Video; 2 ಜೀವ ಉಳಿಸಿದ ರಿಯಲ್ ಹೀರೋ! ಈ ಡ್ರೈವರ್ ನ ಸಮಯಪ್ರಜ್ಞೆ & ಗ್ರಹಿಸಿದ ಪೂರ್ವಾನುಮಾನಕ್ಕೆ ದೊಡ್ಡ ಸೆಲ್ಯೂಟ್ !
ಕೆಲವೊಂದು ಸಲ ಅನೇಕ ವಿಚಿತ್ರ ಹಾಗೂ ನಡೆಯ ಬಾರದ ಘಟನೆಗಳು ನಮ್ಮ ಕಣ್ಣುಗಳ ಮುಂದೆಯೇ ನಡೆಯುತ್ತಿದ್ದರೂ ಅವುಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದೇ ತಿಳಿಯುವುದಿಲ್ಲ. ಅಂಥ ಸಂದರ್ಭದಲ್ಲಿ ಅಷ್ಟೊಂದು ಗಾಬರಿಯಾಗಿ ಬಿಡುತ್ತಾನೆ ಮನುಷ್ಯ. ಆದರೆ ಕೆಲವರು ಮಾತ್ರ ಅಂಥ ಸಮಯದಲ್ಲಿ ತುಂಬಾ ಚಾತುರ್ಯದಿಂದ ವರ್ತಿಸಿ ಒಮ್ಮೆಲೇ ದೊಡ್ಡ ಮನುಷ್ಯರಾಗಿ ಬಿಡುತ್ತಾರೆ.
ಸದ್ಯ ಇಲ್ಲಿ ನೋಡುವ ವಿಡಿಯೋ ಒಂದು ಇದೇ ರೀತಿಯದ್ದಾಗಿದೆ. ಇಲ್ಲಿ ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವಿನೊಂದಿಗೆ ಬ್ರಿಡ್ಜ್ ಮೇಲಿಂದ ನಡೆದು ಹೋಗುತ್ತಿರುತ್ತಾಳೆ. ಈ ಸಂದರ್ಭದಲ್ಲಿ ಆಕೆಯ ಬದಿಯಿಂದ ಮುಂದೆ ಹೋಗುತ್ತಿರುವ ಬಸ್ಸಿನ ಡ್ರೈವರ್ ನ ದೃಷ್ಟಿ ಅವರ ಮೇಲೆ ಬೀಳುತ್ತದೆ. ಆಗ ಆತನಿಗೆ ಏನೋ ಮನದಲ್ಲಿ ಒಂದು ಸಂಶಯ ಬಂದುಬಿಡುತ್ತದೆ. ಹೀಗಾಗಿ ತನ್ನ ಬಸ್ಸನ್ನು ಮೊದಲು ನಿಧಾನಿಸಿ ಆನಂತರ ಬ್ರಿಡ್ಜ್ ಮೇಲೆ ನಿಲ್ಲಿಸಿ ಬಿಡುತ್ತಾನೆ. ಇಲ್ಲಿಯ ದೃಶ್ಯ ನೋಡಿದಾಗ ಡ್ರೈವರ್ ಮನದಲ್ಲಿ ಏನು ಯೋಚನೆ ಮಾಡಿದ್ದನೋ ಅದೇ ರೀತಿ ನಡೆಯುವ ಹಾಗಿರುತ್ತದೆ.
ಇಲ್ಲಿ ತಾಯಿಯು ತನ್ನ ಮಗುವಿನೊಂದಿಗೆ ಬ್ರಿಡ್ಜ್ ಮೇಲಿಂದ ನದಿಗೆ ಆಹುತಿ ನೀಡಬೇಕು ಎನ್ನುವಷ್ಟರಲ್ಲಿಯೇ ಇದನ್ನೆಲ್ಲ ಮೊದಲೇ ಯೋಚಿಸಿದ ಬಸ್ಸಿನ ಡ್ರೈವರ್ ಕ್ಷಣಾರ್ಧದಲ್ಲಿ ಬಸ್ಸಿನಿಂದ ಸರ್ರನೆ ಕೆಳಗಿಳಿದು ಆ ಮಹಿಳೆ ಮತ್ತು ಮಗುವನ್ನು ಜೀವಸಹಿತ ಉಳಿಸುವಲ್ಲಿ ಯಶಸ್ವಿಯಾಗುತ್ತಾನೆ. ಈ ಸಂಪೂರ್ಣ ಘಟನೆಯ ದೃಶ್ಯವೂ ಬಸ್ಸಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಸ್ಸಿನ ಡ್ರೈವರ್ ಇಲ್ಲಿ ತೋರಿಸಿದ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆ ಎರಡು ಜೀವಗಳು ಉಳಿಯಲಿಕ್ಕೆ ಕಾರಣವಾದವು ಎಂದು ಹೇಳಬಹುದು.
ವಿಡಿಯೋ ನೋಡಿ
https://twitter.com/TheFigen_/status/1591062787446706178?s=20&t=jeVt1gga7Z7FrJ6gIO0VOg
ಈ ಸುಂದರವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ Figen ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಸುಮಾರು 6 ಲಕ್ಷ ವೀಕ್ಷಣೆಯನ್ನು ಪಡೆದಿದೆ. ಅಷ್ಟೇ ಅಲ್ಲ ಈ ವಿಡಿಯೋವನ್ನು 2 ಲಕ್ಷ 24 ಸಾವಿರ ಜನರು ಲೈಕ್ ಮಾಡಿದ್ದಾರೆ.