ಸ್ಕೂಟರ್ ಮೇಲಿನ ಅಕ್ಕಳ ಈ ಬ್ರೇಕ್ ಸಿಸ್ಟಮ್ ನೋಡಿ ಸಖತ್ ಸೂಪರ್ ಆಗಿದೆ; ಇಷ್ಟೆಲ್ಲಾ ಪ್ರಿಕಾಷನ್ ತೆಗೆದುಕೊಂಡರೂ..! 🤦🤦🤷

ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯರ ಬೈಕ್ ನಡೆಸುವ ಪದ್ಧತಿಯನ್ನು ನೆಟ್ಟಿಗರು ಸಾಕಷ್ಟು ಬಾರಿ ತಮಾಷೆಗೆ ಗುರಿ ಪಡಿಸುತ್ತಾರೆ. ಸದ್ಯ ಇದೇ ರೀತಿಯ ಒಂದು ತಮಾಷೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವದನ್ನು ನೋಡಬಹುದು.

ಪ್ರಸ್ತುತ ವಿಡಿಯೋದಲ್ಲಿ ಹುಡುಗಿಯೊಬ್ಬಳು ಸ್ಕೂಟರ್ ಮೇಲೆ ಪ್ರವಾಸ ಮಾಡುತ್ತಿದ್ದಾಳೆ. ಈಕೆ ಸುಮಾರು ಅರ್ಧ ಕಿಲೋಮೀಟರ್ ನಿಂದಲೇ ತನ್ನ ಕಾಲುಗಳನ್ನು ಬ್ರೇಕ್ ರೀತಿಯಲ್ಲಿ ನೆಲದ ಮೇಲೆ ಜಾರಿಸುತ್ತ ರಸ್ತೆಯ ಮೇಲೆ ನಡೆಸಿದ್ದಾಳೆ. ಮುಂದೆ ಯಾವುದಾದರೂ ಆಕಸ್ಮಿಕ ಘಟನೆ ಎದುರಾದರೂ ಫಕ್ಕನೆ ಬೈಕ್ ಮೇಲೆ ಹತೋಟಿ ಸಾಧಿಸಲು ಈ ಐಡಿಯಾ ಇರಬಹುದು. ಆದರೆ ಅಲ್ಲಿ ನಡೆಯಬಾರದ ಘಟನೆ ಕೊನೆಗೂ ನಡೆದೇ ಹೋಗುತ್ತದೆ. ಯುವತಿ ಹಾಗೆಯೇ ಹೋಗುವಾಗ ಆಕೆಯ ಬಲಭಾಗದಿಂದ ಕಾರೊಂದು ಎಂಟ್ರಿ ಮಾಡುತ್ತದೆ. ಅದನ್ನು ನೋಡಿ ಯುವತಿ ತನ್ನ ಬೈಕ್ ನಿಲ್ಲಿಸಬೇಕಾಗಿತ್ತು ಆದರೆ ಅದ್ಹೇಗೆ ನಿಲ್ಲುತ್ತಾಳೆ ಅಕ್ಕ? ವಿಡಿಯೋ ವೈರಲ್ ಆಗಲು ಒಳ್ಳೆಯ ಕಂಟೆಂಟ್ ಕೊಡಬೇಕಲ್ಲ? ಮತ್ತೇನು ಎದುರಿಗೆ ಕಾರು ಕಂಡರೂ ಹಾಗೂ ಸುಮಾರು ಅರ್ಧ ಕಿಲೋಮೀಟರ್ ನಿಂದ ಕಾಲು ನೆಲದ ಮೇಲೆ ಎಳೆಯುತ್ತಾ ಬಂದರೂ ಬೈಕ್ ಕಂಟ್ರೋಲ್ ಮಾಡದೆ ನೇರ ಕಾರಿಗೆ ಹಾಯಿಸಿಯೇ ಬಿಟ್ಟಳು ಅಕ್ಕ. ನೆಟ್ಟಿಗರು ನಗಲು ಹಾಗೂ ಟ್ರೊಲ್ ಮಾಡಲು ಮತ್ತೊಂದು ಕಂಟೆಂಟ್ ಕೊಟ್ಟೇ ಬಿಟ್ಟಳು ಅಕ್ಕ.

ವಿಡಿಯೋ ನೋಡಿ

 

View this post on Instagram

 

A post shared by Asif Khan (@mr.khansab06)

ಈ ದೃಶ್ಯವನ್ನು ಹಿಂದಿನಿಂದ ಯಾರೋ ಒಬ್ಬರು ರಿಕಾರ್ಡ್ ಮಾಡಿಕೊಂಡು ಸೋಷಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ mr.khansab06 ಹೆಸರಿನ ಐಡಿಯಿಂದ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇಲ್ಲಿಯವರೆಗೆ 11.9 ಮಿಲಿಯನ್ ಜನರು ನೋಡಿ ನಕ್ಕಿದ್ದಾರೆ ಜೊತೆಗೆ 8 ಲಕ್ಷ 25 ಸಾವಿರ ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.