿ, ಮಲಯಾಳಂ ನಲ್ಲಿ 9.8 ಮತ್ತು ತಮಿಳಿನಲ್ಲಿ 6.61 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿದೆ. ರಿಷಬ್ ಶೆಟ್ಟಿ ಅವರ ಪ್ರಸ್ತುತ ಈ ಕಾಂತರ ಚಿತ್ರ ಜಗತ್ತಿನಲ್ಲಿ ಒಂದು ಹೊಸ ಇತಿಹಾಸವನ್ನೇ ನಿರ್ಮಿಸುವ ಹಾಗಿದೆ.