ಅಣ್ಣನ ಜವಾಬ್ದಾರಿಯನ್ನು ಬಲು ಗಂಭೀರವಾಗಿ ನಿಭಾಯಿಸುತ್ತಿರುವ ಅಣ್ಣನ ಮುದ್ದಾದ ವೈರಲ್ ವಿಡಿಯೋ!
ಮಕ್ಕಳ ವಿಡಿಯೋಗಳು ಕ್ಷಣದಲ್ಲಿ ನೋಡುಗರ ಮನಸ್ಸನ್ನು ಗೆಲ್ಲುತ್ತವೆ. ಅಷ್ಟೇ ಏಕೆ ಈ ವಿಡಿಯೋಗಳು ಕೆಲವೇ ಗಂಟೆಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತವೆ. ಮಕ್ಕಳು ಮಾಡುವ ಕೆಲಸಗಳೇ ಹಾಗಿರುತ್ತವೆ. ಈ ಕೆಲಸಗಳನ್ನು ನೋಡಲು ಕೆಲವೊಮ್ಮೆ ತಮಾಷೆ ಎನಿಸಿದರೆ ಇನ್ನೂ ಕೆಲವೊಮ್ಮೆ ಸಖತ್ ಕೋಪವೂ ತರುತ್ತವೆ. ಸದ್ಯ ಇಲ್ಲಿ ನೋಡಲಿರುವ ವಿಡಿಯೋ ಒಂದು ಇದೇ ರೀತಿಯದ್ದಾಗಿದೆ. ಈ ವಿಡಿಯೋ ನೋಡಿದ ನಂತರ ನಗು ತಡೆದುಕೊಳ್ಳುವ ಕಷ್ಟ.
ಮನೆಯಲ್ಲಿ ಪುಟ್ಟ ಹಸುಗೂಸು ಇದ್ದರೆ ಆ ಮಗುವಿನ ಕಾಳಜಿ ಎಲ್ಲರೂ ತೆಗೆದುಕೊಳ್ಳುತ್ತಾರೆ. ಆ ಹಸುಗೂಸಿನ ಪುಟ್ಟ ಅಕ್ಕ/ಅಣ್ಣನು ಸಹ ತುಂಬಾ ಕಾಳಜಿ ಮಾಡುತ್ತಾರೆ. ಇದನ್ನೇ ತೋರಿಸುವ ವಿಡಿಯೋ ಒಂದು ಸದ್ಯ ಇಲ್ಲಿ ನೋಡಬಹುದಾಗಿದೆ. ಕೂಸಿನ ಅಣ್ಣ ಇಲ್ಲಿ ತನ್ನ ಸೋದರನಿಗೆ ಕೆಳಗೆ ಬೋರಲಾಗಿ ಮಲಗಿಸಿ ಮೈಯೆಲ್ಲಾ ಪೌಡರ್ ಲೇಪಿಸುತ್ತಿದ್ದಾನೆ. ಆತ ಪೌಡರ್ ಲೇಪಿಸುವ ಬಗೆಯನ್ನೊಮ್ಮೆ ನೋಡಿ ಎಷ್ಟೊಂದು ಕಾಳಜಿಯಿಂದ ಈ ಜವಾಬ್ದಾರಿಯುತ ಕೆಲಸವನ್ನು ನಿಭಾಯಿಸುತ್ತಿದ್ದಾನೆ ಈ ವಿಡಿಯೋದಲ್ಲಿ…👇
View this post on Instagram
ಪ್ರಸ್ತುತ ಈ ಸುಂದರ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಬೇಬಿಪಾರ್ಕ್ ಆಫಿಸಿಯಲ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ದಾಖಲೆಯ 41.7 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಈ ಮುದ್ದಾದ ವಿಡಿಯೋಗೆ 1.3 ಮಿಲಿಯನ್ ನೆಟ್ಟಿಗರು ಲೈಕ್ ಸಹ ಮಾಡಿದ್ದಾರೆ.